Advertisement

ಬಸವಣ್ಣರ ವಚನಗಳು ಸಾರ್ವಕಾಲಿಕ

12:33 PM Apr 30, 2017 | Team Udayavani |

ಮೈಸೂರು: ಸಮಾಜದಲ್ಲಿ ಎಲ್ಲಾ ಜಾತಿ, ಧರ್ಮವನ್ನು ಮೀರಿ ನಿಂತಿರುವ ಬಸವಣ್ಣರ ಜಯಂತಿಯನ್ನು ಸಂಕುಚಿತ ಮನೋ ಭಾವವನ್ನು ಮರೆತು ಅರ್ಥ ಪೂರ್ಣವಾಗಿ ಆಚರಿಸಬೇಕು ಎಂದು ಸಂಸದ ಪ್ರತಾಪ್‌ಸಿಂಹ ಹೇಳಿದರು.

Advertisement

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಖೀಲ ಭಾರತ ವೀರಶೈವ ಮಹಾಸಭಾ, ವೀರಶೈವ ಸಂಘ-ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದಿಂದ ನಗರದ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಣ್ಣರ ವಚನಗಳು ಸಾರ್ವಕಾಲಿಕ ವಾಗಿದ್ದು, ಸರಳ ಮತ್ತು ಸ್ಪಷ್ಟವಾಗಿ ಬರೆಯ ಲಾಗಿರುವ ಬಸವಣ್ಣರ ವಚನಗಳು ಸಾಮಾನ್ಯ ಜನರಿಗೂ ಅರ್ಥವಾಗಲಿದೆ. ಹೀಗಾಗಿ ಬಸವಣ್ಣರ ಬಗ್ಗೆ ಮಾತನಾಡುವುದೆಂದರೆ, ವೀರಾಜಮಾನವಾಗಿ ಹೊಳೆಯುವ ಸೂರ್ಯನನ್ನು ಕುರಿತು ವರ್ಣಿಸಿದಂತಾಗ ಲಿದ್ದು, ಬಸವಣ್ಣನವರು ಸದಾ ಪ್ರಕಾಶ ಮಾನವಾಗಿ ಹೊಳೆಯುವ ಸೂರ್ಯ ಎಂದು ಬಣ್ಣಿಸಿದರು.

ಪ್ರತಿನಿತ್ಯ ಉದಯಿಸುವ ಸೂರ್ಯ ಜಗತ್ತಿಗೆ ಬೆಳಕು ನೀಡಿದರೆ, ಬಸವಣ್ಣನವರು ತಮ್ಮ ವಚನಗಳ ಮೂಲಕ ಬೆಳಕು ಚೆಲ್ಲಿದವರು. ಆ ಮೂಲಕ ಸಮಾಜದಲ್ಲಿ ಅಂಧಕಾರದಲ್ಲಿದ್ದವರಿಗೆ ಉತ್ತಮ ಮಾರ್ಗ ವನ್ನು ತೋರಿರುವ ಬಸವಣ್ಣನವರ ಜಯಂತಿ ಪ್ರತಿಯೊಬ್ಬರು ಸಂತಸದಿಂದ ಆಚರಣೆ ಮಾಡಬೇಕಿದೆ.

ಈ ಹಿನ್ನೆಲೆ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿ ಸುವಂತೆ ಸೂಚಿಸಿರುವುದು ನಿಜಕ್ಕೂ ಸಂತಸ ನೀಡಿದ್ದು, ಈ ಆದೇಶ ಹೊರಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಜಾnನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಮಾತನಾಡಿ, ಬಸವಣ್ಣರ ವಚನ ಸಾಹಿತ್ಯ ಕೇವಲ ಸಾಹಿತ್ಯ ವಾಗಿರದೆ, ಸಮಾಜದ ಮೇಲೆ ಗಾಢವಾದ ಪರಿಣಾಮ ಬೀರಿದೆ.

Advertisement

ಸಾಮಾನ್ಯವಾಗಿ ಸಾಹಿತ್ಯ ಪ್ರಬಂಧವಿದ್ದಂತೆ, ಆದರೆ ವಚನ ಸಾಹಿತ್ಯ ಭಿನ್ನವಾಗಿದ್ದು, ಸಾಹಿತ್ಯ ತನ್ನ ಮೇಲೆ ತಾನೇ ಬೆಳಕು ಚೆಲ್ಲಿದರೆ, ವಚನಗಳು ಮತ್ತೂಬ್ಬರ ಮೇಲೆ ಬೆಳಕು ಚೆಲ್ಲಲ್ಲಿದೆ. ಈ ನಿಟ್ಟಿನಲ್ಲಿ ಜನರ ಅನುಭವಗಳ ಆಡು ನುಡಿಯಾಗಿ ವಚನ ಸಾಹಿತ್ಯವಿದ್ದು, ಬಸವಣ್ಣ ಎಲ್ಲರ ಹೃದಯ, ನಾಲಿಗೆ ತೆರೆಯುವಂತೆ ಮಾಡಿದ್ದಾರೆ. ವಚನ ಸಾಹಿತ್ಯವನ್ನು ಓದದಿದ್ದರೆ ಕನ್ನಡ ಸಾಹಿತ್ಯ ಅರ್ಥವಾಗುವುದಿಲ್ಲ ಎಂದು ಹೇಳಿದರು.

ಸಂಸದ ಆರ್‌.ಧ್ರುವನಾರಾಯಣ್‌ ಮಾತನಾಡಿ, ಇಡೀ ಸಮಾಜ ಮೌಡ್ಯತೆ, ಅಸ್ಪೃಶ್ಯತೆಯಲ್ಲಿ ಮುಳುಗಿದ್ದ ಕಾಲಘಟ್ಟ ದಲ್ಲಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಕತ್ತಲೆಯಿಂದ ಬೆಳಕು ತೋರಿ ದರು. ಕಾಯಕವೇ ಕೈಲಾಸ ಎಂಬ ವಚನ ಗಳನ್ನು ಸಾರುತ್ತಲೇ ಕಾಯಕ ಮತ್ತು ದಾಸೋಹದ ಕಾರ್ಯ ಮಾಡಿ, ಜಗತ್ತಿಗೆ ಮಾದರಿಯಾಗಿದ್ದಾರೆ. ಸಮಾಜದಲ್ಲಿದ್ದ ಅಂಕು-ಡೊಂಕುಗಳನ್ನು ವಚನಕಾರರು ತಿದ್ದಿದ್ದು, ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಮಾಜ ಮತ್ತು ಜೀವನ ಸುಧಾರಣೆಯಾಗಲಿದೆ ಎಂದರು. 

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ಶಾಸಕರಾದ ವಾಸು, ಜಿ.ಟಿ.ದೇವೇಗೌಡ, ಎಂ.ಕೆ.ಸೋಮ ಶೇಖರ್‌, ಉಪಸಭಾಪತಿ ಮರಿತಿಬ್ಬೇ ಗೌಡ, ಮೇಯರ್‌ ಎಂ.ಜೆ.ರವಿಕುಮಾರ್‌, ಉಪ ಮೇಯರ್‌ ರತ್ನ ಲಕ್ಷ್ಮಣ್‌, ಅರಗು ಮತ್ತು ಬಣ್ಣ ಕಾರ್ಖಾನೆ ಅಧ್ಯಕ್ಷ ಎಚ್‌.ಎ. ವೆಂಕಟೇಶ್‌, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌, ಜಿಪಂ ಉಪಾಧ್ಯಕ್ಷ ಜಿ.ನಟರಾಜ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next