ಗಂಗಾವತಿ: ಜಗತ್ತು ಇರುವ ತನಕ ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳು ವಿಶ್ವಮಾನ್ಯತೆ ಪಡೆದಿದ್ದು, ಅವುಗಳ ಆಚರಣೆಯಿಂದ ಸರ್ವರೂ ಸುಖವಾಗಿರಲು ಸಾಧ್ಯ ಎಂದು ಮಾಜಿ ಸಂಸದ ಎಚ್.ಜ. ರಾಮುಲು ಹೇಳಿದರು.
ಬಸವಣ್ಣ ಸಮಾಜದ ಮೇಲುಕೀಳು ಭಾವನೆ ಹೋಗಲಾಡಿಸಲು 12ನೇ ಶತಮಾನದಲ್ಲೇ ಶ್ರಮಿಸಿದ್ದಾರೆ. ವಚನ ಕ್ರಾಂತಿಯ ಮೂಲಕ ಸರ್ವ ಸಮಾಜವನ್ನು ಒಗ್ಗೂಡಿಸಿ ಅನುಭವ ಮಂಟಪದ ಮೂಲಕ ಅತ್ಯುತ್ತಮ ಕಾರ್ಯ ಮಾಡಿದ್ದಾರೆ. ಅಂದಿನ ಮೂಲಭೂತವಾದಿಗಳು ಇದನ್ನು ಸಹಿಸದೇ ಚಳುವಳಿ ಹತ್ತಿಕ್ಕಿದರು. ಇದಕ್ಕೆ ಮಣಿಯದೇ ಇಂದಿನವರೆಗೂ ಅದನ್ನು ವಿಸ್ತರಿಸಿದ್ದು ಬಸವಣ್ಣನವರ ಶಕ್ತಿಯಾಗಿದೆ ಎಂದರು.
ಕಾರ್ಮಿಕ ಮುಖಂಡ ಜೆ. ಭಾರದ್ವಾಜ್ ಮಾತನಾಡಿ, ವಿಶ್ವಗುರು ಬಸವಣ್ಣ, ಬುದ್ಧ, ಅಂಬೇಡ್ಕರ್ ಪೆರಿಯಾರ್, ನಾರಾಯಣಗುರುಗಳು ಶೋಷಿತರ, ಕಾರ್ಮಿಕರ, ದಮನಿತರ ಧ್ವನಿಯಾಗಿದ್ದಾರೆ. ಇವರು ಮೂಲಭೂತವಾದಿಗಳ ವಿರುದ್ಧ ಹೋರಾಟ ನಡೆಸಿ ಶೋಷಿತರಲ್ಲಿ ಜಾಗೃತಿ ಮೂಡಿಸಿದರು. ಪ್ರಸ್ತುತ ನಡೆಯುತ್ತಿರುವ ಜನಪರ ಹೋರಾಟಕ್ಕೆ ಪ್ರೇರಣೆ ವಿಶ್ವಗುರು ಬಸವಣ್ಣ, ಬುದ್ಧ, ಅಂಬೇಡ್ಕರ್ ಪೆರಿಯಾರ್, ನಾರಾಯಣಗುರು. ಆಹಾರ, ಬಟ್ಟೆ, ಧಾರ್ಮಿಕ ಆಚರಣೆ ಹೀಗೆ ಮಾಡಬೇಕೆನ್ನುವ ಕೆಲವರ ದೌರ್ಜನ್ಯದಿಂದ ದೇಶದಲ್ಲಿ ಅಶಾಂತಿಯುಂಟಾಗುತ್ತಿದೆ. ಸಂವಿಧಾನ, ಪ್ರಜಾಪ್ರಭುತ್ವ ಉಳಿಸಬೇಕಾದವರು ಧರ್ಮ, ಜಾತಿ ಹೆಸರಿನಲ್ಲಿ ದೌರ್ಜನ್ಯವೆಸಗುತ್ತಿರುವುದು ಖಂಡನೀಯ ಎಂದರು.
ಮಾಜಿ ಶಾಸಕ ಎಚ್.ಎಸ್. ಮುರಳಿಧರ, ಡಾ| ಶಿವಕುಮಾರ ಮಾಲೀಪಾಟೀಲ್, ಡಾ| ಶರಣಬಸಪ್ಪ ಕೋಲ್ಕರ್, ಸಾಹಿತಿ ಡಾ|ಜಾಜಿ ದೇವೇಂದ್ರಪ್ಪ, ಪಂಪಣ್ಣ ನಾಯಕ, ವಿರೇಶ ಸುಳೇಕಲ್, ಕೆ. ಪಂಪಣ್ಣ, ಕೆ. ಬಸವರಾಜ, ಮಂಜುನಾಥ ಗುಡ್ಲಾನೂರು, ಸಿದ್ದಣ್ಣ ಜಕ್ಲಿ, ನಾಗರಾಜ ಅಂಗಡಿ, ವೈ. ಸುದರ್ಶನರಾವ್ ಇದ್ದರು.
Advertisement
ಅವರು ಬುಧವಾರ ನಗರದ ಪಬ್ಲಿಕ್ ಕ್ಲಬ್ ಶಾಲೆ ಆವರಣದಲ್ಲಿ ಬಸವ ಜಯಂತಿ ಆಚರಣಾ ಸಮಿತಿ ಆಯೋಜಿಸಿರುವ ವಿಶ್ವಧರ್ಮ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
Related Articles
Advertisement