ಬೆಂಗಳೂರು: ಬಸವಣ್ಣ ಅವರು ಹುಟ್ಟಿದ ಜಾತಿ ಯಾವುದೆನ್ನುವುದು ಮುಖ್ಯವಲ್ಲ. ಅವರ ತತ್ವಾದರ್ಶಧಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುಧಿವುದೇ ಮುಖ್ಯ ಎಂದು ಹಿರಿಯ ಸಂಶೋಧಕ, ನಾಡೋಜ ಡಾ.ಎಂ.ಚಿದಾನಂದಮೂರ್ತಿ ಹೇಳಿದರು.
ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. “ಅನೇಕರು ಬಸವಣ್ಣ ಹುಟ್ಟಿದ್ದು ಲಿಂಗಾಯತ ಜಾತಿಯಲ್ಲ ಎಂದರೆ, ಕೆಲವರು ಬ್ರಾಹ್ಮಣ ಕುಲದಲ್ಲಿ ಎನ್ನುತ್ತಾ ವಿನಾಕಾರಣ ಗೊಂದಲ ಹುಟ್ಟಿಸುತ್ತಿದ್ದಾರೆ. ಪ್ರಸ್ತುತ ಈ ಕುರಿತ ಚರ್ಚೆ ಅನಾವಶ್ಯಕ. ಬಸವಣ್ಣರ ತತ್ವದಲ್ಲಿನ ಸಾರ ಏನೆಂಬುದನ್ನು ಅರಿತು ಮುನ್ನಡೆಯುವ ಅಗತ್ಯವಿದೆ,’ ಎಂದರು.
“ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕನ್ನಡ ಕ್ಷೀಣಿಸುಧಿತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕನ್ನಡ ಉಳಿಸಿ, ಬೆಳೆಸುವ ಕಾರ್ಯಕ್ಕೆ ಒತ್ತುಕೊಡಬೇಕಿದೆ. ರಾಜಕಾರಣಿಗಳು ವೇದಿಕೆಯ ಮೇಲೆ ಮಾತನಾಡುಧಿತ್ತಾರಷ್ಟೇ. ಕನ್ನಡ ಅನುಷ್ಠಾನ ವಿಷಯ ಬಂದಾಗ ಅವರಿಂದ ಯಾವುದೇ ಪ್ರಯೋಜವಾಗುತ್ತಿಲ್ಲ. ಕನ್ನಡ ನಾಡು, ನುಡಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮಧಿಗಳನ್ನು ಹಮ್ಮಿಕೊಳ್ಳಬೇಕು,’ ಎಂದು ಸಲಹೆ ನೀಡಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಡಾ.ಚಿದಾನಂದಮೂರ್ತಿ ಅವರಿಗೆ ನಂತರ ಎಂತೆಂಥದೋ ಸ್ಥಾನಗಳು ಹುಡುಕಿಕೊಂಡು ಬಂದರೂ ಸ್ವೀಕರಿಸಲಿಲ್ಲ. ನಾಡು, ನುಡಿಯ ಕುರಿತ ಸಂಶೋಧನೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರ ಸ್ಪೂರ್ತಿ ನಾಡಿಗೆ ಅವಶ್ಯಕ. ತಮ್ಮ ಬದುಕಿನ ಶತಮಾನೋತ್ಸವವನ್ನು ಚಿಮೂ ಆಚರಿಸುವಂತಾಗಲಿ ಎಂದು ಹರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್, ಚಲನಚಿತ್ರ ಹಿರಿಯ ನಟ ಎಸ್.ಶಿವರಾಮ್, ನಾಡಪ್ರಭು ಕೆಂಪೇಗೌಡ ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಾ.ಎ.ಎಚ್.ಬಸವರಾಜು, ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಇದ್ದರು.
ಆತ್ಮಹತ್ಯೆಗೆ ಯತ್ನಿಸಿದ್ದ ಚಿಮು
ಚಿದಾನಂದಮೂರ್ತಿ ಅಭಿನಂದನಾ ಸಮಾರಂಭ ದಲ್ಲಿ ಮಾತನಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟ ಗಾರ ಎಚ್.ಎಸ್ ದೊರೆಸ್ವಾಮಿ ಚಿಮೂಗೆ ಸಂಬಂಧಿಸಿದ ಒಂದು ಸಂಗತಿಯನ್ನು ಬಿಚ್ಚಿಟ್ಟರು. “ಹೋರಾಟದಲ್ಲಿ ಬೆಲೆ ಸಿಕ್ಕಲಿಲ್ಲ ಎಂಬ ಕಾರಣಕ್ಕೆ ಚಿದಾನಂದ ಮೂರ್ತಿ ಅವರು ಬೇಸರಗೊಂಡು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಯತ್ನಿಸಿದ್ದರು. ಈ ಸಂದರ್ಭದಲ್ಲಿ ರೈತರೊಬ್ಬರು ಚಿದಾನಂದಮೂರ್ತಿ ಅವರನ್ನು ಬದುಕಿಸಿದ್ದರು,’ ಎಂದು ಹಳೆಯ ಘಟನೆಯೊಂದನ್ನು ಸ್ಮರಿಸಿದರು.