Advertisement

ಬಸವಣ್ಣನ ವಚನಗಳು ಎಂದಿಗೂ ಸಾರ್ವಕಾಲಿಕ: ಶಂಕರೇಗೌಡ

05:27 PM Apr 19, 2018 | Team Udayavani |

ಬನ್ನೂರು: ನಮ್ಮ ನಡುವೆ ಇದ್ದು ವಿಚಾರ ಧಾರೆಗಳನ್ನು ತಿಳಿಸುವ ಮೂಲಕ ಪ್ರತಿ ಯೊಬ್ಬರಿಗೂ ಮಾದರಿಯಾದ ಮಹಾ ಮಹಿಮರನ್ನು ನಾವೆಂದಿಗೂ ಮರೆಯಬಾರದು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್‌. ಶಂಕರೇಗೌಡ ತಿಳಿಸಿದರು.

Advertisement

ಹೋಬಳಿಯ ಯಾಚೇನಹಳ್ಳಿಯಲ್ಲಿ ನಡೆದ ಅಂಬೇಡ್ಕರ್‌ ಮತ್ತು ಬಸವೇಶ್ವರ ಜಯಂತಿ ಹಾಗೂ ಅಕ್ಷಯ ತೃತೀಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಾಡು, ಕಲೆ, ಸಂಸ್ಕೃತಿಗೆ ಹೆಸರಾದುದು. 

ಹಲವಾರು ಮಹಾಮಹಿಮರು ಇಲ್ಲಿ ಹುಟ್ಟಿ ವಿಚಾರಧಾರೆಯನ್ನು ಮನುಕುಲಕ್ಕೆ ದಾರೆ ಎರೆದು ಹೋಗಿದ್ದಾರೆ. ಅಂತಹವರಲ್ಲಿ ವಚನಕಾರರು ಹಾಗೂ ಮಹಾ ವಾಗ್ಮಿಗಳು ಆದಂತಹ ಬಸವಣ್ಣ ಕಟ್ಟಿಕೊಟ್ಟ ವಚನ ಸಾಹಿತ್ಯ ಸಾರ್ವಕಾಲಿಕ. ವಚನಗಳಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು. ಎಲ್ಲಾ ವರ್ಗದ ಜನರು ಒಂದೇ ಎಂಬಂತಹ ನೀತಿ ಪಾಠವನ್ನು ಜಗತ್ತಿಗೆ ಸಾರಿದಂತ ಮಹಾ ಪುರುಷ ಎಂದು ಹೇಳಿದರು. 

ಕಾಯಕವೇ ಕೈಲಾಸ: ನಾವು ಮಾಡುವ ಕೆಲಸದಲ್ಲಿ ದೇವರನ್ನು ಕಾಣಬೇಕೆಂದು ತಿಳಿಸುವ ಮೂಲಕ ಪ್ರತಿಯೊಬ್ಬರಿಗು ಲಿಂಗಧಾರಣೆ ಮಾಡಿ ಮನುಕುಲ ಒಂದೇ ಎಂದು ಸಾರಿದರು. ಅದೇ ರೀತಿಯಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರಪಂಚದ ಎಲ್ಲಾ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತಕ್ಕೆ ಉತ್ತಮ ಸಂವಿಧಾನ ರಚಿಸಿದರು. ಪ್ರತಿಯೊಬ್ಬರೂ ಒಂದೇ ಕಾನೂನಿನ ಚೌಕಟ್ಟಿನಲ್ಲಿ ನಡೆದಾಗ
ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಕಡುಬಡತನದಲ್ಲಿ ಹುಟ್ಟಿ, ತಮ್ಮ ಆಗಾದ ಜ್ಞಾನದ ಮೂಲಕ ಇಡೀ ವಿಶ್ವವೇ ಭಾರತವನ್ನು ತಿರುಗಿ ನೋಡುವಂತೆ ಮಾಡಿದರು. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಜನ್ಮದಿನ ಆಚರಿಸಬೇಕು ಎಂದು ಹೇಳಿದರು.

ರಾಮಕೃಷ್ಣ ಸೇವಾ ಕೇಂದ್ರದ ಶ್ರೀ ನಾದಾನಂದನಾಥ ಸ್ವಾಮೀಜಿ ಮಾತನಾಡಿ, ನಾವು ಹೊಟ್ಟಗಾಗಿ ಜೀವನ ಮಾಡುವುದಲ್ಲ. ಬದಲಾಗಿ ಏನಾದರೂ ಸಾಧಿಸಿ ಮುಂದಿನ ಪೀಳಿಗೆಗೆ ಮಾದರಿಯಾಗಿ ಇರಬೇಕು. ವಿದ್ಯೆ ಕಲಿತ ಮೇಲೆ ಸಾರ್ಥಕವಾಗಬೇಕಾದರೆ ನಮ್ಮ ನಡುವೆ ಇದ್ದು ಹಲವಾರು ವಿಚಾರಗಳನ್ನು ಗ್ರಂಥ ರೂಪದಲ್ಲಿ ನಮಗಾಗಿ ಬಿಟ್ಟು ಹೋಗಿರುವುದನ್ನು ನಾವು ಕಲಿತು ಉತ್ತಮ ನಡವಳಿಕೆ, ವಿಚಾರಗಳನ್ನು ಕಲಿಯಬೇಕು.  ಇಂದು ಮಕ್ಕಳು ತಮ್ಮ ಸಮಯವನ್ನು ಸಾಮಾಜಿಕ ಜಾಲತಾಣಗಳಿಗೆ ವಿನಿಯೋಗಿಸಿ ಹಾಳಾಗುತ್ತಿದ್ದಾರೆ. ಅದರ ಬದಲು ಇಂತಹ ಮಹಾಮಹಿಮರ ವಿಚಾರಗಳನ್ನು ಓದಿದರೆ, ಅದು ವ್ಯಕ್ತಿಯನ್ನು ಪ್ರಬುದ್ಧªರಾಗಿ ಮಾಡುತ್ತದೆ ಎಂದು ಹೇಳಿದರು. 

Advertisement

ಕಾರ್ಯಕ್ರಮದಲ್ಲಿ ಯಾಚೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೆನ್ನಾಜಮ್ಮ, ಉಪಾಧ್ಯಕ್ಷ ಕರಿಸಿದ್ದಶೆಟ್ಟಿ, ಹನುಮಂತೇಗೌಡ, ನನ್ನವ್ವ ಕಲಾ ತಂಡದ ಮಹದೇವು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಕ್ಯಾತೇಗೌಡ, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಪುಟ್ಟರಾಜು, ಪ್ರಾಥಮಿಕ ಸಹಕಾರ ಸಂಘದ ನಿರ್ದೇಶಕರು, ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next