Advertisement
ಪ್ರಸ್ತುತ ಜಗತ್ತಿನ ಸ್ಥಿತಿಗತಿ 12ನೇ ಶತಮಾನಕ್ಕಿಂತ ಕಡಿಮೆ ಇಲ್ಲ. ಪ್ರಪಂಚದ ಎಲ್ಲೂ ಈಗ ಶಾಂತಿ ಇಲ್ಲ. ಶಾಂತಿ ನೆಲೆಸಲು ಮತ್ತೆ ಬಸವಣ್ಣನವರು ಹುಟ್ಟಿ ಬರಬೇಕಿದೆ ಎಂದರು. ನಮ್ಮ ಸಮಾಜದಲ್ಲಿ ದೊಡ್ಡ ಅನಾಹುತಗಳು ಘಟಿಸುತ್ತಿವೆ. ಇಲ್ಲಿ ಲಂಚ ಕೊಡುವುದು ಮತ್ತು ಪಡೆಯುವುದು ಎರಡೂ ಹೇಯ ಕೃತ್ಯವೆಂದು ಎಲ್ಲರೂ ಅರಿಯಬೇಕು.
Related Articles
Advertisement
ಬುದ್ಧ, ಮಹಾವೀರ, ಏಸುಕ್ರಿಸ್ತ, ಪೈಗಂಬರ್ ಯಾರೇ ಮಹಾನ್ ಪುರುಷರನ್ನು ತೆಗೆದುಕೊಂಡರೂ ಆಯಾ ಕಾಲಘಟ್ಟದ ಒಬ್ಬರನ್ನು ಹೆಸರಿಸುತ್ತೇವೆ. ಆದರೆ 12ನೇ ಶತಮಾನವೆಂದರೆ ಶರಣ ಬಸವಾದಿ ಪ್ರಮಥರು ಎನ್ನುತ್ತೇವೆ. ಅಂದರೆ ಅಲ್ಲಿ ಒಬ್ಬ ನಾಯಕ ಅಥವಾ ಮಹಾನ್ ಪುರುಷರಿರಲಿಲ್ಲ. ಬದಲಾಗಿ ಬಸವಣ್ಣ ತಮ್ಮೊಟ್ಟಿಗೆ ಇಡೀ ಸಮಾಜವನ್ನು ಕೊಂಡೊಯ್ದರು.
ಚನ್ನಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ ಹೀಗೆ ಬಡವ-ಬಲ್ಲಿದ, ಹೆಣ್ಣು-ಗಂಡು ಎನ್ನದೇ ಎಲ್ಲರೂ ಒಂದೇ ರೀತಿ ಆಲೋಚಿಸುವಂತೆ ಮಾಡಿದ ಬಸವಣ್ಣನವರಿಗೆ ಅಗಾಧ ಶಕ್ತಿ ಇತ್ತು ಎಂದು ಅವರು ತಿಳಿಸಿದರು. ಚಿತ್ರದುರ್ಗದ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಪಿ. ರುದ್ರಪ್ಪ ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿ ಚಾತುರ್ವರ್ಣ ಧರ್ಮ ಆಚರಣೆಯಲ್ಲಿತ್ತು.
ಕೆಳವರ್ಗದರಿಗೆ ಶಿಕ್ಷಣ, ಧಾರ್ಮಿಕ ಸ್ವಾತಂತ್ರ ಇರಲಿಲ್ಲ. ಅದರಲ್ಲೂ ಜನಸಂಖ್ಯೆಯ ಅರ್ಧದಷ್ಟಿದ್ದ ಮಹಿಳೆಗೆ ಶಿಕ್ಷಣ, ಧರ್ಮದ ಹಕ್ಕುಗಳಿರಲಿಲ್ಲ. ಮುಂದುವರೆದ ರಾಷ್ಟ್ರಗಳಲ್ಲಿಯೂ 18ನೇ ಶತಮಾನದವರೆಗೆ ಮಹಿಳೆಗೆ ಶಿಕ್ಷಣ, ಧಾರ್ಮಿಕ ಸ್ವಾತಂತ್ರವಿರಲಿಲ್ಲ. ಆದರೆ ಬಸವಾದಿ ಶರಣರು 12ನೇ ಶತಮಾನದಲ್ಲೇ ಈ ಬಗ್ಗೆ ಹೋರಾಟ ನಡೆಸಿ 33 ಮೌಲ್ಯಯುತ ವಚನಗಾರ್ತಿಯರನ್ನು ನಾಡಿಗೆ ನೀಡಿದ್ದರು.
ಕನ್ನಡ ಸಾಹಿತ್ಯ ಶ್ರೀಮಂತವಾಗಿದ್ದರೆ ಅದು ಬಸವಾದಿ ಶರಣರ ವಚನಗಳಿಂದ. ಆದರೆ ಬಸವಣ್ಣನವರನ್ನು ಒಂದು ಜಾತಿ ಮತ್ತು ಧರ್ಮಕ್ಕೆ ಸೀಮತಿಗೊಳಿಸುತ್ತಿರುವುದು ಸರಿಯಲ್ಲ ಎಂದರು. ಮೇಯರ್ ಅನಿತಾಬಾಯಿ ಮಾತನಾಡಿ, ಶರಣ ಬಸವಣ್ಣನವರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೇರಿದವರಲ್ಲ. ಬದಲಾಗಿ ಅವರು ಎಲ್ಲರ ಸ್ವತ್ತು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಉಪ ಮೇಯರ್ ಮಂಜುಳಮ್ಮ, ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ, ತಹಶೀಲ್ದಾರ್ ಸಂತೋಷಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಂಜುನಾಥ ಕುರ್ಕಿ ವೇದಿಕೆಯಲ್ಲಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತರಲಾದ ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.