Advertisement

ಜಿಲ್ಯಾದ್ಯಂತ ಬಸವಣ್ಣ ಜಯಂತಿ ಆಚರಣೆ

03:03 PM May 08, 2019 | Suhan S |

ಕೋಲಾರ: ಕೆಲಸದ ಮಹತ್ವವನ್ನು ವಿಶ್ವಕ್ಕೆ ಸಾರಿ ಕಾಯಕವೇ ಕೈಲಾಸ ಎಂದು ಸಾರುವುದರ ಜೊತೆಗೆ ಸಮಾನತೆಗಾಗಿ ಹೋರಾಡಿದ ಮಹಾನ್‌ ಪುರುಷ ಬಸವಣ್ಣ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಶಿವಶರಣ: ಬಸವಣ್ಣನವರು ಸಮಗ್ರ ಕ್ರಾಂತಿಯ ಯುಗಪುರುಷ. ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದರು. ಇವರು ಕೇವಲ ವಚನಕಾರಲ್ಲದೆ ಶ್ರೇಷ್ಠ ಆರ್ಥಿಕ ತಜ¡, ವಿಚಾರವಾಧಿ ಹಾಗೂ ಸಮಾನತಾವಾದಿ ಆಗಿದ್ದರು. ಅನುಭವ ಮಂಟಪವನ್ನು ಸ್ಥಾಪಿಸಿ ಶಿವಶರಣನ್ನು ಬೆಳೆಸಿದರು ಎಂದು ತಿಳಿಸಿದರು.

ತತ್ವಾದರ್ಶ ಅಳವಡಿಸಿಕೊಳ್ಳಿ: ಬಸವಣ್ಣನವರ ತತ್ವ0ಗಳು ಇಂದಿಗೂ ಪ್ರಸ್ತುತವಾಗಿದ್ದು, ಸಮಾಜದಲ್ಲಿನ ಜಾತಿಯತೆಯನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು, ಅಸಮಾನತೆ ಹೋಗದ ಹೊರತು ಉತ್ತಮ ಸಮಾಜ ನಿರ್ಮಾಣ ಅಸಾಧ್ಯ. ತಮ್ಮ ವಚನಗಳ ಮೂಲಕ ಸಮಾಜಕ್ಕೆ ದಾರಿ ತೋರಿದ ಬಸವಣ್ಣನವರು ಜಾತಿಯತೆಯನ್ನು ಮೆಟ್ಟಿನಿಂತು ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಇಂದು ಅವರ ಜಯಂತಿ ಆಚರಿಸುವ ಮೂಲಕ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಂಕಲ್ಪ ಮಾಡೋಣ ಎಂದು ಹೇಳಿದರು.

ಒಂದೇ ಎನ್ನುವ ಭಾವನೆ ಬರಲಿ: ಬಸವಣ್ಣ ಎಲ್ಲ ಧರ್ಮದ ಸಮುದಾಯಗಳ ಬಗ್ಗೆ ಚರ್ಚಿಸಲು ವೇದಿಕೆ ಕಲ್ಪಿಸಿಕೊಟ್ಟಿದ್ದರು. ಆ ಮೂಲಕ ಎಲ್ಲರನ್ನು ಸಮಾನವಾಗಿ ಕಂಡು ಗೌರವಿಸುವಂತಾಗಬೇಕು. ಮನುಷ್ಯನ ಹುಟ್ಟಿನ ಮೂಲವನ್ನು ಪ್ರಶ್ನಿಸುವುದರ ಜತೆಗೆ ಜಾತಿ ಧರ್ಮಗಳನ್ನು ಬಿಟ್ಟು ಎಲ್ಲರೂ ಒಂದೇ ಎನ್ನುವ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕು ಎಂದು ತಿಳಿಸಿದರು.

Advertisement

ಸಮಸಮಾಜ ನಿರ್ಮಾಣ: ಜಿಪಂನ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ್‌ ಮಾತನಾಡಿ, ವಿಶ್ವಗುರು ಹಾಗೂ ಶ್ರೇಷ್ಠ ಮಾನವತಾವಾದಿ ಜಗಜ್ಯೋತಿ ಬಸವಣ್ಣ. ಇವರು ಸಮಾಜದಲ್ಲಿನ ಅಸಮಾನತೆಯ ವಿರುದ್ಧ ಹೋರಾಡಿದರು. ಬುದ್ಧನ ಹಾದಿಯಲ್ಲಿ ಬಸವಣ್ಣ ಸಮಾಜೋದ್ಧಾರ ಕಾರ್ಯಗಳನ್ನು ಮಾಡಿದರು. ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ಹಾಕಿಕೊಟ್ಟ ಹಾದಿಯಲ್ಲಿ ತಾವೆಲ್ಲರೂ ನಡೆಯುವ ಮೂಲಕ ಸಮ ಸಮಾಜದ ನಿರ್ಮಾಣದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಮಾತನಾಡಿ, ಜಾಗತೀಕರಣ ಮತ್ತು ಸಂಸ್ಕೃತೀಕರಣದ ಸನ್ನಿವೇಶದಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರ ತತ್ವಗಳು ಆಚಾರ ವಿಚಾರಗಳು ಆಲೋಚನೆಗಳು ಪ್ರಸ್ತುತ ಚಳವಳಿಗಳಿಗೆ ಬಹಳ ಮುಖ್ಯವಾಗಿದೆ ಎಂದರು.

ವೈದಿಕ ಪರಂಪರೆಯ ಸಂದೇಶವಾಗಿರುವ ಆ ಕಾಲಘಟ್ಟದಲ್ಲಿ ಜಾತಿ ಲಿಂಗ ಸೂತಕವಿಲ್ಲದ ಆದರ್ಶಗಳು ಇದ್ದವು. ಇವತ್ತಿನ ಕಾಲಘಟ್ಟದಲ್ಲಿ ಅಸಮಾನತೆ ಲಿಂಗ ತಾರತಮ್ಯ ದುಡಿಮೆಯೇ ನಿಜವಾದ ಪೂಜೆ ಎನ್ನುವಂತಾಗಬೇಕು. ಅದರಲ್ಲಿ ದೇವರನ್ನು ಕಾಣಬೇಕು ಎಂದು ತೋರಿಸಿದವರು ಬಸವಣ್ಣ ಎಂದು ವಿವರಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್‌ ಮಾತನಾಡಿ, ಬಸವಣ್ಣನವರ ಧಾರ್ಮಿಕ ಹಾಗೂ ಸಾಮಾಜಿಕ ಚಳವಳಿಗಳು ಇಂದಿಗೂ ಪ್ರಸ್ತುತವಾಗಿವೆ. 12ನೇ ಶತಮಾನದಲ್ಲಿ ಬಸವ ಕಲ್ಯಾಣವನ್ನು ಕೇಂದ್ರವಾಗಿರಿಸಿಕೊಂಡು ಮೂರು ದಶಕಗಳ ಕಾಲ ಅಸಮಾನತೆಯನ್ನು ಹೊಗಲಾಡಿಸಲು ಬಸವಣ್ಣನವರು ಶ್ರಮಿಸಿದರು. ಬಸವ ತತ್ವಗಳನ್ನು ಕಾಯ, ವಾಚ, ಮಾನಸ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಎಎಸ್ಪಿ ಜಾಹ್ನವಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರತ್ನಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್‌, ಕಸಾಪ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್‌, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಿ.ರುದ್ರಪ್ಪ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next