Advertisement

ವಚನಗಳ ಮೂಲಕವೇ ಸಮಾಜ ತಿದ್ದಿದ ಬಸವಣ್ಣ

04:04 PM May 08, 2019 | Suhan S |

ಚನ್ನಪಟ್ಟಣ: ವಚನಗಳ ಮುಖಾಂತರ ಅನಾರೋಗ್ಯಕರ ಸಮಾಜವನ್ನು ಬದಲಾವಣೆ ಮಾಡಿ ಸುಸಕ್ಷಿತ ಸಮಾಜವನ್ನು ನಿರ್ಮಾಣ ಮಾಡಲು ಶ್ರಮಿಸಿದ ಮಹಾನ್‌ ವಚನಕಾರ ಬಸವಣ್ಣನವರು ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ ಬಣ್ಣಿಸಿದರು.

Advertisement

ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಬಸವಣ್ಣನವರ ಜಯಂತೋತ್ಸವದಲ್ಲಿ ಮಹಾತ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, 12ನೇ ಶತಮಾನದಲ್ಲಿ ವಚನಕಾರ ಬÓ‌ವಣ್ಣನವರು ನೀಡಿದ ಸಂದೇಶ ಒಂದು ವರ್ಗಕ್ಕೆ ಸೀಮಿತವಾದುದ್ದಲ್ಲ, ಸಮಸಮಾಜ ನಿರ್ಮಾಣ ಅವರ ಗುರಿಯಾಗಿತ್ತು ಎಂದರು.

ಸಮಾಜದಲ್ಲಿ ಬೇರು ಬಿಟ್ಟು ಜನಸಾಮಾನ್ಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದ ಮೂಢನಂಬಿಕೆ, ಕಂದಾಚಾರ, ಜಾತಿ ಪದ್ಧತಿ, ಮಾಟ, ಮಂತ್ರ ಹಲವಾರು ರೀತಿಯ ಕಟ್ಟುಪಾಡುಗಳನ್ನು ಸಂಪೂರ್ಣವಾಗಿ ವಿರೋಧಿಸಿದ ದಾರ್ಶನಿಕ ಬಸವಣ್ಣ ಅವರು ತನ್ನ ದೃಢವಾದ ನಿಲುವಿನಿಂದ ಸಮಾಜದ ಮೇಲ್ವರ್ಗದವರ ಕೆಂಗಣ್ಣಿಗೆ ಗುರಿಯಾಗಿ ಹಲವಾರು ರೀತಿಯ ಶೋಷಣೆಗಳನ್ನು ಎದುರಿಸಬೇಕಾಯಿತು ಎಂದು ತಿಳಿಸಿದರು.

ಉಸಿರು ಕಟ್ಟಿದ ವಾತಾವರಣದಿಂದ ದೂರ ಬಂದು ಅರೋಗ್ಯಕರವಾದ ಹೊಸ ಸಮಾಜವನ್ನು ನಿರ್ಮಾಣ ಮಾಡಲು ದೂರದೃಷ್ಟಿ ಹೊಂದಿದ ಬಸವಣ್ಣನವರು ಹಲವಾರು ಕಟ್ಟುಪಾಡುಗಳನ್ನು ಮೆಟ್ಟಿನಿಂತು, ಹೊಸ ಸಮಾಜದ ಪರಿಕಲ್ಪನೆಗೆ ಮುನ್ನುಡಿ ಬರೆದಿದ್ದರು ಎಂದರು.

ಬಸವಣ್ಣನವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ತಮ್ಮ ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಕೇವಲ ಮಹಾತ್ಮರ ಜಯಂತಿಯನ್ನು ಮಾಡಿದರೆ ಸಾಲದು ಜಯಂತಿಯ ಮಹತ್ವದ ಅರಿವಿರಬೇಕು ಎಂದು ತಿಳಿಸಿದರು.

Advertisement

ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶಗಳನ್ನು ನೀಡಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದವರು ಬಸವಣ್ಣ ಎಂದರು.

ತಾಲೂಕು ದಂಡಾಧಿಕಾರಿ ದಿನೇಶ್‌ಚಂದ್ರ, ವೀರಶೈವ ಸಮುದಾಯದ ಮುಖಂಡ ಹಾಗೂ ಶಿಕ್ಷಕ ಗುರುಮಾದಯ್ಯ ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next