Advertisement

ಶಿಥಿಲಾವಸ್ಥೆಯಲ್ಲಿ ಕೊಲ್ಹಾರ ಗ್ರಂಥಾಲಯ

04:38 PM Nov 04, 2019 | Naveen |

 

Advertisement

ಬಸವನಬಾಗೇವಾಡಿ: ಕೊಲ್ಹಾರ ಪಟ್ಟಣದಲ್ಲಿ 16
ವರ್ಷಗಳ ಹಿಂದೆ ಪುನರ್ವಸತಿ ಇಲಾಖೆಯಿಂದ ನಿರ್ಮಿಸಲಾದ ಗ್ರಂಥಾಲಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು ಆತಂಕ ಮೂಡಿಸಿದೆ. 1988ರಲ್ಲಿ ಬಸವನಬಾಗೇವಾಡಿ ತಾಲೂಕಿನ ಕೊಲ್ಹಾರ ಗ್ರಾಮದಲ್ಲಿ ಗ್ರಂಥಾಲಯ ಪ್ರಾರಂಭವಾಗಿದೆ.

ನಂತರ ಕೊಲ್ಹಾರ ಗ್ರಾಮ ಪುನರ್ವಸತಿ ಆದ ಬಳಿಕ 2003ರಲ್ಲಿ ಪುನರ್ವಸತಿ ಇಲಾಖೆಯವರು 8 ಗುಂಟೆ ಜಾಗೆಯನ್ನು ಗ್ರಂಥಾಲಯಕ್ಕೆ ಮಂಜೂರು ಮಾಡಿ ಆ ಸ್ಥಳದಲ್ಲಿ ಮೂರು ಕೋಣೆ ನಿರ್ಮಾಣ ಮಾಡಿ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಸಿಕ್ಕಂತಾಗುತ್ತದೆ.

ಆದರೆ ಕೆಲ ವರ್ಷಗಳಲ್ಲಿ ಗ್ರಂಥಾಲಯ ಸಂಪೂರ್ಣ ಶಿಥಿಲಗೊಂಡು ಮಳೆಗಾಲದಲ್ಲಿ ಗ್ರಂಥಾಲಯದ ಮೇಲ್ಛಾವಣಿ ಸೋರುತ್ತಿದೆ. ಈಗ ಕೊಲ್ಹಾರ ಪಟ್ಟಣ ತಾಲೂಕು ಕೇಂದ್ರವಾಗಿದ್ದು ಸುತ್ತಲಿನ ಹತ್ತಾರು ಹಳ್ಳಿ
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಈ ಗ್ರಂಥಾಲಯಕ್ಕೆ ನಿತ್ಯ ಬಂದು ಹೋಗುತ್ತಾರೆ. ಆದರೆ ಸಾರ್ವಜನಿಕರಿಗೆ ಅಗತ್ಯ ಇರುವ ಕನ್ನಡ, ಆಂಗ್ಲ ದಿನ ಪತ್ರಿಕೆಗಳು ಹಾಗೂ ವಾರ, ಮಾಸ, ತ್ತೈ ಮಾಸಿಕ ಪತ್ರಿಕೆಗಳು ಸೇರಿದಂತೆ ಅನೇಕ ಪುಸ್ತಕಗಳ ಸೌಲಭ್ಯದಿಂದ ವಂಚಿತಗೊಂಡಿದೆ.

ಕೇವಲ ಮೂರು ಕನ್ನಡ ದಿನ ಪತ್ರಿಕೆಗಳನ್ನು ಹೊರತು ಪಡಿಸಿದರೆ ಇನ್ನವುದೇ ತರಹದ ಪತ್ರಿಕೆಗಳು ಸಿಗುತ್ತಿಲ್ಲ. ಗ್ರಂಥಾಲಯ 568 ಸದಸ್ಯತ್ವ ಹೊಂದಿದ್ದು 5,282 ವಿವಿಧ ಪುಸ್ತಕಗಳನ್ನು ಒಳಗೊಂಡಿದೆ.

Advertisement

ಗ್ರಂಥಾಲಯದಲ್ಲಿ ಕುಡಿಯುವ ನೀರು, ಶೌಚಾಲಯ, ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ, ವಿದ್ಯುತ್‌ ಹಾಗೂ ಗ್ರಂಥಾಲಯದ ಸುತ್ತ ಕಾಂಪೌಂಡ್‌ ನಿರ್ಮಾಣವಾಗಿದ್ದರೂ ಒಳಗೆ ನೆಲ ಹಾಸಿಗೆ ಇಲ್ಲ. ಸಿಮೇಂಟ್‌ ನೆಲ ಹಾಸಿಗೆ ನಿರ್ಮಾಣವಾಗಬೇಕು. ಕೊಲ್ಹಾರ ಪಟ್ಟಣ ತಾಲೂಕು ಕೇಂದ್ರ ಸ್ಥಾನವಾಗಿದ್ದು ಇನ್ನೂ ಹೆಚ್ಚಿನ ಪತ್ರಿಕೆ, ಪುಸ್ತಕಗಳ ಅವಶ್ಯಕತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next