Advertisement

ಗಮನ ಸೆಳೆದ ಸ್ತಬ್ಧ ಚಿತ್ರ ಮೆರವಣಿಗೆ

07:44 PM Nov 02, 2019 | Naveen |

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಡಲಾಯಿತು.

Advertisement

ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ ರಾಷ್ಟ್ರ ಧ್ವಜಾರೋಹಣ ಹಾಗೂ ನಾಡ ಧ್ವಜಾರೋಹಣ ನೆರವೇರಿಸಿದರು. ನಂತರ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಸ್ತಬ್ಧ ಚಿತ್ರಗಳೊಂದಿಗೆ ಭುವನೇಶ್ವರಿ ದೇವಿ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ತಾಲೂಕಾಡಳಿತ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಎ.ಎಂ. ಯಡ್ರಾಮಿ, ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ ಮಾತನಾಡಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಆರ್‌.ಜಿ. ಅಳ್ಳಗಿ, ಬಿಇಒ ಪಿ.ಯು. ರಾಠೊಡ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ, ಉಮೇಶ ಅವಟಿ ಇದ್ದರು.

ಬಿ.ಜೆ. ಇಂಡಿ ಸ್ವಾಗತಿಸಿದರು. ಎಚ್‌.ಬಿ. ಬಾರಿಕಾಯಿ, ಅನಿಲ ಬಬಲೇಶ್ವರ ನಿರೂಪಿಸಿದರು. ಬಸವರಾಜ ನಂದಿಹಾಳ ವಂದಿಸಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಕನ್ನಡ ಭಾಷಾ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.

ಕರವೇ: ಪಟ್ಟಣದ ಕರವೇ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ನಾಡ ಧ್ವಜಾರೋಹಣ ನೆರವೇರಿಸಿದರು. ಅರುಣ ಚಿನಿವಾಲ ಮಾತನಾಡಿದರು. ಸುರೇಶ ಹಾರಿವಾಳ, ಮಂಜು ಹಾರಿವಾಳ, ಪ್ರಭು ಯಂಭತ್ನಾಳ, ಶ್ರೀಶೈಲ ಹೆಬ್ಟಾಳ, ಉಮೇಶ ಅವಟಿ, ಸಂತೋಷ ಹಿರೇಕುರುಬರ ಇದ್ದರು.

Advertisement

ಬಸವಸೈನ್ಯ: ಪಟ್ಟಣದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವಸೈನ್ಯ ಕಾರ್ಯಕರ್ತರು ಭುವನೇಶ್ವರಿದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಾಹಿತಿ ಲ.ರು. ಗೊಳಸಂಗಿ, ಶಂಕರಗೌಡ ಬಿರಾದಾರ ಮಾತನಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ಬಸಣ್ಣ ದೇಸಾಯಿ, ಸಂಜು ಬಿರಾದಾರ, ಕುಶಾಲ ಬೆಣ್ಣೂರ, ಶ್ರೀಕಾಂತ ಕೊಟ್ಟರಶೆಟ್ಟಿ, ಸುನೀಲ ಚಿಕ್ಕೊಂಡ, ಶ್ರವಣಕುಮಾರ ಕೊಡೆಕಲಮಠ, ಅರವಿಂದ ಗೊಳಸಂಗಿ, ಜಟ್ಟಿಂಗರಾಯ ಮಲಗಾರ, ಸಂಗಮೇಶ ಕಾಳಹಸ್ತೇಶ್ವರಮಠ, ಬಸವರಾಜ ಅಳ್ಳಗಿ, ಸಾಗರ ಉಮರ್ಜಿ, ದಯಾನಂದ ಜಾಲಗೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next