Advertisement

ಜನರ ಕಷ್ಟ-ಸುಖಕ್ಕೆ ಸ್ಪಂದಿಸುವವರೇ ಜನಪ್ರತಿನಿಧಿ: ಶಿವಪ್ರಕಾಶ ಶ್ರೀ

01:27 PM May 08, 2020 | Naveen |

ಬಸವನಬಾಗೇವಾಡಿ: ಕೋವಿಡ್ ಲಾಕ್‌ಡೌನ್‌ದಿಂದ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಶಾಸಕರು ಆಹಾರ ಕಿಟ್‌ ವಿತರಿಸುತ್ತಿರುವುದು ಶ್ಲಾಘನೀಯ. ಜನರ ಕಷ್ಟ-ಸುಖದಲ್ಲಿ ಭಾಗಿಯಾಗುವವರೇ ನಿಜವಾದ ಜನಪ್ರತಿನಿಧಿ. ಅಂಥವರ ಸಾಲಿಗೆ ಶಾಸಕ ಶಿವಾನಂದ ಪಾಟೀಲ ಸೇರುತ್ತಾರೆ ಎಂದು ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಶಾಸಕರ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಹಾಗೂ ಬಸವೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಡಿಸಿಸಿ ಬ್ಯಾಂಕ್‌, ಗೆಳೆಯರ ಬಳಗ, ವೀರಶೈವ ಮಹಾಸಭಾ ಹಿರಿಯರ ಸಹಯೋಗದಲ್ಲಿ ಪಟ್ಟಣದ 23 ವಾರ್ಡ್ ಗಳ ಬಡ ಕುಟುಂಬಗಳಿಗೆ ಆಹಾರಧಾನ್ಯ ಕಿಟ್‌ ವಿತರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಕಿಟ್‌ ಪಡೆದುಕೊಂಡವರು ನಿಮಗಿಂತಲೂ ಬಡ ಜನರಿಗೆ ನೀಡಿದರೆ ಬಸವಾದಿ ಶರಣರ ಆಶೀರ್ವಾದ ಸಿಗುತ್ತದೆ. ಜನರು ಸಂಕಷ್ಟದಲ್ಲಿ ಇದ್ದಾಗ ದಾನ, ಧರ್ಮ ಮಾಡಬೇಕು. ಅಂದಾಗ ಪುಣ್ಯ ಲಭಿಸುತ್ತದೆ ಎಂದರು.

ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಪಟ್ಟಣದ ಎಲ್ಲ ವಾರ್ಡ್‌ಗಳ 3 ಸಾವಿರ ಬಡ ಕುಟುಂಬಗಳಿಗೆ ದಿನಸಿ ಕಿಟ್‌ ವಿತರಿಸಲಾಗಿದೆ. ಇದರಲ್ಲಿ ಜೋಳ, ಗೋದಿ , ಅಕ್ಕಿ, ಎಣ್ಣೆ, ತೊಗರಿ ಬೆಳೆ, ಅವಲಕ್ಕಿ, ಮಸಾಲೆ ಪದಾರ್ಥ ಸೇರಿದಂತೆ ಒಂದು ತಿಂಗಳಿಗೆ ಸಾಕಾಗುವಷ್ಟು ಆಹಾರ ಧಾನ್ಯ ಇದೆ ಎಂದರು.ಕೋವಿಡ್ ಸೊಂಕು ತಡೆಗೆ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮೇಲಿಂದ ಮೇಲೆ ಕೈತೊಳೆದುಕೊಳ್ಳಬೇಕು.ಲ ಅಗತ್ಯ ಕೆಲಸಗಳಿದ್ದರೆ ಮಾತ್ರ ಮನೆಯಿಂದ ಹೊರಬರಬೇಕು ಎಂದರು.

ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು, ಶಿವಶರಣಗೌಡ ಪಾಟೀಲ, ವಿ.ಸಿ.ನಾಗಠಾಣ, ಸಿದ್ರಾಮಪ್ಪ ಉಪ್ಪಿನ, ಎಂ.ಆರ್‌.ಪಾಟೀಲ, ಮಹಮ್ಮದ ರಫೀಕ ಟಪಾಲ, ಬಿ.ಎಚ್‌ .ಬಾದರಬಂಡಿ, ಸಂಯುಕ್ತಾ ಪಾಟೀಲ, ಸತ್ಯಜೀತ ಪಾಟೀಲ ತಹಶೀಲ್ದಾರ್‌ ಎಂ.ಎನ್‌.ಬಳಿಗಾರ, ಪುರಸಭೆ ಮುಖ್ಯಾ ಧಿಕಾರಿ ಬಿ.ಎ.ಸೌದಾಗರ, ತಾಪಂ ಅಧಿ ಕಾರಿ ಭಾರತಿ ಚಲುವಯ್ಯ, ಪುರಸಭೆ ಸದಸ್ಯರು, ಗಣ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next