ಬಸವನಬಾಗೇವಾಡಿ: ಕಂದಾಯ ಇಲಾಖೆ ದಿನಾಚರಣೆ ನಿಮಿತ್ತ ಸಿಬ್ಬಂದಿಗೆ ಕ್ರೀಡಾಕೂಟ ಏರ್ಪಡಿಸಿದ್ದು ಶ್ಲಾಘನೀಯ ಎಂದು ಅಪರ್ ಜಿಲ್ಲಾಧಿಕಾರಿ ಪ್ರಸನ್ನ ಎಚ್. ಹೇಳಿದರು.
ಕಂದಾಯ ಇಲಾಖೆ ದಿನಾಚಾರಣೆ ನಿಮಿತ್ತ ಶನಿವಾರ ಪಟ್ಟಣದ ಬಸವೇಶ್ವರ ಸರಕಾರಿ ಪಪೂ ಕಾಲೇಜ್ ಮೈದಾನದಲ್ಲಿ ನಡೆದ ಉತ್ಸಾಹಶ್ರೀ ಮತ್ತು ದೇಶಿ ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಂದಾಯ ಇಲಾಖೆ ನೌಕರರು ನಿತ್ಯ ಕೆಲಸ ಮಾಡುತ್ತಾರೆ. ಪ್ರತಿಯೊಂದು ಕೆಲಸ ಕಂದಾಯ ಇಲಾಖೆಗೆ ಹೆಚ್ಚಾಗಿ ಇರುವುದರಿಂದ ಒತ್ತಡದಲ್ಲೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇಂದು ದೇಶಿ ಜಾನಪದ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಇನ್ನೊಬ್ಬರಿಗೆ ಪೇರಣೆಯಾಗಿದ್ದಿರಿ ಎಂದು ಹೇಳಿದರು.
ಬಸವನಬಾಗೇವಾಡಿ ತಹಶೀಲ್ದಾರ್ ಎಂ.ಎನ್. ಚೋರಗಸ್ತಿ ಮಾತನಾಡಿ, ಕಂದಾಯ ಇಲಾಖೆ ಎಂದಾಕ್ಷಣ ಈ ಇಲಾಖೆಯಲ್ಲಿ ಅನೇಕ ದೊಡ್ಡ ಸ್ಥಾನಮಾನ ಅಧಿಕಾರಿಗಳು ಇರುತ್ತಾರೆ. ಆದರೆ ಇಂದು ಈ ದೇಶಿ ಜಾನಪದ ಕ್ರೀಡಾಕೂಟದಲ್ಲಿ ಮೇಲು ಕೀಳು ಭೇದ ಭಾವ ಬಿಟ್ಟು ಎಲ್ಲರೂ ಒಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹೆಮ್ಮೆ ವಿಷಯವಾಗಿದೆ ಎಂದರು.
ಉಪ ವಿಭಾಧಿಗಾಕಾರಿ ಸೋಮಲಿಂಗ ಗೆಣ್ಣೂರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಪಂ ಅಧಿಕಾರಿ ಬಿ.ಜಿ. ಇಂಡಿ, ಕೊಲ್ಹಾರ ತಹಶೀಲ್ದಾರ್ ಎಂ.ಎಸ್. ಬಾಗವಾನ, ನಿಡಗುಂದಿ ತಹಶೀಲ್ದಾರ್ ಇಸ್ಮಾಯಿಲ್ ಮುಲ್ಕಸೀಪಾಯಿ, ಉಪ ತಹಶೀಲ್ದಾರ್ ಪಿ.ಜಿ. ಪವಾರ, ಭೂ ದಾಖಲೆ ಸಹಾಯಕ ನಿರ್ದೇಶಕ ಎಸ್.ಎಲ್. ಬಿರಾದಾರ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಮಂಗಾನವರ, ಶಿರಸ್ತೇದಾರ್ ಶ್ರೀನಿವಾಸ ಕಲಾಲ್, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕಾಧ್ಯಕ್ಷ ಎಸ್.ಆರ್. ಕುಂಟೊಜಿ, ಎನ್.ಎಂ ಪಾಟೀಲ, ಎಸ್.ಬಿ. ಪಾಟೀಲ, ಕ್ಷೇತ್ರಶಿಕ್ಷಣಾಧಿಕಾರಿ ಮಂಜುನಾಥ ಗುಳೆದಗುಡ್ಡ, ಪಿಎಸೈ ಗುರುಶಾಂತ ದಾಶ್ಯಾಳ, ಮುರಗೇಶ ರೂಢಗಿ, ಚಂದ್ರಶೇಖರ ಉಟಕುರ, ಗ್ರಾಮ ಸಹಾಯಕರಸಂಘದ ಅಧ್ಯಕ್ಷ ಅಲ್ಲಾಭಕ್ಸ ಕೊರಬು, ಹನುಮಂತ ಪೂಜಾರಿ, ರಮೇಶ ಹಳ್ಳಬರ, ಭೂ ಮಾಪನ ಸಂಘದ ಅಧ್ಯಕ್ಷ ವಿಠ್ಠಲಕುಮಾರ ಅಥರ್ಗಾ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.
ಗ್ರಾಮ ಲೆಕ್ಕಾಧಿಕಾರಿ ಎನ್.ಎಂ. ಪಾಟೀಲ ಸ್ವಾಗತಿಸಿದರು. ಡಾ| ಚಂದ್ರಶೇಖರ ಬೆನಕನಹಳ್ಳಿ ನಿರೂಪಿಸಿದರು. ಸಂಗಮೇಶ ಪೂಜಾರಿ ವಂದಿಸಿದರು.