Advertisement
ವಿಜಯಪುರ ಸೇರಿ ವಿವಿಧ ಜಿಲ್ಲೆಗಳ ಜಟ್ಟಿಗಳು ಭಾರವಾದ ಗುಂಡು ಕಲ್ಲು, ಉಸುಕಿನ ಚೀಲ, ಸಂಗ್ರಾಣಿ ಕಲ್ಲು ಸೇರಿದಂತೆ ವಿವಿಧ ಭಾರ ಎತ್ತುವ ಸ್ಪರ್ಧೆಗಳು ಆರಂಭವಾದಾಗ ಜನರು ಮಂತ್ರಮುಗ್ದರಾಗಿ ಕುಳಿತುಕೊಂಡಿದ್ದರು. ಜಟ್ಟಿಗಳು ಭಾರ ಎತ್ತುತ್ತಿದಂತೆ ಕೇ ಕೇ ಹಾಕಿ ಜನರು ಹುರಿದುಂಬಿಸಿದರು. ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜೇತರಿಗೆ ಬೆಳ್ಳಿ ಖಡ್ಗ ನೀಡಿ ಗೌರವಿಸಲಾಯಿತು. ನಾಗರಾಜ ಗುಂದಗಿ ಅವರು ಕಳೆದ 14 ವರ್ಷಗಳಿಂದ ವಿಜೇತರಿಗೆ ಬೆಳ್ಳಿ ಖಡ್ಗಗಳನ್ನು ಬಹುಮಾನ ನೀಡುತ್ತಿದ್ದಾರೆ.
Related Articles
Advertisement
ಮುಳಸಾವಳಗಿಯ ರಮೇಶ ಪಾಟೀಲ ಅವರು ಹಲ್ಲಿನಿಂದ ಕಬ್ಬಿಣದ ಹಾರಿ ಎತ್ತಿ ಮೂರು ಸಾರಿ ಒಗೆದರು. ಸಾಲೋಟಗಿಯ ಶರಣಗೌಡ ಬಿರಾದಾರ ಎರಡು ಸಲ ಕಬ್ಬಿಣದ ಹಾರಿ ಒಗೆದು ನೋಡುಗರಿಂದ ಸೈ ಎನಿಸಿಕೊಂಡರು.
ಕಸರತ್ತಿನ ಸ್ಪರ್ಧೆಯಲ್ಲಿ ಸಿದ್ಧಲಿಂಗ ಸ್ವಾಮೀಜಿ, ಜಾತ್ರಾ ಉತ್ಸವ ಸಮಿತಿಅಧ್ಯಕ್ಷ ಬಸವರಾಜ ಹಾರಿವಾಳ, ಶೇಖರ ಗೊಳಸಂಗಿ, ಸಂಗಪ್ಪ ವಾಡೇದ, ಬಸವರಾಜ ಗೊಳಸಂಗಿ, ಸಂಗಮೇಶ ಓಲೇಕಾರ, ಮೀರಸಾಬ ಕೊರಬು, ಅಶೋಕ ಹಾರಿವಾಳ, ಸಿದ್ದನಗೌಡ ಚಿಕ್ಕೊಂಡ, ಅಪ್ಪಾಸಾಹೇಬ ಕಲ್ಲೂರ, ದಯಾನಂದ ಜಾಲಗೇರಿ ಸೇರಿದಂತೆ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು.