Advertisement

ಮತದಾನ ಅರಿವು ಮೂಡಿಸಿ: ಪ್ರಾಣೇಶ

03:23 PM Apr 06, 2019 | Naveen |

ಬಸವನಬಾಗೇವಾಡಿ: ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಮತದಾನದ ಹಕ್ಕಿನ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಗಂಗಾವತಿ ಹಾಸ್ಯ ಕಲಾವಿದ ಬಿ.ಪ್ರಾಣೇಶ ಹೇಳಿದರು.

Advertisement

ಪಟ್ಟಣದ ವಿಜಯಪುರ ರಸ್ತೆಯ ವೀರಭದ್ರೇಶ್ವರ ನಗರದಲ್ಲಿರುವ ಪುರಸಭೆ ಉದ್ಯಾನದಲ್ಲಿ ವಿಜಯಪುರ ಜಿಲ್ಲಾ ಸ್ವೀಪ್‌ ಸಮಿತಿ ಹಾಗೂ ಪುರಸಭೆ ಮತದಾನ ಜಾಗೃತಿಗೆ ಹಮ್ಮಿಕೊಂಡಿದ್ದ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆಲವರು ನನ್ನದೊಂದು ಮತದಿಂದ ದೇಶಕ್ಕೆ ಹಾನಿ ಏನಾಗುತ್ತದೆ. ಎಂದು ಯೋಚಿಸಿ ಮತದಾನ ಮಾಡುವುದಿಲ್ಲ. ಪ್ರತಿಯೊಂದು ಮತವು ಕೂಡಾ ಅಮೂಲ್ಯ. ಒಂದು ಮತದಿಂದ ಮಾತ್ರ ದೇಶದ ಅಭಿವೃದ್ಧಿ ಅಡಗಿರುತ್ತದೆ. ಈ ನಿಟ್ಟಿನಲ್ಲಿ ತಮ್ಮ ಮತವನ್ನು ಕಡ್ಡಾಯವಾಗಿ ಚಲಾಯಿಸಿದಾಗ ಮಾತ್ರ ದೇಶ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ
ಎಂದರು.

ಐದು ವರ್ಷಕ್ಕೊಮ್ಮೆ ಬರುವ ಚುನಾವಣೆ ಮಹಾಪೂಜೆ ಇದ್ದ ಹಾಗೆ. ಈ ಪೂಜೆಯಲ್ಲಿ ಎಲ್ಲ ಮತದಾರರು ಭಾಗವಹಿಸುವ ಮೂಲಕ ಶೇ. 100 ಮತದಾನವಾಗುವಂತಾಗಬೇಕು. ಚುನಾವಣೆ
ಬಂತೆಂದರೆ ನಮಗೆ ಅದು ಪರೀಕ್ಷೆಯ ಕಾಲ ಇದ್ದ ಹಾಗೆ. ಆಸೆ ಆಮಿಷಗಳಿಗೆ ಒಳಗಾಗುವುದು ಅಪರಾಧ. ಮತವನ್ನು ಹಣಕ್ಕೆ ಮಾರಿಕೊಳ್ಳಬೇಡಿ. ದೇವರನ್ನು ಮೀರಿದ್ದು ದೇಶ. ದೇಶ ಸರ್ವರಂಗದಲ್ಲಿ ಪ್ರಗತಿ ಕಾಣಬೇಕು. ಸರಿಯಾದ ವ್ಯಕ್ತಿಗೆ ಮತ ಹಾಕಿದರೆ ದೇಶ ಸುಭದ್ರವಾಗುತ್ತದೆ. ದೇಶದ ಭವಿಷ್ಯ ನಿರ್ಧರಿಸುವ
ಮತದಾನ ದಿನದಂದು ಮೋಜು ಮಸ್ತಿಗಾಗಿ ಪ್ರವಾಸಕ್ಕೆ ತೆರಳದೇ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಹೇಳಿದರು.

ಸಹಾಯಕ ಚುನಾವಣಾ ಅಧಿ ಕಾರಿ ಸಿದ್ದು ಹುಲ್ಲೊಳ್ಳಿ ಮಾತನಾಡಿ, ಮತದಾನ ನಮ್ಮ ಹಕ್ಕು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಂಗವಿಕಲಮತದಾರರನ್ನು ಮತಗಟ್ಟೆಗೆ ಕರೆತರಲು ವಾಹನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಬಸವರಾಜ ಬೆಣ್ಣೆ ಶಿರೂರ, ತಾಪಂ ಇಒ ಬಿ.ಜೆ. ಇಂಡಿ, ಅಂಗನವಾಡಿ ಮೇಲ್ವಿಚಾರಕಿ ಆರ್‌.ಎಸ್‌. ವಾಸನದ, ವೆಂಕಟೇಶ, ಕಂದಾಯ ನಿರೀಕ್ಷಕ ಶಬ್ಬೀರ್‌ ರೇವರಕರ, ಸಿದ್ದಾರ್ಥ ಕಳ್ಳಿಮನಿ, ರುದ್ದಗೌಡ ಸೊಲ್ಲಾಪುರ, ಎಲ್‌.ಎಂ. ಕಾಂಬಳೆ, ಕೆ.ಒ. ಮುಲ್ಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜನಾಥ ಗುಳೇದಗುಡ್ಡ ಸೇರಿದಂತೆ ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next