Advertisement

ಬೇಡಿಕೆ ಈಡೇರಿಕೆಗೆ ಹೋರಾಟದ ರೂಪುರೇಷೆ ಚರ್ಚೆ

01:34 PM Jun 16, 2019 | Team Udayavani |

ಬಸವನಬಾಗೇವಾಡಿ: ಬಸವನಬಾಗೇವಾಡಿ ಪಟ್ಟಣ ಸೇರಿದಂತೆ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಹಲವಾರು ವಿಷಯಗಳ ಕುರಿತು ಶನಿವಾರ ಪಟ್ಟಣದ ವಿರಕ್ತಮಠದಲ್ಲಿ ಕರೆದ ಸಭೆಯಲ್ಲಿ ತಾಲೂಕಿನ ಮಠಾಧೀಶರ ಸಮ್ಮುಖದಲ್ಲಿ ಮುಂದಿನ ಹೋರಾಟದ ರೂಪುರೇಷದ ಬಗ್ಗೆ ಚರ್ಚಿಸಲಾಯಿತು.

Advertisement

ಸಭೆ ಸಾನ್ನಿಧ್ಯ ವಹಿಸಿದ್ದ ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಪಟ್ಟಣದಲ್ಲಿ ತಾಲೂಕಿನ ರೈತರ ಅನುಕೂಲಕ್ಕಾಗಿ ಕಂದಾಯ ಉಪವಿಭಾಗ ಕಚೇರಿ ಸ್ಥಾಪನೆ ಹಾಗೂ ಬಸವಣ್ಣವರು ಜನಿಸಿದ ಬಸವನಬಾಗೇವಾಡಿ ಪಟ್ಟಣಕ್ಕೆ ಪ್ರತೇಕ ಪ್ರಾಧಿಕಾರ ರಚಿಸಬೇಕು ಎಂದು ಆಗ್ರಹಿಸಿದರು.

ಮಸಬಿನಾಳ ವಿರಕ್ತಮಠದ ಸಿದ್ದರಾಮ ಶ್ರೀಗಳು ಮಾತನಾಡಿ, ಬಸವನಬಾಗೇವಾಡಿ ಪಟ್ಟಣಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಇದರ ಜೊತೆಯಲ್ಲೇ ತಾಲೂಕಿನ ರೈತರ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿರುವ ಬೇಡಿಕಗಳನ್ನು ಈಡೇರುಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂದು ಹೇಳಿದರು.

ಬೆಳಗಾವಿಯಿಂದ ಬಸವನಬಾಗೇವಾಡಿ ಪಟ್ಟಣ ಮೂಲಕ ಯಾದಗಿರಿವರಗೆ ನೂತನ ರೈಲ್ವೆ ಮಾರ್ಗ ಹಾಗೂ ಮೀರಜ್‌-ಯಾದಗಿರಿ ರೈಲ್ವೆ ಮಾರ್ಗ ಮನಗೂಳಿ -ಬಿಜ್ಜಳ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿರ್ವತನೆ ಮಾಡಿ ಮಹಾರಾಷ್ಟ್ರದ ಕರಾಡದಿಂದ ಜತ್ತ ಮಾರ್ಗವಾಗಿ ಬಿಜ್ಜಳವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಬೇಕು ಮತ್ತು ಪಟ್ಟಣದಲ್ಲಿ ರಿಂಗ್‌ ರಸ್ತೆ ಸೇರಿದಂತೆ ಅನೇಕ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸಬೇಕು ಎಂದು ಹೇಳಿದರು.

ಎಲ್ಲ ಬೇಡಿಕೆಗಳಿಗಾಗಿ ಈಗಾಗಲೇ ಸಭೆಗಳು ಜರುಗಿದ್ದು ಜನ ಪ್ರತಿನಿಧಿಗಳು ತಕ್ಷಣ ಸ್ಪಂದಿಸಬೇಕು. ಇಲ್ಲವಾದರೆ ಮುಂದಿನವಾರ ತಾಲೂಕಿನ ಅನೇಕ ಮಠಾಧೀಶರು ಮತ್ತು ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಚರ್ಚಿಸಿ ನಂತರ ಆಮರಣ ಉಪವಾಸ ಸತ್ಯಾಗ್ರಹದ ದಿನಾಂಕವನ್ನು ನಿಗದಿ ಪಡಿಸಲಾಗುವುದು ಎಂದರು.

Advertisement

ಅಖಂಡ ಕರ್ನಾಟಕ ರಾಜ್ಯ ರೈತರ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿದರು. ಈ ಕುರಿತು ಮಠಾಧಿಧೀಶರು ಮತ್ತು ಸಭೆಯಲ್ಲಿ ಭಾಗವಹಿಸಿದ ಹಲವಾರು ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಶ್ರೀಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶಿವಾನಂದ ಪಾಟೀಲ ಅವರಿಗೆ ದೂರವಾಣಿ ಮೂಲಕ ಮಾತನಾಡಿ ತಾಲೂಕಿನ ಸಮಸ್ತ ರೈತರ ಮತ್ತು ಜನಸಾಮಾನ್ಯರ ಹಲವಾರು ಬೇಡಿಕೆಗಳ ಕುರಿತು ಹೋರಾಟದ ವಿಷಯ ತಿಳಿಸಿದಾಗ

ಸಚಿವರು ಜೂ. 16ರಂದು ಪಟ್ಟಣದ ವಿರಕ್ತಮಠಕ್ಕೆ ಆಗಮಿಸಿ ತಾಲೂಕಿನ ಸಮಸ್ತ ರೈತರ ಮತ್ತು ಜನಸಾಮಾನ್ಯರ ಬೇಡಿಕೆಗಳ ಕುರಿತು ಚರ್ಚಿಸೋಣ. ರಾಜ್ಯ ಸರಕಾರದಿಂದ ಆಗುವ ಕೆಲಸಗಳನ್ನು ತಕ್ಷಣ ಮಾಡುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಹುಣಶ್ಯಾಳದ ಸಂಗನಬಸವ ಶ್ರೀಗಳು, ಸಿದ್ದರಾಮಪ್ಪ ರಂಜಣಗಿ, ಸದಾಶಿವ ಭರಟಗಿ, ಸಿದ್ದರಾಮ ಅಂಗಡಗೇರಿ, ಈರಣ್ಣ ದೇವರಗುಡಿ, ಹೊನಕೆರೆಪ್ಪ ತೆಲಗಿ, ದುಂಡಪ್ಪ ಐಗಳಿ, ಚಂದ್ರಾಮ ಹಿಪ್ಪಲಿ, ಸಿದ್ದಪ್ಪ ಹದಿಮೂರು, ಶೆಟ್ಟೆಪ್ಪ ಲಮಾಣಿ, ಮೋತಿಲಾಲ್ ಲಮಾಣಿ, ಚಂದ್ರಾಮ ತೆಗ್ಗಿ, ಸೋಮನಗೌಡ ಪಾಟೀಲ, ದಲಿತ ಸಂಘದ ಮುಖಂಡ ಅರವಿಂದ ಸಾಲೊಡಗಿ, ರಮಜಾನ ಹೆಬ್ಟಾಳ, ಅಶೊಕ ಹಾರಿವಾಳ ಕಲ್ಲು ಸೊನ್ನದ, ಸಿದ್ದಣ್ಣ ಕೊಟ್ರಶೆಟ್ಟಿ, ಅರ್ಜುನ ಹಾವಗೊಂಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next