Advertisement

ಮನಗೂಳಿ: ಕೋವಿಡ್ ಸೋಂಕು ತಡೆಗೆ ಔಷಧ ಸಿಂಪಡಣೆ

01:50 PM May 02, 2020 | Naveen |

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಕೊರೊನಾ ಸೋಂಕು ಹರಡದಂತೆ ಪೌರಕಾರ್ಮಿಕರು ಹಾಗೂ ಸಿಬ್ಬಂದಿ ವಿವಿಧ ಬಡಾವಣೆಗಳು ಹಾಗೂ ನಗರಗಳಲ್ಲಿ ಔಷಧ ಹಾಗೂ ಪೌಡರ್‌ ಸಿಂಪಡಣೆ ಕಾರ್ಯ ಚುರುಕುಗೊಳಿಸಿದ್ದಾರೆ.

Advertisement

ದೇಶಾದ್ಯಂತ 1 ತಿಂಗಳ ಕಾಲ ಕಾಲ್‌ ಡೌನ್‌ ಆಗಿರುವ ಹಿನ್ನಲ್ಲೇಯಿಂದ ಪುರಸಭೆ, ಪೊಲೀಸ್‌, ಆರೋಗ್ಯ, ಕಂದಾಯ, ಆಶಾ, ಅಂಗನವಾಡಿ ಕಾರ್ಯರ್ತರು ಸೇರಿದಂತೆ ವಿವಿಧ ಇಲಾಖೆಯ ಕಾರ್ಮಿಕರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಅಧಿಕಾರಿಗಳು ರಜೆ ದಿನಗಳಲ್ಲಿ ಕೂಡಾ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ದಿನವಿಡಿ ತಮ್ಮ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಮನಗೂಳಿ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ಪಟ್ಟಣದ ಪ್ರಮುಖ ರಸ್ತೆ ಮತ್ತು ಚರಂಡಿಗಳ ಸ್ವಚ್ಛತೆ, ಔಷಧ ಹಾಗೂ ಪೌಡರ್‌ ಸಿಂಪಡಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಕುಟುಂಬ ಸದಸ್ಯರ ಮಾಹಿತಿ ಪಡೆಯುವುದು ಮತ್ತು ಜಿಲ್ಲೆ ರಾಜ್ಯ ಹೊರಾಜ್ಯಗಳಿಂದ ಬಂದ ಜನರ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಮನಗೂಳಿ ಪಟ್ಟಣದ ವ್ಯಾಪ್ತಿಯ ಕೊಳಚೆ ಪ್ರದೇಶ ನಿವಾಸಿಗಳಿಗೆ ನಿತ್ಯ 500 ಲೀ. ಹಾಲು ವಿತರಣೆ ಹಾಗೂ ನಿರ್ಗತಿಕರು ಕಡು ಬಡವರನ್ನು ಗುರುತಿಸಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಿಂದ ದಿನಸಿ ಕಿಟ್‌ ಗಳನ್ನು ವಿತರಿಸಲಾಗುತ್ತಿದೆ. ಪಟ್ಟಣದಲ್ಲಿ ಸ್ವತ್ಛತೆ ಮತ್ತು ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಾಗಿದೆ. ಜನರ ಆರೋಗ್ಯ ರಕ್ಷಣೆಗೆ ನಿಗಾ ವಹಿಸಲಾಗಿದೆ ಎಂದು ಮನಗೂಳಿ ಪಪಂ ಮುಖ್ಯಾಧಿಕಾರಿ ಎಸ್‌.ಎಸ್‌. ಬಾಗಲಕೋಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next