Advertisement
ಶನಿವಾರ ಪಟ್ಟಣದ ಮುದ್ದೇಬಿಹಾಳ ರಸ್ತೆಯ ಬಸ್ ಘಟಕ ಪಕ್ಕದಲ್ಲಿ ಇರುವ ಪಂಚಾಚಾರ್ಯ ಜನ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರ ತಾಲೂಕಾ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಬಣಜಿಗ ಸಮಾಜದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ತಾಲೂಕು ಸಮಾವೇಶ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
Related Articles
Advertisement
ಜಿಲ್ಲೆಯಲ್ಲಿ ಕೇಲವು ರಾಜಕೀಯ ನಾಯಕರು ಸಮಾಜದ ಜನರಿಗೆ ಅಂಜಿಕೆ ಹಾಕುತ್ತಾರೆ. ಯಾರು ಕೂಡಾ ಹಂತ ಅಂಜಿಕೆ ಅಳುಕಿಗೆ ಭಯ ಪಡಬೇಡಿ ಯಾಕೆಂದರೆ ಎಲ್ಲರೂ ತಮ್ಮ ತಮ್ಮ ಸಮಾಜದ ಸಂಘಟನೆ ಮಾಡುವದಕ್ಕೆ ಯಾರ ಅಂಜಿಕೆ ಅಳುಕಿಗೆ ಭಯ ಪಡದೆ ನಿರಂತರವಾಗಿ ಸಮಾಜದ ಸಂಘಟನೆ ಮಾಡಿ ಇದು ಪ್ರಜಾಪ್ರಭುತ್ವ ಎಲ್ಲರಿಗೂ ಅವರ ಅವರ ಸಮಾಜದ ಸಂಘಟನೆ ಮಾಡುವ ಹಕ್ಕಿದೆ ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ ಅಕ್ಕನಾಗಮ್ಮ ಬಾಲಕಿಯರ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಅಶೋಕ ಹಂಚಲಿ ಅವರು ಮಾತನಾಡಿ ದಾನ ಧರ್ಮ ದೇವಸ್ಥಾನಗಳ ನಿರ್ಮಾಣ ಹಾಗೂ ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೆ ಬಣಜಿಗ ಸಮಾಜದ ಕೊಡುಗೆ ಅನನ್ಯವಾಗಿದೆ. ನಮ್ಮ ಹಿಂದಿನ ಪುರ್ವಜ್ಜರು ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮೀಸಿದ್ದಾರೆ ಎಂದು ಹೇಳಿದರು.
ಕೇವಲ ದಾನ ಧರ್ಮ ದೇವಸ್ಥಾನ ಶಿಕ್ಷಣ ಸಂಸ್ಥೆಗಳನ್ನು ನಿರ್ಮಾಣ ಮಾಡದೇ ಸ್ವಾತಂತ್ರಕ್ಕಾಗಿ ಶರಣ ಸಾಹಿತ್ಯ, ಬಸವ ಸಾಹಿತ್ಯ, ಕನ್ನಡ ಸಾಹಿತ್ಯ ಸೇರಿದಂತೆ ಅನೇಕ ಸಮಾಜದ ಒಳತಿಗಾಗಿ ಹಲವಾರು ದಶಕಗಳಿಂದ ಬಣಜಿಗ ಸಮಾಜದ ಬಾಂಧವರು ನಿರಂತರವಾಗಿ ಹಿಂತ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಸಮಾಜದಲ್ಲಿ ತಮ್ಮದೇಯಾದ ಕೊಡುಗೆಗಳನ್ನು ನೀಡಿರುವ ಸಮಾಜ ಯಾವುದಾದರು ಇದ್ದರೆ ಅದು ಬಣಜಿಗ ಸಮಾಜದ ಎಂದು ಹೆಮ್ಮೆಯಿಂದ ಹೇಳುವ ಸಮಾಜ ನಮ್ಮದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶಿರೋಳ ರಾಮಾರೂಢ ಮಠದ ಶಂಕರಾರೂಢ ಶ್ರೀಗಳು ವಹಿಸಿದ್ದರು. ಸಾನ್ನಿಧ್ಯವನ್ನು ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ತಾಲೂಕಾಧ್ಯಕ್ಷ ಮುತ್ತು ಕಿಣಗಿ ವಹಿಸಿದ್ದರು. ಹರೀಶಗೌಡ ಪಾಟೀಲ, ಸುರೇಶಗೌಡ ಪಾಟೀಲ, ಈರಣ್ಣ ಪಟ್ಟಣಶೆಟ್ಟಿ, ಎಸ್.ಜಿ. ನಾಗಠಾಣ, ಆರ್.ಎಂ. ಕೋರಿ, ಎಸ್.ಎಸ್. ಝಳಕಿ, ಸಿ.ಎಂ. ಹಂಡಗಿ, ಬಸವರಾಜ ಹನುಮಶೆಟ್ಟಿ, ಅಣ್ಣು ದುಂಬಾಳಿ, ಸಂಗಮೇಶ ಹಳ್ಳೂರ, ರಮೇಶ ಯಳಮೇಲಿ, ವೀರಣ್ಣ ಮರ್ತೂರ, ಗಂಗಾಧರ ಕುಂಟೋಜಿ, ಸಿದ್ದಣ್ಣ ಮೋದಿ, ಡಾ| ಎನ್.ಬಿ. ವಜಿರಕರ, ಸದಾನಂದ ಯಳಮೇಲಿ, ವಿಶೇಷ ಸನ್ಮಾನಿತರಾಗಿ ಮಹೇಂದ್ರ ವಾರದ, ಮುರುಗೇಶ ಹೆಬ್ಟಾಳ, ಸಂಗಮೇಶ ಕೊರಿ, ಡಾ| ನವೀನ ಶೀಲವಂತ, ಡಾ| ಸಂತೋಷ ಶೀಲವಂತ, ಅಶೋಕ ಬ್ಯಾಕೋಡ ಸೇರಿದಂತೆ ಅನೇಕರು ಇದ್ದರು.
ವಿವೇಕಾನಂದ ಕಲ್ಯಾಣಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಆರ್.ಜಿ. ಅಳ್ಳಗಿ ಸ್ವಾಗತಿಸಿದರು. ಬಸವರಾಜ ಹಂಚಲಿ ನಿರೂಪಿಸಿದರು. ಸಂತೋಷ ತಾಳಿಕೋಟಿ ವಂದಿಸಿದರು.
ಈ ವೇಳೆ ಬಣಜಿಗ ಸಮಾಜದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನಿಸಲಾಯಿತು.