Advertisement

ಬಿಡಾಡಿ ದನಗಳಿಗೆ ರಸ್ತೆಯೇ ಕೊಟ್ಟಿಗೆ

02:48 PM Sep 20, 2019 | Naveen |

ಬಸವಕಲ್ಯಾಣ: ನಗರದ ಪ್ರಮುಖ ರಸ್ತೆಗಳ ಮಧ್ಯದಲ್ಲಿ ಬಿಡಾಡಿ ದನಗಳು ಬೀಡು ಬಿಡುವುದರಿಂದ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ.

Advertisement

ಕೇಂದ್ರ ಬಸ್‌ ನಿಲ್ದಾಣ, ಮಹಾತ್ಮಗಾಂಧಿ ವೃತ್ತ, ಹರಳಯ್ಯ ವೃತ್ತ ಹಾಗೂ ತರಕಾರಿ ಅಂಗಡಿ ಸೇರಿದಂತೆ ನಗರದ ಜನ ಸಾಂದ್ರತೆ ಇರುವ ಸ್ಥಳಗಳಲ್ಲಿ ಬಿಡಾಡಿ ದನಗಳ ಹಿಂಡೆ ಠಿಕಾಣಿ ಕಾಣುತ್ತಿವೆ. ಇದರಿಂದ ನಗರದ ರಸ್ತೆಗಳು ಸಾರ್ವಜನಿಕರು ಓಡಾಡುವ ರಸ್ತೆಯೊ ಅಥವಾ ಕೊಟ್ಟಿಗೆಯೊ ಎಂಬುವುದು ತಿಳಿಯದಂತಾಗಿದೆ. ಇದರಿಂದ ಮಕ್ಕಳು, ವೃದ್ಧರು ಓಡಾಟ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ.

ಪಾದಚಾರಿಗಳು ಹೋಗುವಾಗ ಹಾಗೂ ವಾಹನಗಳು ಸಂಚರಿಸುವಾಗ ದನಗಳು ಅಡ್ಡಲಾಗಿ ಬಂದು ನಿಲ್ಲುತ್ತಿವೆ. ಹೀಗಾಗಿ ಸಾರ್ವಜನಿಕರು ದನಗಳು ಮೈಮೇಲೆ ಬರಬಹುದು ಎಂಬ ಭಯದಲ್ಲಿ ಅವು ಸ್ಥಳದಿಂದ ಕದಲುವವರೆಗೂ ಕಾಯುವಂತಾಗಿದೆ.

ಒಂದು ವೇಳೆ ವೇಗವಾಗಿ ಹೋಗಲು ಪ್ರಯತ್ನಿಸಿದರೆ, ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ತರಕಾರಿ ಹಾಗೂ ದಿನಸಿ ವಸ್ತುಗಳು ಬೈಕ್‌ ಅಥವಾ ಆಟೋದಲ್ಲಿ ಬಿಟ್ಟು ಹೋದರೆ ಅವುಗಳನ್ನು ಚೆಲ್ಲಾಪಿಲ್ಲಿ ಮಾಡುವುದು ಜಾನುವಾರುಗಳ ನಿತ್ಯದ ಕಾಯಕವಾಗಿದೆ. ಇದು ಜನರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಮಗೂ ಬಿಡಾಡಿ ದನಗಳಿಗೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ. ಬಿಡಾಡಿ ದನಗಳಿಂದ ನಗರದಲ್ಲಿ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕು ಅಥವಾ ಖಾಸಗಿ ವ್ಯಕ್ತಿಗಳ ದನಗಳ ಆಗಿದ್ದರೆ, ಅವರ ಗಮನಕ್ಕೆ ತಂದು ಅವುಗಳನ್ನು ಹೊರಗಡೆ ಬಿಡದಂತೆ ಎಚ್ಚರಿಕೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next