Advertisement

ಮಾನವ ಜೀವಿಸಲು ಇರಲೇಬೇಕು ಶೇ.33 ಅರಣ್ಯ: ಶಿವಶಂಕರ

02:57 PM Aug 17, 2019 | Naveen |

ಬಸವಕಲ್ಯಾಣ: ಮಾನವ ಭೂಮಿ ಮೇಲೆ ಜೀವಿಸಬೇಕಾದರೆ ಶೇ.33ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ಈಗ ಜಿಲ್ಲೆಯಲ್ಲಿ ಕೇವಲ ಶೇ.8ರಷ್ಟು ಮಾತ್ರ ಅರಣ್ಯ ಪ್ರದೇಶ ಉಳಿದು ಕೊಂಡಿದೆ ಎಂದು ಬೀದರ್‌ ಪ್ರಾದೇಶಿಕ ಅರಣ್ಯ ವಿಭಾಗ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಎಸ್‌.ಹೇಳಿದರು.

Advertisement

ನಗರದ ಯಾತ್ರಿ ನಿವಾಸದ ಸಭಾಂಗಣದಲ್ಲಿ ಶುಕ್ರವಾರ ಬಸವಕಲ್ಯಾಣ ಪ್ರಾದೇಶಿಕ ಅರಣ್ಯ ವಲಯದಿಂದ ಹಸಿರು ಕರ್ನಾಟಕ ಯೋಜನೆಯಡಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಗಾಗಿ ಮುಂದಿನ ಪೀಳಿಗೆಗಾಗಿ ಗಿಡಮರಗಳನ್ನು ಬೆಳೆಸಿ, ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಯಾಗಿದೆ ಎಂದರು.

ಮಲೆನಾಡು ಮತ್ತು ಕೊಡಗು ಜಿಲ್ಲೆಗಳಲ್ಲಿ ಎಲ್ಲಿ ನೋಡಿದರು ಹಸಿರು ಮಯವಾಗಿ ಕಾಣುತ್ತದೆ. ಹಾಗಾಗಿ ಅಲ್ಲಿನ ಜನರು ಗಿಡಮರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಬೀದರ್‌ ಜಿಲ್ಲೆಯಲ್ಲಿ ಮರಗಳನ್ನು ಬೆಳೆಸುವುದು ತುಂಬಾ ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಮನೆಗೊಂದು ಮರ ವಿತರಣೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಮತ್ತು ಸ್ಥಳವಕಾಶ ಇದ್ದವರು ಹೋಮ್‌ ರೇಸಾರ್ಟ್‌ ಮಾಡಿ ಮರಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು. ತಾಲೂಕು ಹಸಿರುಮಯ ಮಾಡಬೇಕಾದರೆ, ಶಾಸಕರ ಹಾಗೂ ಸಾರ್ವಜನಿಕರ ಪ್ರೋತ್ಸಾಹ ಹಾಗೂ ಸಹಕಾರ ನಮಗೆ ತುಂಬಾ ಅವಶ್ಯವಾಗಿದ್ದು, ಮರ ಕಡಿಯುವುದನ್ನು ಬಿಟ್ಟು ಬೆಳೆಸುವ ಗುಣ ರೂಢಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ನಾರಾಯಣರಾವ್‌ ಮಾತನಾಡಿ, ಭೂಮಿ ಮೇಲೆ ಮರಗಳು ಇಲ್ಲದಿದ್ದರೆ ನಾವು ಉಳಿಯುವುದಿಲ್ಲ. ಮರಗಳಿಂದ ಮಳೆ, ಮಳೆಯಿಂದ ಬೆಳೆ, ಬೆಳೆಯಿಂದ ನಾವು. ಹಾಗಾಗಿ ಬರುವ ವರ್ಷದೊಳಗೆ ಒಂದು ಲಕ್ಷ ಸಸಿಗಳನ್ನು ನೆಡುವ ಕೆಲಸ ಆಗಬೇಕು ಎಂದರು. ಪ್ರಕೃತಿಯನ್ನು ಪ್ರೀತಿಸಿದವರು ಮಾತ್ರ ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯವಾಗುತ್ತದೆ. ಹಾಗಾಗಿ ವರ್ಷದಲ್ಲಿ ಒಬ್ಬರು ಕನಿಷ್ಠ ಹತ್ತು ಸಸಿಗಳನ್ನು ನೆಡಬೇಕು ಎಂದರು.

ತಹಶೀಲ್ದಾರ್‌ ಸಾವಿತ್ರಿ ಶರಣು ಸಲಗರ ಮಾತನಾಡಿ, ಬಸವಕಲ್ಯಾಣ ಗ್ರೀನ್‌ ಗ್ರೂಪ್‌ ಮಾಡಿಕೊಂಡು, ವನಮಹೋತ್ಸವ ಯೋಜನೆಯಡಿ ಹಮ್ಮಿಕೊಳ್ಳುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

Advertisement

ಪರಿಸರ ವಾಹಿನಿ ಜಿಲ್ಲಾಧ್ಯಕ್ಷ ಶೈಲೇಂದ್ರ ಕಾವಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಆಯುಕ್ತ ಜ್ಞಾನೇಂದ್ರಕುಮಾರ ಗಂಗವಾರ, ತಾಪಂ ಇಒ ಮಡೋಳಪ್ಪಾ ಪಿ.ಎಸ್‌., ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಮಹೇಂದ್ರ ಮೌರ್ಯ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಶಿವಾನಂದ ಮೇತ್ರೆ ಸೇರಿದಂತೆ ಮತ್ತಿತರರು ಇದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next