Advertisement

ಬಸ್‌ಪಾಸ್‌ಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

03:59 PM Jul 03, 2019 | Naveen |

ಬಸವಕಲ್ಯಾಣ: ಬಿಇಡಿ ವಿದ್ಯಾರ್ಥಿಗಳಿಗೆ ಹೊಸ ಬಸ್‌ಪಾಸ್‌ಅನ್ನು ಕೂಡಲೇ ವಿತರಣೆ ಮಾಡಬೇಕು ಅಥವಾ ಹಳೆ ಬಸ್‌ಪಾಸ್‌ನಿಂದಲೇ ಪ್ರಯಾಣಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಹಾಗೂ ದೊಡ್ಡಪ್ಪ ಅಪ್ಪ ಬಿಇಡಿ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ನಗರದ ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಬಿಇಡಿ ತರಗತಿಗಳು ಪ್ರಾರಂಭವಾಗಿ ಈಗಾಗಲೇ ಮೂರು ತಿಂಗಳು ಗತಿಸಿವೆ. ಆದರೂ ಇಲಾಖೆಯಿಂದ ಬಸ್‌ಪಾಸ್‌ ವಿತರಣೆ ಮಾಡುತ್ತಿಲ್ಲ. ಹೊಸ ಬಸ್‌ಪಾಸ್‌ ವಿತರಣೆ ಮಾಡಲು ವಿಳಂಬವಾದಲ್ಲಿ, ಹಳೆ ಪಾಸ್‌ನಿಂದಲೇ ಪ್ರಯಾಣಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮೂಲಕ ಒತ್ತಾಯಿಸಲಾಗುತ್ತಿದೆ. ಆದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಆರೋಪಿಸಿದರು.

ಇದರಿಂದ ದಿನಾಲೂ ಮನೆಯಿಂದ ಹಣ ತಂದು ಖರ್ಚು ಮಾಡಿ ಕಾಲೇಜಿಗೆ ಹೋಗುವಂತಾಗಿದೆ. ಆದ್ದರಿಂದ ನಮಗೆ ಪಾಸ್‌ ದೊರೆಯುವವರೆಗೂ ಪ್ರತಿಭಟನೆ ಬಿಡುವುದಿಲ್ಲ ಎಂದು ಪ್ರತಿಭಟನೆಮುಂದುವರೆಸಿದರು.

ವಿಷಯ ತಿಳಿದು ತಹಶೀಲ್ದಾರ್‌ ಸಾವಿತ್ರಿ ಶರಣು ಸಲಗರ ಅವರು ಸ್ಥಳಕ್ಕೆ ಆಗಮಿಸಿದಾಗ, ಬಸ್‌ಪಾಸ್‌ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು. ನಂತರ ತಹಶೀಲ್ದಾರ್‌ ಅವರು, ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಫೋನ್‌ ಕರೆ ಮಾಡಿ, ಹೊಸ ಬಸ್‌ಪಾಸ್‌ ವಿತರಣೆಗೆ ವಿಳಂಬವಿದ್ದಲ್ಲಿ, ಹಳೆ ಪಾಸ್‌ನಿಂದಲೇ ಪ್ರಯಾಣಿಸಲು ಅನುಮತಿ ನೀಡಬೇಕು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿಟಿ ಬಸ್‌ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು. ಆಗ ವಿದ್ಯಾರ್ಥಿಗಳು ಪ್ರತಿಭಟನೆ ಅಂತ್ಯಗೊಳಿಸಿದರು. ಲೋಕೇಶ ಮೋಳಕೇರೆ, ನವನಾಥ ಮೇತ್ರೆ, ಶಿವಶಂಕರ ಕಾಮಶೆಟ್ಟೆ, ಅಂಬಾದಾಸರೆಡ್ಡಿ, ಸುನೀಲರೆಡ್ಡಿ, ಮಹೇಶ ಬಿರಾದಾರ್‌, ಸಂದೀಪ ಚಿರಡೆ, ಪೂಜಾ, ಅರ್ಚನಾ, ಪ್ರೀತಿ, ಸಂದೀಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next