Advertisement

ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯಕ್ಕೆ ಪಟೇಲ್‌ ಕಾರಣ

01:28 PM Feb 03, 2020 | Naveen |

ಬಸವಕಲ್ಯಾಣ: ಸರದಾರ ವಲ್ಲಭಭಾಯಿ ಪಟೇಲ್‌ ಇಲ್ಲದಿದ್ದರೆ ಕಲ್ಯಾಣ ಕರ್ನಾಟಕ ಭಾಗ ಸ್ವತಂತ್ರವಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಕೇಂದ್ರ ಸರ್ಕಾರದ ಗ್ರಾಮೀಣ ವಿಕಾಸ ರಾಜ್ಯ ಸಚಿವೆ ಶ್ರೀ ಸಾಧ್ವಿನಿರಂಜನ ಜ್ಯೋತಿ ಹೇಳಿದರು.

Advertisement

ಮುಚಳಂಬ ಗ್ರಾಮದ ಶ್ರೀ ನಾಗಭೂಷಣ ಶಿವಯೋಗಿ ಸಂಸ್ಥಾನ ಮಠದಲ್ಲಿ ಶ್ರೀ ನಾಗಭೂಷಣ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀ ಪ್ರಣವಾನಂದ ಮಹಾಸ್ವಾಮಿಗಳ 50ನೇ ವರ್ಷದ ವರ್ಧಂತಿ ಮಹೋತ್ಸವದ ಎರಡನೇ ದಿನವಾದ ರವಿವಾರ ನಡೆದ “ಈಶ್ವರ ನಾಮವು ರಸನೆಗೆ ಬರಲು ಶಾಶ್ವತ ಸುಕೃತಗಳಿಗಿಂ ಮಿಗಿಲು’ ಎಂಬ ಪ್ರವಚನ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ದೇಶ ಸ್ವಾತಂತ್ರ್ಯಗೊಂಡರೂ ಜಮ್ಮು-ಕಾಶ್ಮಿರದಲ್ಲಿ ಧ್ವಜಾರೋಹಣ ಮಾಡುವಂತೆ ಹಾಗೂ ದೇಶದ ಕಾನೂನು ಚಲಾಯಿಸುವಂತಹ ಪರಿಸ್ಥಿತಿಯಲ್ಲಿ ನಾವಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು, ಅಖಂಡ ಭಾರತ ಮಾಡುವ ಮೂಲಕ ದೇಶದ ಬಹಳ ವರ್ಷಗಳ ಕನಸನ್ನು ನನಸು ಮಾಡಿದ್ದಾರೆ. ಹೀಗಾಗಿ ಸರದಾರ ವಲ್ಲಭಬಾಯಿ ಪಟೇಲ್‌ ಮತ್ತು ಪ್ರಧಾನಿ ಮೋದಿ ಅವರನ್ನು ಎಂದಿಗೂ ಮರೆಯುವಂತಿಲ್ಲ ಎಂದರು.

ಗ್ರಾಮಸ್ಥರು ಹಾಗೂ ಮಠದ ಶ್ರೀಗಳು ಸರ್ಕಾರದ ವತಿಯಿಂದ ಮಠದಲ್ಲಿ ಯಾತ್ರಿ ನಿವಾಸ ಸೇರಿದಂತೆ ಗ್ರಾಮದ ಕೆಲವೊಂದು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಿರಿ. ಇವುಗಳನ್ನು ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಮತ್ತು ಮುಖ್ಯಮಂತ್ರಿ ಬಿಎಸ್‌ವೈ ಅವರ ಗಮನಕ್ಕೆ ತಂದು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ದೇಶದ ಸಾಧು ಸಂತರ ಮುಖಾಂತರ ದೇವರು ಸಿಗಲು ಸಾಧ್ಯ ವಿನಃ ಹರಿದ್ವಾರಕ್ಕೆ ಹಾಗೂ ಕಾಶಿಗೆ ಹಣ ಖರ್ಚು ಮಾಡಿ ಹೋದರೆ ಸಿಗುವುದಿಲ್ಲ. ಏಕೆಂದರೆ ಅಲ್ಲಿ ಪಾಪ ತೊಳೆಯಲು ಸಾಧ್ಯ. ಆದರೆ ಪಾಪ ಮಾಡುವ ಪ್ರವೃತ್ತಿ ಹೋಗಲು ಸಾಧ್ಯವಿಲ್ಲ ಎಂದು ನುಡಿದರು.

Advertisement

ಬೀದರ ಶ್ರೀ ಸಿದ್ಧಾರೂಢ ಮಠದ ಡಾ| ಶಿವಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ, ಮುಚಳಂಬ ಶ್ರೀ ನಾಗಭೂಷಣ ಶಿವಯೋಗಿ ಸಂಸ್ಥಾನ ಮಠದ ಶ್ರೀ ಪ್ರಣವಾನಂದ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಬಿ.ನಾರಾಯಣರಾವ್‌, ಆನಂದ ದೇವಪ್ಪ, ಕೆ.ಕೆ.ಮಾಸ್ಟರ್‌, ತಹಶೀಲ್ದಾರ್‌ ಸಾವಿತ್ರಿ ಶರಣು ಸಲಗರ, ಆರ್‌ಟಿಒ ಸಂಜುಕುಮಾರ ವಾಡಿಕರ್‌ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next