Advertisement

ನುಲಿಯ ಚಂದಯ್ಯ ಗವಿ ಆಕರ್ಷಿಣೀಯ

10:50 AM Aug 09, 2019 | Naveen |

ಬಸವಕಲ್ಯಾಣ: 12ನೇ ಶತಮಾನದ ಶರಣರಲ್ಲಿ ಒಬ್ಬರಾದ ನುಲಿಯ ಚಂದಯ್ಯನವರ ಗವಿಯನ್ನು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿಗೊಳಿಸಲಾಗಿದ್ದು, ಇಲ್ಲಿನ ಸುಂದರ ಪರಿಸರವೀಗ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

Advertisement

ನಗರದದಿಂದ ಬಂಗ್ಲಾ ಕಡೆಗೆ ತೆರಳುವ ರಸ್ತೆಯ ತ್ರಿಪುರಾಂತನ ಕೆರೆ ದಡದಲ್ಲಿರುವ ಶರಣ ನುಲಿಯ ಚಂದಯ್ಯನವರ ಗವಿಯನ್ನು ಕೋಟ್ಯಂತರ ರೂ. ಖರ್ಚು ಮಾಡಿ ಸುಂದವಾಗಿ ಅಭಿವೃದ್ಧಿಗೊಳಿಸಲಾಗಿದೆ. ಪ್ರವಾಸಿಗರು ಒಮ್ಮೆ ಇಲ್ಲಿಗೆ ಬಂದರೆ ಸಾಕು. ಮತ್ತೂಮ್ಮೆ ಬರಬೇಕು ಎನ್ನುವಂತೆ ಸ್ಮಾರಕ ಜೀರ್ಣೋದ್ಧಾರ ಮಾಡಿ ಇಲ್ಲಿನ ಪರಿಸರ ರೂಪಿಸಲಾಗಿದೆ. ಹೀಗಾಗಿ ಪ್ರತಿದಿನ ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ನಗರದ ನಿವಾಸಿಗಳು ಬೆಳಗ್ಗೆ ಹಾಗೂ ಸಂಜೆ ಕುಟುಂಬ ಸಮೇತ ಆಗಮಿಸಿ ವಿಶ್ರಾಂತಿ ಪಡೆಯುವುದು, ವಿಹಾರ ಮಾಡುವುದು ಸಾಮಾನ್ಯವಾಗಿದೆ.

ಗವಿಯನ್ನು ಚಾಲುಕ್ಯರ ಶೈಲಿಯಲ್ಲಿ ಕರಿಕಲ್ಲಿನಿಂದ ನಿರ್ಮಿಸಲಾಗಿದೆ. ಮತ್ತು ತಗ್ಗು ಪ್ರದೇಶದಲ್ಲಿ ಇರುವುದರಿಂದ ಪ್ರವಾಸಿಗರಿಗೆ ಯಾವುದೇ ತೊಂದರೆ ಆಗದಂತೆ ಹತ್ತಲು ಮತ್ತು ಇಳಿಯಲು ಅಚ್ಚು ಕಟ್ಟಾದ ಮೆಟ್ಟಿಲುಗಳು, ಬೃಹತ್‌ ಪ್ರವೇಶ ಬಾಗಿಲು ಮತ್ತು ವಿಶಿಷ್ಠ ಆಕಾರದಲ್ಲಿ ಸುತ್ತ ಗೋಡೆಯನ್ನು ನಿರ್ಮಾಣ ಮಾಡಿರುವುದು ಎಲ್ಲರ ಗಮನ ಸೆಳೆಯುತ್ತಿದೆ.

ಇಲ್ಲಿ ಬಗೆ ಬಗೆಯ ಹೂವಿನ ಗಿಡಗಳು ಹಾಗೂ ಹುಲ್ಲಿನ ಹಾಸಿಗೆ ಬೆಳೆಸಲಾಗಿದೆ. ಇದರಿಂದ ಗವಿಯ ಆವರಣದ ತುಂಬಾ ಆಹ್ಲಾದಕರ ವಾತವರಣ ನಿರ್ಮಾಣವಾಗಿದೆ. ಇದು ಪ್ರವಾಸಿಗರಿಗೆ ಮತ್ತಷ್ಟು ಆಕರ್ಷಣಿ ಯವಾಗಿದ್ದು, ಪಟ್ಟಣದ ಯಾವುದೊ ದೊಡ್ಡ ಉದ್ಯಾನವನದಲ್ಲಿ ಕುಳಿತುಕೊಂಡಂತೆ ಭಾಸವಾಗುತ್ತದೆ. ಹೀಗಾಗಿ ಪರೀಕ್ಷೆ ಸಂದರ್ಭದಲ್ಲಿ ಇಲ್ಲಿಗೆ ಬಂದು ಓದಿಕೊಳ್ಳುತ್ತೇನೆ. ಆವರಣದಲ್ಲಿ ಪ್ಲಾಸ್ಟಿಕ್‌ ಬೀಳದಂತೆ ಮತ್ತು ಯಾವುದೇ ಅನ್ಯ ಚಟುವಟಿಕೆಗಳನ್ನು ನಡೆದಂತೆ ಕಾವಲುಗಾರರನ್ನು ನಿಯೋಜಿಸಲಾಗಿದೆ ಎಂದು ವಿದ್ಯಾರ್ಥಿ ವಿಕಾಸ ಹೇಳುತ್ತಾರೆ.

ಮಳೆಗಾಲ ಇರುವುದರಿಂದ ಈಗ ಶರಣ ನುಲಿಯ ಚಂದಯ್ಯನವರ ಗವಿಯು ಸಂಪೂರ್ಣವಾಗಿ ಹಸಿರು ಮಯವಾಗಿದೆ. ಒಳಗೆ ಹೋಗುತ್ತಿದ್ದಂತೆ ಯಾವುದೋ ಪ್ರಾಚಿನ ಕಾಲದ ಐತಿಹಾಸಿಕ ಸ್ಥಳಕ್ಕೆ ಹೋದಂತಾಗುತ್ತದೆ ಎನ್ನುತ್ತಾರೆ ಇಲ್ಲಿರುವ ಬರುವ ಪ್ರವಾಸಿರು.

Advertisement

ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ನಗರದ ಬಹುತೇಕ ಶರಣರ ಸ್ಥಳಗಳನ್ನು ಕೋಟಂತ್ಯರ ರೂ. ಖರ್ಚು ಮಾಡಿ ಅಭಿವೃದ್ಧಿಗೊಳಿಸಲಾಗಿದೆ. ಆದರೆ ನಿರ್ಲಕ್ಷ್ಯದಿಂದ ಈಗಾಗಲೇ ಕೆಲವು ಶರಣರ ಸ್ಥಳಗಳು ಹಾಳಾಗುತ್ತಿರುವುದರಿಂದ ಪ್ರವಾಸಿಗರು ಬೇಸರ ಪಡುವಂತಾಗಿದೆ.

ಆದ್ದರಿಂದ ಸರ್ಕಾರದ ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಲಾದ ಶರಣರ ಸ್ಥಳಗಳನ್ನು ಹಾಳಾಗದಂತೆ ಮುಂದಿನ ಪೀಳಿಗಾಗಿ ಜೋಪಾನವಾಗಿ ಸಂರಕ್ಷಣೆ ಮಾಡಬೇಕು ಎಂಬುವುದು ಪ್ರತಿಯೊಬ್ಬರ ಆಶಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next