Advertisement

ಯಾಂತ್ರಿಕ ಬದುಕಿನಿಂದ ನೆಮ್ಮದಿ ಭಂಗ

10:18 AM Aug 17, 2019 | Team Udayavani |

ಬಸವಕಲ್ಯಾಣ: ಪ್ರಸ್ತುತ ದಿನಗಳಲ್ಲಿ ನಾವು ಯಾಂತ್ರಿಕ ಜೀವನದಿಂದ ಶಾಂತಿ-ನೆಮ್ಮದಿ ಕಳೆದು ಕೊಂಡು ಎಲ್ಲವೂ ಇದ್ದು ಏನೂ ಇಲ್ಲದಂತಹ ಹಂತಕ್ಕೆ ಬಂದು ತಲುಪಿದ್ದೇವೆ ಎಂದು ನಗರಸಭೆ ಆಯುಕ್ತ ಸುರೇಶ ಬಬಲಾದ ಹೇಳಿದರು.

Advertisement

ನಗರದ ಗವಿಮಠದಲ್ಲಿ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ ಗವಿಮಠ ಟ್ರಸ್ಟ್‌, ಶ್ರೀಮದ್ವೀರಶೈವ ಸದ್ಭೋಧನ ಸಂಸ್ಥೆ ಮತ್ತು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸಹಯೋಗದಲ್ಲಿ ಶ್ರಾವಣಮಾಸ ನಿಮಿತ್ತ ಹಮ್ಮಿಕೊಂಡಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಉತ್ಸಾಹ- ನೆಮ್ಮದಿ ಬರಬೇಕಾದರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅವಶ್ಯವಾಗಿದೆ ಎಂದರು.

ಸಿಪಿಐ ಮಲ್ಲಿಕಾರ್ಜುನ ಯಾತನೂರ ಮಾತನಾಡಿ, ಸಿದ್ಧಾಂತ ಶಿಖಾಮಣಿ ಉಪದೇಶ ಕೇಳುವುದೇ ಭವ್ಯವಾಗಿದೆ. ಹುಮನಾಬಾದ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ಸಿದ್ಧಾಂತ ಶಿಖಾಮಣಿ ಕುರಿತು ಒಂದು ತಿಂಗಳು ಶ್ರೀ ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯರು ನೀಡಿರುವ ಉಪದೇಶ ಇಂದಿಗೂ ಮರೆತಿಲ್ಲ ಎಂದರು.

ಸಾನ್ನಿಧ್ಯ ವಹಿಸಿದ್ದ ಗವಿಮಠದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ, ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಅಗಸ್ತ್ಯರಿಗೆ ಬೋಧಿಸಿದ ಸಿದ್ಧಾಂತ ಶಿಖಾಮಣಿಯಲ್ಲಿ ಆಚಾರ ಪರಮೊ ಧರ್ಮ ಎಂದು ಉಪದೇಶಿಸಿದ್ದಾರೆ. ಅಂದರೆ ಪರಿಶುದ್ಧವಾದ ನಡೆ- ನುಡಿಯೇ ಶ್ರೇಷ್ಠ ಧರ್ಮ ಎಂದು ಹೇಳಿದ್ದಾರೆ. ಅದೇರೀತಿ ವಚನ ಸಾಹಿತ್ಯದಲ್ಲಿ ಶಿವಶರಣರು ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂದು ಹೇಳಿದ್ದಾರೆ. ಈ ತತ್ವಗಳನ್ನು ಎಲ್ಲರೂ ಸರಿಯಾಗಿ ಅರಿತು ಅವುಗಳಂತೆ ಬದುಕು ಸಾಗಿಸಿದರೆ ಬದುಕೇ ಸ್ವರ್ಗವಾಗುತ್ತದೆ ಎಂದು ಸಲಹೆ ನೀಡಿದರು.

ಶಿಕ್ಷಕ ನಾಗೇಂದ್ರ ಬಿರಾದಾರ್‌ ವಿಶೇಷ ಉಪನ್ಯಾಸ ನೀಡಿದರು. ಟ್ರಸ್ಟ್‌ ಕಾರ್ಯಾಧ್ಯಕ್ಷ ಶರಣಪ್ಪಾ ಬಿರಾದಾರ, ಸಂಸ್ಥೆ ಅಧ್ಯಕ್ಷ ಬಸವಂತಪ್ಪ ಲವಾಕೆ, ಅನೀಲ ಪಾಟೀಲ, ವಿಶ್ವನಾಥ ಬಿರಾದಾರ, ಗುರುಲಿಂಗಯ್ಯ ಕಳಗಿಮಠ ಮಲ್ಲಿಕಾರ್ಜುನ ಅಲಶೆಟ್ಟೆ, ಬಾಬುರಾವ್‌ ಚಳಕಾಪೂರೆ, ಮಲ್ಲಿಕಾಜುನ ನಂದಿ, ಪ್ರೊ| ದಯಾನಂದ ಶೀಲವಂತ, ರೇವಣಸಿದ್ಧಯ್ಯ ಮಠಪತಿ, ವೀರಶೆಟ್ಟಿ ಪಾಟೀಲ, ಕಾಶೀನಾಥ ಕಡಗಂಚೆ, ಶೇಖರ ವಸ್ತ್ರದ, ಲೋಕೇಶ ಮಠ, ಸಿದ್ರಾಮಯ್ಯ ಹಿರೇಮಠ ಮತ್ತಿತರರು ಇದ್ದರು. ಪ್ರೊ| ಸೂರ್ಯಕಾಂತ ಶೀಲವಂತ ಸ್ವಾಗತಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಆಲಗೂಡೆ ನಿರೂಪಿಸಿದರು. ಕಾಶೀನಾಥ ಸ್ವಾಮಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next