ಬಸವಕಲ್ಯಾಣ: ಸಾರ್ವಜನಿಕರಿಗೆ ಮತ್ತು ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧಧ ಹಾಗೂ ಮಾತ್ರೆಗಳು ಸಿಗಬೇಕೆಂಬ ನಿಟ್ಟಿನಲ್ಲಿ ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆರಂಭಿಸಲಾದ ಪ್ರಧಾನ ಮಂತ್ರಿ ಭಾರತೀಯ ಜನೌಷಧಧ ಕೇಂದ್ರವು ಬಡವರ ಪಾಲಿಗೆ ಇದ್ದೂ ಇಲ್ಲದಂತಾಗಿದೆ.
Advertisement
ಭಾರತೀಯ ಜನೌಷಧ ಕೇಂದ್ರದ ಟ್ರೇ ದಲ್ಲಿ ಕೇವಲ ಬೆರಳೆಣಿಕೆಯಷ್ಟು ಔಷಧಯ ಬಾಟಲ್ ಹಾಗೂ ಮಾತ್ರೆಗಳಿದ್ದು, ಇದು ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿ ಉಪಯೋಗಕ್ಕೆ ಬಾರದಂತಾಗಿದೆ. ಇದರಿಂದ ಕಡಿಮೆ ದರದಲ್ಲಿ ಔಷಧಗಳು ಸೀಗುತ್ತವೆ ಎಂಬ ಆಶೆಯಿಂದ ಇಲ್ಲಿಗೆ ಬರುವ ರೋಗಿಗಳಿಗೆ ನಿರಾಶೆಯಾಗುತ್ತಿದೆ.
Related Articles
Advertisement
ಇದರಿಂದ ಬಡ ರೋಗಿಗಳು ಬೇರೆಕಡೆ ದುಬಾರಿ ಹಣ ನೀಡಿ ಮಾತ್ರೆ ಮತ್ತು ಔಷಧ ಖರೀದಿ ಮಾಡಬೇಕಾಗಿದೆ. ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧ ಸಿಗಬೇಕು ಎಂಬ ನಿಟ್ಟಿನಲ್ಲಿ ಆರಂಭಿಸಲಾದ ಕೇಂದ್ರ ಗುತ್ತಿಗೆದಾರರ ಮತ್ತು ಅಧಿಕಾರಿಗಳ ನಿರ್ಲಕ್ಷದಿಂದ ಉಪಯೋಗಕ್ಕೆ ಬಾರದಂತಾಗಿರುವುದು ರೋಗಿಗಳ ಆಕ್ರೋಷಕ್ಕೆ ಕಾರಣವಾಗಿದೆ.
ಬೀದರ್ ಜಿಲ್ಲೆಯ ಉಪವಿಭಾಗವಾದ ಬಸವಕಲ್ಯಾಣದ ಭಾರತೀಯ ಜನೌಷಧ ಕೇಂದ್ರವೇ ಈ ಹಂತಕ್ಕೆ ತಲುಪಿದೆ ಎಂದರೆ, ಬೇರೆ ತಾಲೂಕಿನಲ್ಲಿರುವ ಈ ಕೇಂದ್ರಗಳ ಸ್ಥಿತಿ ಹೇಗಿರಬಹುದು ಎಂಬಂತಾಗಿದೆ. ಸಂಬಂಧ ಪಟ್ಟವರು ಇನ್ನಾದರೂ ಜನೌಷಧ ಕೇಂದ್ರದ ಕಡೆ ಗಮನ ಹರಿಸಿ ಬಡ ರೋಗಿಗಳಿಗೆ ಅನುಕೂಲವಾಗುವಂತೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಕೇಂದ್ರಕ್ಕೆ ವಿದ್ಯುತ್ ಸಂಪರ್ಕ- ಫ್ರಿಡ್ಜ್ ಇಲ್ಲತಾಲೂಕು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕೆಲವು ವರ್ಷಗಳ ಹಿಂದೆ ಜನೌಷಧ ಕೇಂದ್ರ ಆರಂಭಿಸಿದ್ದರು. ಅಲ್ಲಿ ಇಂದಿಗೂ ಫ್ರಿಡ್ಜ್ ಮತ್ತು ವಿದ್ಯುತ್ ಸಂಪರ್ಕ ನೀಡಿಲ್ಲ. ಇದರಿಂದ ಗೊತ್ತಾಗುತ್ತದೆ ಕಾಟಚಾರಕ್ಕಾಗಿ ಇದನ್ನು ತೆರೆದು ಇಡಲಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.