Advertisement

ದಿನಪೂರ್ತಿ ಸಿಎಂ ಕಾರ್ಯಕ್ರಮ

10:25 AM Jun 12, 2019 | Team Udayavani |

ವೀರಾರೆಡ್ಡಿ ಆರ್‌.ಎಸ್‌
ಬಸವಕಲ್ಯಾಣ:
ಉಜಳಂಬ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜೂ.29ರಂದು ಗ್ರಾಮ ವಾಸ್ತವ್ಯ ಮಾಡಲಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಂದು ಬೆಳಗ್ಗೆಯಿಂದ ರಾತ್ರಿವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

Advertisement

ಬೆಳಗ್ಗೆ ರಾಜಕೀಯ ನಾಯಕರು ಹಾಗೂ ಗ್ರಾಮಸ್ಥರಿಂದ ಸ್ವಾಗತ ಸಮಾರಂಭ ನಡೆಯಲಿದೆ. ನಂತರ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುವ ಜನರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಕ್ತ ಅವಕಾಶ ನೀಡಲಿದ್ದಾರೆ. ಬೀದರ್‌ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಬಂಡೆಪ್ಪ ಖಾಂಶೆಪೂರ ಇಲ್ಲಿಯವರಾಗಿರುವುದರಿಂದ ಸಹಕಾರಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಿಗೆ ಜಿಲ್ಲೆಯ ಜನರ ಜೊತೆ ಚರ್ಚೆಸಲು ಏರ್ಪಡಿಸಿರುವ ಸಭೆಯಲ್ಲಿ ಅವರು ಪಾಲ್ಗೊಂಡು ಸಲಹೆ-ಸೂಚನೆ ನೀಡಲಿದ್ದಾರೆ.

ಸಂಜೆ ಉಜಳಂಬ ಗ್ರಾಮದ ವ್ಯಾಪ್ತಿಗೆ ಒಳಪಡುವ ಹಾಗೂ ಗಡಿಭಾಗದ ಸಮಸ್ಯೆಗಳನ್ನು ಆಲಿಸುವುದರ ಜೊತೆಗೆ ಅವರ ಅಹವಾಲು ಸ್ವೀಕರಿಸಲಿದ್ದಾರೆ. ರಾತ್ರಿ ಶಾಲಾ ಆವರಣದಲ್ಲಿ ಗಡಿಭಾಗದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆಯಲಿರುವ ಚಕ್ರಿ ಭಜನೆ, ಲಮಾಣಿ ನೃತ್ಯ ಹಾಗೂ ರೂಪಕ ನಾಟರ ವೀಕ್ಷಣೆ ಜೊತೆಗೆ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಲು ಕುಮಾರಸ್ವಾಮಿ ಹೆಚ್ಚು ಆದ್ಯತೆ ನೀಡಲಿದ್ದಾರೆ. ಜೂ.30ರಂದು ಬೆಳಗ್ಗೆ 10 ಗಂಟೆಗೆ ಉಜಳಂಬ ಗ್ರಾಪಂ ವ್ಯಾಪ್ತಿಗೆ ಒಳಪಡುವ ಹಾಗೂ ಶೇ.100ರಷ್ಟು ಪರಿಶಿಷ್ಟ ಜಾತಿ ಜನ ಇರುವ ಧಮುರಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಬಗ್ಗೆ ತಿಳಿದುಕೊಳ್ಳಲಿದ್ದಾರೆ ಎಂದು ಶಾಸಕ ಬಿ.ನಾರಾಯಣರಾವ್‌ ತಿಳಿಸಿದ್ದಾರೆ.

ಸಿಎಂ ಕುಮಾರಸ್ವಾಮಿ 24 ಗಂಟೆ ಉಜಳಂಬ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಹೀಗಾಗಿ ಒಂದು ನಿಮಿಷ ಕೂಡ ವ್ಯರ್ಥವಾಗದಂತೆ ಬಸವಕಲ್ಯಾಣ ನಗರ, ಗಡಿಭಾಗದ ಸಮಸ್ಯೆ ನಿವಾರಣೆಗೆ ಬಳಸಿಕೊಳ್ಳುವುದರ ಕುರಿತು ಸಿದ್ಧತೆ ಮಾಡಿಕೊಳ್ಳಲಾಗಿದೆ.
•ಬಿ.ನಾರಾಯಣರಾವ್‌,
ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next