ಬಸವಕಲ್ಯಾಣ: ಗ್ರಾಮಗಳು ಅಭಿವೃದ್ಧಿಯಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂಬ ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯ ಸಂಕಲ್ಪವನ್ನು ನಾವೆಲ್ಲ ಪಾಲಿಸಬೇಕು ಮತ್ತು ಗ್ರಾಮವನ್ನು ಸ್ವಚ್ಛವಾಗಿರಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಸಂಸದ ಭಗವಂತ ಖೂಬಾ ಹೇಳಿದರು.
ಮಹಾತ್ಮ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ನಿಮಿತ್ತ ನಾರಾಯಣಪೂರ ಗ್ರಾಮದಲ್ಲಿ ನಡೆದ ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ವಿಷಮುಕ್ತ ಆಹಾರ ಉತ್ಪಾದನೆ, ಗೋರಕ್ಷಣೆ, ಜಲ-ಅರಣ್ಯ ಸಂಪತ್ತಿನ ಮಹತ್ವ ಹಾಗೂ ರಕ್ಷಣೆ ಮಾಡುವುದರತ್ತ ಗ್ರಾಮೀಣ ಯುವಜನತೆ ಸಂಕಲ್ಪ ಮಾಡಬೇಕಾಗಿದೆ.
ಮಳೆ ನೀರು ಹರಿದು ಹೋಗದಂತೆ ತಡೆದು ಇಂಗಿಸಬೇಕು. ವೈಯಕ್ತಿಕ ಶುಚಿತ್ವಕ್ಕೆ ಹೆಚ್ಚು ಗಮನ ಹರಿಸಬೇಕು. ಬಯಲಿನಲ್ಲಿ ಶೌಚಕ್ಕೆ ಹೋಗುವುದನ್ನು ನಿಲ್ಲಿಸಬೇಕು. ಸ್ವಚ್ಛ ಭಾರತ ಯೋಜನೆಯಡಿ ಮನೆಯಲ್ಲಿ ಕಟ್ಟಿಸಿಕೊಟ್ಟ ಶೌಚಾಲಯವನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಬಳಸಬೇಕು ಎಂದು ಸಲಹೆ ನೀಡಿದರು.
ನಂತರ ನಡೆದ ಪಾದಯಾತ್ರೆಯಲ್ಲಿ ಗಾಂಧಿಧೀಜಿ ಅವರ ತತ್ವ-ಸಿದ್ಧಾಂತ ಹಾಗೂ ಆದರ್ಶಗಳನ್ನು ಮನೆ ಮನೆಗೆ ತಲುಪಿಸಲು ಪ್ರಯತ್ನಿಸಿದರು. ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಂಸದರನ್ನು ಸ್ವಾಗತಿಸಿದರು.
ಬಿಜೆಪಿ ನಗರಾಧ್ಯಕ್ಷ ಶಿವಪುತ್ರ ಗೌರ, ಗ್ರಾಮೀಣಾಧ್ಯಕ್ಷ ವೀರಣ್ಣ ಹಲಗೆ, ಮುಖಂಡರಾದ ಬಾಬು ವಾಲಿ, ವಿಜಯಕುಮಾರ ಮಂಠಾಳೆ, ಶರಣು ಸಲಗರ, ದಿಪಕ್ ಗುಡ್ಡಾ, ಪ್ರದೀಪ್ ವಾತಡೆ, ರವಿ ಸ್ವಾಮಿ, ಸೀದ್ರಾಮ ಕುರಿಕೋಟೆ, ಅರ್ಜುನ್‌ಸಿಂಗ್ ಠಾಕೂರ್, ಪಿಡಿಒ ಶಿವಯ್ಯ ಸ್ವಾಮಿ, ಮಲ್ಲರೆಡ್ಡಿ, ಸದಾನಂದ ಪಾಟೀಲ, ಶಿವಾ ಕಲೋಜಿ, ಶಿವಕುಮಾರ ಶೆಟಗಾರ್, ಪ್ರದೀಪ ಗಡವಂತೆ, ಪದ್ಮಾಕರ್ ಪಾಟೀಲ, ಶಾಂತಪ್ಪ ಜಿ. ಪಾಟೀಲ, ದಿಪಕ್ ಗಾಯಕವಾಡ್, ಅರವಿಂದ ಮುತ್ತೆ, ರವಿ ಚಂದನಕೆರೆ ಯಾತ್ರೆಯಲ್ಲಿ ಪಾಲ್ಗೊಂಡಿದರು. ನಂತರ ಕಿಟ್ಟಾ ಗೋಕುಳ ಧನ್ನೂರ ಗ್ರಾಮಗಳಲ್ಲಿ ಯಾತ್ರೆ ನಡೆಸಿದರು.