Advertisement
ನಗರದ ಬಿಕೆಡಿಬಿ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಡಾ|ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ 43ನೇ ಉಪನ್ಯಾಸ ಹಾಗೂ ಶಂಕರಯ್ನಾ ಘಂಟಿ ನಿರ್ದೇಶನದ ‘ರಸಗಂಗಾಧರ’ ನಾಟಕ ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ರಸಗಂಗಾಧರ ನಾಟಕ ತತ್ವಶಾಶ÷ ಸೂಫಿ, ಕಾವ್ಯಶಾಸ್ತ್ರ ಮತ್ತು ಬದುಕಿನ ಆಳದ ದರ್ಶನ ನೀಡುತ್ತದೆ ಎಂದರು.
Related Articles
Advertisement
ವಚನ ಸಾಹಿತ್ಯದ ಪ್ರಸ್ತುತತೆ ಕುರಿತು ಪ್ರೊ| ಟಿ. ರಘುಪ್ರಸಾದ ಉಪನ್ಯಾಸ ನೀಡಿ, ವಚನ ಸಾಹಿತ್ಯ ಕನ್ನಡ ಸಂಸ್ಕೃತಿಯ ಪ್ರಧಾನ ಶಕ್ತಿಯಾಗಿದೆ. ನಡೆ ನುಡಿ ಸಿದ್ಧಾಂತದ ಮೇಲಿರುವ ಸಾಹಿತ್ಯ ವೈಚಾರಿಕ ಪ್ರಜ್ಞೆ ಮಾಡಿಸಿದ್ದಕ್ಕಾಗಿ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ. ಸಂವಿಧಾನದ ಆಶಯವನ್ನು ವಚನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಣುತ್ತೇವೆ. ಪ್ರಜಾ ಪ್ರಭುತ್ವದ ನಿಲುವುಗಳಾದ ಸಮಾನತೆ, ಸ್ವಾತಂತ್ರ್ಯದ ತಾತ್ವಿಕವಾಗಿ ವಚನಗಳಲ್ಲಿ ಅಡಕವಾಗಿವೆ. ಬಹುತ್ವ ಸಾರುವ ವಚನ ಸಾರ್ವಕಾಲಿಕವಾಗಿವೆ ಎಂದರು.
ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಜಿಪಂ ಸದಸ್ಯ ಆನಂದ ಪಾಟೀಲ, ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ, ಪೌರಾಯುಕ್ತರಾದ ಸುರೇಶ ಬಬಲಾದ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮೇತ್ರೆ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗುರುನಾಥ ಗಡ್ಡೆ, ಕಸಾಪ ಅಧ್ಯಕ್ಷರಾದ ಡಾ|ರುದ್ರಮುಣಿ ಮಠಪತಿ, ಡಾ| ಶಿವಲೀಲಾ ಮಠಪತಿ, ಯೋಗರಾಜ ಕೆ, ನಾಗೇಂದ್ರ ಢೋಲೆ, ಡಾ|ಜಯಶೇನ ಪ್ರಸಾದ, ಚಂದ್ರಕಾಂತ ಕಿವಡೆ, ಡಾ|ಎ.ಡಿ. ಪಾಟೀಲ, ಮಲ್ಲಪ್ಪಾ ಧಬಾಲೆ, ರಾಜಕುಮಾರ ಸಿರಗಾಪೂರ, ನೀಲಕಂಠ ರಾಠೊಡ, ಅರ್ಜುನ ಕನಕ, ಚಂದ್ರಕಾಂತ ಅಕ್ಕಣ್ಣ, ಸೂರ್ಯಕಾಂತ ಪಾಟೀಲ, ಡಾ|ಕ್ಷೇಮಲಿಂಗ ಬಿರಾದಾರ ಇದ್ದರು. ದೇವೀಂದ್ರ ಬರಗಾಲೆ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ. ಹುಡೆದ ಸ್ವಾಗತಿಸಿದರು. ಡಾ|ಭೀಮಾಶಂಕರ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಡಾ| ಶಿವಾಜಿ ಮೇತ್ರೆ ವಂದಿಸಿದರು. ಎಸ್.ಬಿ.ಆರ್. ಶಾಲೆಯ ವಿಧ್ಯಾರ್ಥಿನಿ ಸುಧಾ ದತ್ತಾತ್ರಿ ಹಾಗೂ ನಾರಾಯಣಪೂರ ಸರಕಾರಿ ಪ್ರೌಢಶಾಲೆಯ ವಿಧ್ಯಾರ್ಥಿನಿಯರಿಂದ ವಚನ ನೃತ್ಯ ನಡೆಯಿತು.