Advertisement
ನಗರದ ಬಂದವರ ಓಣಿಯಲ್ಲಿನ ರಾಮಲಿಂಗೇಶ್ವರ ಲಿಂಗ, ಭಾವಚಿತ್ರ ತೆರವು ಮತ್ತು ಅಕ್ಕಮಹಾದೇವಿ ಭಾವಚಿತ್ರ ಅಳವಡಿಸಿರುವ ವಿಷಯಕ್ಕೆ ಸಂಬಂಧ ಪಟ್ಟಂತೆ ಬಿಕೆಡಿಬಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
ನಂತರ ಜಿಲ್ಲಾಧಿಕಾರಿ ಡಾ| ಎಚ್.ಆರ್.ಮಹಾದೇವ ಹಾಗೂ ಬಿಕೆಡಿಬಿ ಆಯುಕ್ತ ಶರಣಬಸಪ್ಪ ಕೊಟ್ಟೆಪ್ಪಗೋಳ ಅವರು, ಯಾರಾದರೂ ಭಾಷಣ, ಪ್ರವಚನ ಮಾಡಿದರೆ ಆ ಸ್ಥಳ ಅವರದಾಗಲು ಸಾಧ್ಯವಿಲ್ಲ. ಸಮಗಾರ ಹರಳಯ್ಯ ಗವಿಗೆ ಮೊದಲು ಯಾರೂ ಬರುತ್ತಿರಲಿಲ್ಲ. ಹಾಗಾಗಿ ಮೂರು ವರ್ಷಗಳಿಂದ ಅಕ್ಕ ಡಾ|ಗಂಗಾಂಬಿಕೆ ಅವರು ಪೀಠ ಮಾಡಿಕೊಂಡು ಪ್ರವಚನ ಮಾಡುತ್ತಿದ್ದಾರೆ ಹೊರತು ಪೀಠಕ್ಕೂ ಹಾಗೂ ಹರಳಯ್ಯ ಗವಿಗೂ ಯಾವುದೇ ತರಹದ ಸಂಬಂಧವಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಶಾಸಕ ಬಿ.ನಾರಾಯಣರಾವ್ ಮಾತನಾಡಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲೆಯ ಎಲ್ಲಾ ಪ್ರತಿನಿಧಿಗಳು ಪಕ್ಷಾತೀತವಾಗಿ 12ನೇ ಶತಮಾನದ ವಿಶ್ವಗುರು ಬಸವಣ್ಣನವರ ಭೂಮಿಯನ್ನು ಅಂತಾರರಾಷ್ಟ್ರೀಯ ತಾಣ ಮಾಡಬೇಕು ಎಂಬ ಪ್ರಯತ್ನದಲ್ಲಿ ಇದ್ದೇವೆ. ಇಂತಹ ಸಂದರ್ಭದಲ್ಲಿ ಕಚ್ಚಾಡುವುದು ಸರಿಯಲ್ಲ. ಜಿಲ್ಲಾಧಿಕಾರಿ ಹೇಳಿದ ಮಾತಿನಂತೆ ಎಲ್ಲರೂ ಒಪ್ಪಿಕೊಂಡು ಅದರಂತೆ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ, ಇಒ ಮಡೋಳಪ್ಪಾ ಪಿಎಸ್, ಸಿಪಿಐ ಮಲ್ಲಿಕಾರ್ಜುನ ಯಾತನೂರ, ಪಿಎಸ್‌ಐ ಹಾಗೂ ಶ್ರೀ ಶಿವಶರಣ ಹರಳಯ್ಯ ಸಮಾಜದ ಸಂಘದ ಪದಾಧಿಕಾರಿಗಳು ಹಾಗೂ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಸಮಿತಿ ಪದಾಧಿಕಾರಿಗಳು ಇದ್ದರು.