Advertisement

ವೈಭವದ ನಡೆದ ಬಸವೇಶ್ವರರ ತೊಟ್ಟಿಲು ಮೆರವಣಿಗೆ

02:54 PM May 08, 2019 | Naveen |

ಬಸವಕಲ್ಯಾಣ: ಮಹಾತ್ಮ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಬಸವೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

Advertisement

ಬೆಳಗ್ಗೆ ಬಸವಣ್ಣನವರ ಮೂರ್ತಿಗೆ ಅಷ್ಠಗಂಧ ಪೂಜೆ ಹಾಗೂ ಬಸವ ಭಕ್ತರಿಂದ ವಚನ ಪಠಣ, ಬಸವಣ್ಣವರ ಬೆಳ್ಳಿ ತೊಟ್ಟಿಲು ಪೂಜೆ ಹಾಗೂ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಶಾಸಕ ಬಿ.ನಾರಾಯಣರಾವ್‌ ಬೆಳ್ಳಿ ತೊಟ್ಟಿಲು ಪೂಜೆ ನೆರವೇರಿಸಿದರು. ಸಹಾಯಕ ಆಯುಕ್ತ ಜ್ಞಾನೇಂದ್ರಕುಮಾರ ಗಂಗಾವಾರ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ನಗರದ ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತದ ಮುಖಾಂತರ ಶಿವಶರಣ ಹರಳಯ್ಯ ವೃತ್ತದಲ್ಲಿ ಸಮಾಪ್ತಿಗೊಂಡಿತು.

ಮೆರವಣಿಗೆ ಉದಕ್ಕೂ ವಿಶ್ವಗುರು ಬಸವಣ್ಣನವರಿಗೆ, ಮಹಾನ್‌ ಮಾನವತಾವಾದಿ ಹಾಗೂ ವನಚಕ್ರಾಂತಿ ರೂವಾರಿ, ಕಾಯಕ, ದಾಸೋಹ ಸಂಸ್ಕೃತಿಯನ್ನು ಅನುಷ್ಠಾನಕ್ಕೆ ತಂದ ಮಹಾನ್‌ ನಾಯಕ ಬಸವಣ್ಣನಣ್ಣವರಿಗೆ ಜೈಹೋ ಎಂಬ ಘೋಷಣೆಗಳು ಕೇಳಿಬಂದವು.

ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳ ನೃತ್ಯ, ಡೊಳ್ಳು ಕುಣಿತ, ಮಕ್ಕಳ ಕೋಲಾಟ ಹಾಗೂ ಶರಣರ ಸ್ತಬ್ಧ ಚಿತ್ರಗಳು ಸಾರ್ವಜನಿಕರ ಮನಸ್ಸು ಸೆಳೆದವು. ಬೇಸಿಗೆ ಹಿನ್ನೆಲೆಯಲ್ಲಿ ರಸ್ತೆ ಉದಕ್ಕೂ ಬಸವಾಭಿಮಾನಿಗಳು ಮತ್ತು ಸಾರ್ವಜನಿಕರು ಅಲ್ಲಲ್ಲಿ ಕುಡಿಯುವ ನೀರಿನ ಮತ್ತು ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

Advertisement

ಡಾ| ಗಂಗಾಂಬಿಕಾ ಅಕ್ಕ, ತಹಶೀಲ್ದಾರ್‌ ಸಾವಿತ್ರಿ ಶರಣು ಸಲಗರ, ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ, ವಿಶ್ವಸ್ಥ ಸಮಿತಿ ಪದಾಧಿಕಾರಿಗಳು, ಬಸವಾಭಿಮಾನಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next