Advertisement

ಮಾ.15ಕ್ಕೆ ಪಂಚಮಸಾಲಿ ಹೋರಾಟದ ರೂಪುರೇಷೆ ಬಗ್ಗೆ ತೀರ್ಮಾನ :ಬಸವ ಜಯಮೃತ್ಯುಂಜಯ ಸ್ವಾಮೀಜಿ

06:38 PM Mar 12, 2021 | Team Udayavani |

ಬೆಂಗಳೂರು : ಮಾ.15ರಂದು ಸೋಮವಾರ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಘಟಕ, ರಾಜ್ಯ, ಜಿಲ್ಲಾ, ತಾಲೂಕು, ನಗರ, ಹೋಬಳಿ ಘಟಕದ ಪದಾಧಿಕಾರಿಗಳು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

Advertisement

ರಾಜ್ಯ ಸರ್ಕಾರದಿಂದ ಈವರೆಗೂ, ಪಂಚಮಸಾಲಿ ಸಮುದಾಯಕ್ಕೆ ಸ್ಪಷ್ಟ ನಿರ್ಧಾರ ತಲುಪದ ಹಿನ್ನೆಲೆಯಲ್ಲಿ 2ಎ ಮೀಸಲಾತಿಗೆ ಆಗ್ರಹಿಸಿ, ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರವೂ ಮುಂದುವರಿದ ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಅವರು ಮಾತನಾಡಿದರು.

ಮಾ.15 ರಂದು ಅಧಿಕೃತವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ, ಈ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು. ಇದರ ಹೊರತಾಗಿ, ಬೇರೆ ಯಾವ ಸಚಿವರು ಸಹ ಅವರ ಪರವಾಗಿ ಉತ್ತರ ಕೊಟ್ಟರೂ ನಾವು ಒಪ್ಪುವುದಿಲ್ಲ. ಮಾ.15ರವರೆಗೂ ನಮ್ಮ ಈ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಮಹಾ ಶಿವರಾತ್ರಿ ಪ್ರಯುಕ್ತ ಸಮುದಾಯದ ಹಲವರು ತಮ್ಮ ಊರುಗಳಿಗೆ ತೆರಳಿದ್ದಾರೆ. ಅವರೆಲ್ಲರೂ ಮರಳಿ ಬೆಂಗಳೂರಿಗೆ ಬರುತ್ತಾರೆ. ಬಳಿಕ ಸೋಮವಾರದವರೆಗೂ ಮುಂದುವರಿಯುವ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಶಿವಾನುಭವ ಮಂಟಪ:
ಸ್ವತಂತ್ರ ಉದ್ಯಾನದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ 20ನೇ ದಿನ ಪೂರೈಸಿದೆ. ಮಹಾ ಶಿವರಾತ್ರಿ ಪ್ರಯುಕ್ತ ಗುರುವಾರ ರಾತ್ರಿ ಹಳೆ ಸೆಂಟರ್‌ ಜೈಲು, ಶಿವಾನುಭವ ಮಂಟಪವಾಗಿ ಪರಿವರ್ತನೆಯಾಗಿತ್ತು. ಅಹೋರಾತ್ರಿ ಇಷ್ಟಲಿಂಗ ಪೂಜೆ, ಭಜನೆ ಹಾಗೂ ಇನ್ನಿತರ ಸಂಗೀತ ಕಾರ್ಯಕ್ರಮ ಮೂಲಕ ಜಾಗರಣೆ ಮಾಡಲಾಗಿತ್ತು.

Advertisement

ಈ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌, ಪಂಚಸೇನೆ ರಾಜ್ಯ ಅಧ್ಯಕ್ಷ ಡಾ.ಬಸನಗೌಡ ಪಾಟೀಲ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ, ಮಲ್ಲನಗೌಡ ಎಸ್‌.ಬಿರಾದರ್‌, ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷ ವಿರಾಜ್‌ ಪಾಟೀಲ್‌, ಮುಖಂಡ ಮಹಾಂತೇಶ್‌, ವಿಜಯ್‌, ಸಂಜು ಬಿರಾದರ್‌ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next