Advertisement

ಮಕ್ಕಳ ಶಿಕ್ಷಣ ಭವಿಷ್ಯಕ್ಕಾಗಿ ಕಾನೂನನ್ನು ಗೌರವಿಸಿ : ಬಸವಜಯ ಮೃತ್ಯುಂಜಯಶ್ರೀ

08:25 PM Apr 07, 2022 | Team Udayavani |

ವಿಜಯಪುರ :ಕರ್ನಾಟಕದ ಜನರು ಈ ನೆಲದ ಕಾನೂನನ್ನು ಗೌರವಿಸಿ, ಮಕ್ಕಳ ಶಿಕ್ಷಣ ಕೊಡಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನಿಸಬೇಕು. ಮಕ್ಕಳ ಶಿಕ್ಷಣ ಭವಿಷ್ಯಕ್ಕಾಗಿ ಅಗತ್ಯವಿದ್ದು, ಹೈಕೋರ್ಟ್ ತೀರ್ಪು ಪಾಲನೆ ಕುರಿತು ಎಲ್ಲ ಸಮಾಜದ ಧರ್ಮಗುರುಗಳು ಮಾರ್ಗದರ್ಶನ ಮಾಡಬೇಕು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು.

Advertisement

ಗುರುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇವರ ಮೂರ್ತಿಯನ್ನು ಯಾರು ಕೆತ್ತಿದರು, ಕೆತ್ತಿದ್ದು ಯಾವ ಕಲ್ಲು ಎಂಬುದಕ್ಕಿಂತ ಭಾವನೆಗೆ ಧಕ್ಕೆ ತರದಂತೆ ಎಲ್ಲರೂ ಧಾರ್ಮಿಕ ಗೌರವ ಕಾಯಬೇಕು.ಲ ರಾಜ್ಯದಲ್ಲಿ ಉದ್ಭವಿಸಿರುವ ಗೊಂದಲ ನಿವಾರಣೆಗೆ ಮುಖ್ಯಮಂತ್ರಿಗಳು ಸರ್ವ ಸಮಾಜದ ಧರ್ಮ ಗುರುಗಳು, ಗಣ್ಯರ ಸೌಹಾರ್ದತಾ ಸಭೆ ಕರೆದು ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ : ಶಕ್ತಿಧಾಮಕ್ಕೆ 5 ಕೋಟಿ ರೂ. ಅನುದಾನ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವ ವಿಶ್ವಾಸವಿದೆ :

ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿಗಾಗಿ ಸರ್ಕಾರ ನೀಡಿದ್ದ ಕಾಲಾವಕಾಶ ಮೀರಿದೆ. ಏಪ್ರೀಲ್ 14 ರೊಳಗೆ ಮೀಸಲಾಗಿ ಘೋಷಿಸುವಂತೆ ಅಂತಿಮ ಗಡುವು ನೀಡಲಾಗಿದ್ದು, ಏ.10 ರಂದು ವಿಜಯಪುರ ಜಿಲ್ಲೆಯ ಇಂಚಗೇರಿ ಗ್ರಾಮದಲ್ಲಿ ನಡೆಯುವ ಕಿತ್ತೂರ ಚನ್ನಮ್ಮ ಪುತ್ಥಳಿ ಸ್ಥಾಪನೆ ಸಮಾವೇಶದಲ್ಲಿ ಅಂತಿಮ ಹಕ್ಕೊತ್ತಾಯ ಮಾಡಲಾಗುತ್ತದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು.

Advertisement

ಪಂಚಸಾಲಿ ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ವಿಷಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಕ್ತ ಸ್ಪಂದನೆ ನೀಡಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆದು ಮೀಸಲಾತಿ ಘೋಷಿಸುವ ವಿಶ್ವಾಸವಿದೆ. ಮೀಸಲಾತಿ ವಿಷಯದಲ್ಲಿ ನಾವು ನೀಡಿದ ಹೋರಾಟದ ಎಚ್ಚರಿಕೆ ಸಂದರ್ಭದಲ್ಲಿ ಬೊಮ್ಮಾಯಿ ಅವರು ಸ್ಪಂದನೆ ಮಾತನಾಡಿದ್ದಾರೆ ಎಂದರು.

ಚುನಾವಣೆ ಮುಂದಿರುವಾಗ ನಮ್ಮ ಸಮಾಜಕ್ಕೆ ಮೀಸಲುಘೋಷಿಸಿದರೆ ಬೊಮ್ಮಾಯಿ ಅವರ ಸರ್ಕಾರಕ್ಕೂ ಉತ್ತಮ ಭವಿಷ್ಯ ಸಿಗಲಿದೆ. ಇದರ ಹೊರತಾಗಿಯೂ ನಮ್ಮ ಸಮಾಜಕ್ಕೆ ಮೀಸಲು ಕಲ್ಪಿಸುವ ವಿಷಯವಾಗಿ ಏಪ್ರೀಲ್ 14 ರಂದು ಕೊನೆ ಗಡುವು ನೀಡಲಿದ್ದು, ತಪ್ಪಿದರೆ ಏಪ್ರೀಲ್ 20 ರಂದು ಮುಂದಿನ ಹೋರಾಟದ ಮುಂದಿನ ಸ್ವರೂಪದ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಎಚ್ಚರಿಸಿದರು.

ಮುಖ್ಯಮಂತ್ರಿ ಸಚಿವ ಸಂಪುಟದ ಸಂದರ್ಭದಲ್ಲಿ ಸಮಾಜಕ್ಕೆ ಆದ್ಯತೆ ನೀಡುತ್ತಾರೆ. ಅರ್ಹತೆ ಆಧಾರದಲ್ಲಿ ಸಚಿವ ಸ್ಥಾನದ ಅವಕಾಶ ಪಡೆಯಲು ಹಲವು ಶಾಸಕರಿದ್ದಾರೆ. ಸಮಾಜದ ಮೀಸಲು ಕಲ್ಪಿಸುವ ವಿಷಯದಲ್ಲಿ ನಮ್ಮ ಆದ್ಯತೆಯೇ ಹೊರತು, ಯಾರನ್ನೋ ಮಂತ್ರಿ ಮಾಡುವ ಆಶಯವಿಲ್ಲ. ಸಮಾಜಕ್ಕೆ ಮೀಸಲು ಕಲ್ಪಿಸುವುದಕ್ಕಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮಗೆ ಸಚಿವ ಸ್ಥಾನ ನೀಡಿದಿದ್ದರೂ ಸರಿ ಎಂದು ತ್ಯಾಗ ಮಾತನಾಡಿರುವುದು ಸಾಮಾನ್ಯದೇನಲ್ಲ ಎಂದು ಬಣ್ಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next