Advertisement
ನಗರದ ಕಂದಗಲ್ ಹನುಮಂತರಾಯ ಜಿಲ್ಲಾ ರಂಗಮಂದಿರ ಆವರಣದಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಉಪನ್ಯಾಸ ನೀಡಿದ ಪ್ರೊ| ಮಹಾದೇವ ರೆಬಿನಾಳ ಮಾತನಾಡಿ, ಬಸವಣ್ಣನವರ ಕ್ರಾಂತಿ ಸಂದರ್ಭದಲ್ಲಿ ಅವರಿಗೆ ಹೆಗಲಾಗಿ ನಿಂತವರಲ್ಲಿ ಮಾಚಿದೇವ ಶರಣರು ಕೂಡ ಒಬ್ಬರು. ಆಗಿನ ಅನುಭವ ಮಂಟಪ ಈಗಿನ ವಿಧಾನಸೌಧದಂತೆ ಕಾರ್ಯ ನಿರ್ವಹಿಸುತ್ತಿತ್ತು. ಅದರ ಸಕಲ ಜವಾಬ್ದಾರಿ ಮಾಚಿದೇವರು ವಹಿಸಿದ್ದರು ಎಂದು ಹೇಳಿದರು.
ಮಾಚಿದೇವ ಮಡಿವಾಳರ ಸಾವಿರಾರು ವಚನ ಸಾಹಿತ್ಯಗಳಲ್ಲಿ ಲಭ್ಯ ಇರುವುದು ಕೇವಲ 350 ವಚನಗಳು ಮಾತ್ರ. ಮೂಢನಂಬಿಕೆ ತೊಡೆದು ಹಾಕುವಲ್ಲಿ ಇವರ ಪಾತ್ರ ಅಪಾರವಾಗಿದೆ. ಬರಿಗೈಯಲ್ಲಿ ಇಡಿ ದೇಶವನ್ನೇ ಗೆಲ್ಲಬಹುದು ಎಂಬುದಕ್ಕೆ ಮಾಚಿದೇವರೆ ಉತ್ತಮ ಉದಾಹರಣೆ ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮದಲ್ಲಿ ವಿ.ಸಿ.ನಾಗಠಾಣ, ಶಿವು ಹುಬ್ಬಳ್ಳಿ, ಸಾಯಬಣ್ಣ ಮಡಿವಾಳರ, ಭಾರತಿ ಟಂಕಸಾಲಿ, ಶರಣಪ್ಪ ಕನ್ನೊಳ್ಳಿ ಸೇರಿದಂತೆ ಸಮಾಜದ ಮುಖಂಡರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎಚ್.ಬಿ. ವಿದ್ಯಾವತಿ ಸ್ವಾಗತಿಸಿದರು. ಶ್ರೀದೇವಿ ಭಂಡಾರಕರ ವಚನ ಗಾಯನ ನಡೆಸಿಕೊಟ್ಟರು. ಶಿಕ್ಷಕ ಹುಮಾಯೂನ ಮಮದಾಪುರ ನಿರೂಪಿಸಿದರು.
ಇದಕ್ಕೂ ಮೊದಲು ನಗರದ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮಡಿವಾಳ ಮಾಚಿದೇವ ಶರಣರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಚಾಲನೆ ನೀಡಿದರು. ಮೆರವಣಿಗೆ ಮಹಾತ್ಮ ಗಾಂಧಿಧೀಜಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ ಮಾರ್ಗವಾಗಿ ರಂಗಮಂದಿರ ತಲುಪಿತು.