Advertisement

ದೊರೆಸ್ವಾಮಿಗೆ ಬಸವ ಪುರಸ್ಕಾರ

03:32 PM Jul 12, 2019 | Suhan S |

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡಲಾಗುವ 2108ನೇ ಸಾಲಿನ ರಾಷ್ಟ್ರೀಯ, ಲಲಿತಕಲೆ ಮತ್ತು ಜಕಣಾಚಾರಿ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಈ ಸಂಬಂಧ ಇಲಾಖೆಯಿಂದ ಅನುಮೋದನೆ ದೊರೆತಿದ್ದು, ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳಬೇಕಿದೆ. ರಾಷ್ಟ್ರೀಯ ಬಸವ ಪುರಸ್ಕಾರಕ್ಕೆ ಸ್ವಾತಂತ್ರ್ಯಹೋರಾಟಗಾರ ಎಚ್.ಎಸ್‌. ದೊರೆಸ್ವಾಮಿ (ಹೋರಾಟ) ಅವರು ಆಯ್ಕೆಯಾಗಿದ್ದಾರೆ.

Advertisement

ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಗೆ ಚನೈನ ಟಿ.ಎನ್‌.ಕೃಷ್ಣನ್‌ (ಕರ್ನಾಟಕ ಸಂಗೀತ ವಾದ್ಯ), ಭಗವಾನ್‌ ಮಹಾವೀರ ರಾಷ್ಟ್ರೀಯ ಪ್ರಶಸ್ತಿಗೆ ಹಾವೇರಿ ಚನ್ನಮ್ಮ ಹಳ್ಳಿಕೇರಿ (ಅಂಹಿಸಾತ್ಮಕ) ಆಯ್ಕೆಯಾಗಿದ್ದಾರೆ.

ರಾಜ್ಯ ಪ್ರಶಸ್ತಿ: ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ ಬಾಗಲಕೋಟೆ ಪ್ರಕಾಶ್‌ ಕಡಪಟ್ಟಿ (ವೃತ್ತಿರಂಗಭೂಮಿ), ಜಾನಪದಶ್ರೀ ಪ್ರಶಸ್ತಿಗೆ ಬೀದರ್‌ನ ಚಂದ್ರಶಾ ತಮ್ಮಣ್ಣಪ್ಪ ಮಾಳಗೆ(ಜಾನಪದ ಹಾಡು), ಮೈಸೂರಿನ ಹಿನಕಲ್ ಮಹದೇವಯ್ಯ(ಮೌಖೀಕ ಕಾವ್ಯ), ವರ್ಣಶಿಲ್ಪಿ ಪ್ರಶಸ್ತಿಗೆ ಬೆಂಗಳೂರಿನ ಸಿ, ಚಂದ್ರಶೇಖರ ಹಾಗೂ ಜಕಣಾಚಾರ್ಯ ಪ್ರಶಸ್ತಿಗೆ ಉಡುಪಿಯ ಲಕ್ಷೀನಾರಾಯಣ ಆಚಾರ್ಯ ಆಯ್ಕೆಯಾಗಿದ್ದಾರೆ.

2018 ನೇ ಸಾಲಿನ ಸಾಹಿತ್ಯ ಸಾಂಸ್ಕೃತಿಕ ವಿಭಾಗದ ಪ್ರಶಸ್ತಿ: ಧಾರವಾಡದ ಎಚ್.ಎಂ.ಬೀಳಗಿ (ದಾನಚಿಂತಾಮಣಿ ಅತ್ತಿಮಬ್ಬ ಪ್ರಶಸ್ತಿ) ಚಿಕ್ಕಬಳ್ಳಾಪುರದ ಬಿ.ಗಂಗಾಧರ ಮೂರ್ತಿ (ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ), ವಿಜಾಪುರದ ಎಸ್‌.ಆರ್‌.ಹಿರೇಮs್ (ಸಂಗೊಳ್ಳಿರಾಯಣ್ಣ ಪ್ರಶಸ್ತಿ) ದು.ಸರಸ್ವತಿ (ಅಕ್ಕಮಹಾದೇವಿ ಪ್ರಶಸ್ತಿ), ಹಿರಿಯ ಸಾಹಿತಿ ಷ.ಶೆಟ್ಟರ್‌ (ಪಂಪ ಪ್ರಶಸ್ತಿಗೆ) ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಬಿ.ಭಾನುಮತಿ (ಶಾಂತಲಾ ನಾಟ್ಯ ಪ್ರಶಸ್ತಿ) ಸಿರಿಗೆ ರೇವಣ್ಣ ಸಿದ್ದಶಾಸ್ತ್ರೀ (ಕುಮಾರ ವ್ಯಾಸ ಪ್ರಶಸ್ತಿ), ಕನಕಗಿರಿಯ ಹುಸೇನ್‌ ಸಾಬ (ಸಂತ ಶಿಶುನಾಳ ಶರೀಪ ಪ್ರಶಸ್ತಿ) ಮತ್ತು ಧಾರವಾಡದ ಬಿ.ಎಸ್‌.ಮಠ (ನಿಜಗುಣಪುರಂದರ ಪ್ರಶಸ್ತಿಗೆ) ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ 10 ಲಕ್ಷ ರೂ. ಮತ್ತು ನಗದು, ರಾಜ್ಯ ಪ್ರಶಸ್ತಿ 5 ಲಕ್ಷ ರೂ. ನಗದು, ಪುರಸ್ಕಾರ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next