Advertisement

ಇಚ್ಛಾಶಕ್ತಿ ಹೆಚ್ಚಿಸುವುದು ಬಸವ ತತ್ವ

10:23 AM Sep 26, 2017 | Team Udayavani |

ಬಸವಕಲ್ಯಾಣ: ಬಸವ ತತ್ವ ಅನುಭಾವದ ತತ್ವವಾಗಿದೆ. ಬಸವ ತತ್ವ ಜೀವನದಲ್ಲಿ ಶಾಂತಿ, ನೆಮ್ಮದಿ ಕಲ್ಪಿಸುವ ಜತೆಗೆ ಒಳಲೋಕದ ಇಚ್ಛಾಶಕ್ತಿ ಹೆಚ್ಚಿಸುತ್ತದೆ ಎಂದು ಹಿರಿಯ ಸಾಹಿತಿ ರಂಜಾನ ದರ್ಗಾ ಹೇಳಿದರು.

Advertisement

ಇಲ್ಲಿಯ ಅಖೀಲ ಭಾರತ ಲಿಂಗವಂತ ಹರಳಯ್ಯ ಪೀಠ ಹಾಗೂ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಹರಳಯ್ಯನವರ ಗವಿಯಲ್ಲಿ ಆಯೋಜಿಸಲಾಗಿದ್ದ ಶರಣ ವಿಜಯ ಲಿಂಗವಂತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ
ಉಪನ್ಯಾಸ ನೀಡಿದ ಅವರು, ಜಗತ್ತಿನಲ್ಲಿಯೇ ಅತ್ಯಂತ ಮಹತ್ವದ ವೈಜ್ಞಾನಿಕ ಚಿಂತನೆ ತಳಹದಿಯ ಮೇಲೆ ವಿನೂತನ
ಕ್ರಾಂತಿಯನ್ನು ಜಗತ್ತಿಗೆ ನೀಡಿದ ಪವಿತ್ರ ನೆಲ ಕಲ್ಯಾಣವಾಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಹುಲಸೂರಿನ ಡಾ| ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಬಸವ ತತ್ವದಲ್ಲಿ ಪರಿಹಾರವಿದೆ. ವಚನಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರತಿಯೊಬ್ಬರು ಪ್ರಯತ್ನಿಸಬೇಕಾದ ಅಗತ್ಯವಿದೆ ಎಂದರು.

ನೇತೃತ್ವ ವಹಿಸಿದ್ದ ಡಾ| ಗಂಗಾಂಬಿಕಾ ಅಕ್ಕ ಮಾತನಾಡಿ, ಸಮಾನತೆಗಾಗಿ 12ನೇ ಶತಮಾನದಲ್ಲಿ ನಡೆದ ಕಲ್ಯಾಣದ
ಕ್ರಾಂತಿಯ ಬಗ್ಗೆ ಮುಂದಿನ ಪಿಳಿಗೆಗೆ ತಿಳಿಸಿಕೊಡಬೇಕಾದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಏಳು ದಿನಗಳ ವರೆಗೆ ನಡೆಯುವ ಶರಣ ವಿಜಯ ಕಾರ್ಯಕ್ರಮದ ಉದ್ದೇಶವೂ ಇದೆ ಆಗಿದೆ ಎಂದರು.

ಸಹಾಯಕ ಆಯುಕ್ತ ಶರಣಬಸಪ್ಪ ಕೊಟ್ಟಪಗೋಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾಜಿ ಶಾಸಕ ಎಂಜಿ ಮುಳೆ, ಕಾಂಗ್ರೆಸ್‌ ಮುಖಂಡ ಬಿ.ನಾರಾಯಣರಾವ್‌, ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಬಿಡಿಪಿಸಿ ಅಧ್ಯಕ್ಷ ವೀರಣ್ಣ ಹಲಶೆಟ್ಟಿ, ಉಪಾಧ್ಯಕ್ಷ ಜಗನ್ನಾಥ ಖೂಬಾ, ನಿರ್ದೇಶಕರಾದ ಅನೀಲ ರಗಟೆ, ಕಾಶೆಪ್ಪ, ಸಕ್ಕರಬಾವಿ, ಬೀದರನ ಡಾ| ಹಣಮಶೆಟ್ಟಿ, ಡಾ| ಸಿ.ಆನಂದರಾವ್‌, ಜನ್ನಬಸಪ್ಪ ಪತಂಗೆ ಇದ್ದರು. ಷಟ್‌ಸ್ಥಲ ಧ್ವಜಾರೊಹಣವನ್ನು ಹರಳಯ್ಯ ಸಮಾಜದ ಮುಖಂಡ ಸಂಜು ಜಾಧವ ನೆರವೇರಿಸಿದರು. ಬಿಕೆಡಿಬಿ ಸದಸ್ಯ ಶಿವರಾಜ ನರಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಗುರುನಾಥ ಗಡ್ಡೆ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next