Advertisement

ಅಪಘಾತಕ್ಕೆ ಬಸವ ಬಲಿ: ಮರುಗಿದ ಜನತೆ

11:38 AM Jun 25, 2017 | Team Udayavani |

ಬನ್ನೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಊರಿನ ಬಸವ ಸಾವನ್ನಪ್ಪಿರುವ ಘಟನೆ ಬನ್ನೂರಿನ ಮುಖ್ಯ ರಸ್ತೆ‌ ಚಾಮನಹಳ್ಳಿಯಲ್ಲಿ ನಡೆದಿದೆ. ಬನ್ನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳನ್ನು ಸಂಚರಿಸಿ ಭಕ್ತರ ಮೆಚ್ಚುಗೆ ಗಳಿಸಿದ್ದ ದೊಡ್ಡ ಬಸವ ಮಧ್ಯರಾತ್ರಿ ಅನಾಮಿಕನ ವಾಹನಕ್ಕೆ ಸಿಲುಕಿ ಪ್ರಾಣ ಬಿಟ್ಟಿದೆ. ಇದರಿಂದಾಗಿ ಗ್ರಾಮದಲ್ಲಿ ಸೂತಕದ ಛಾಯೆ ಅವರಿಸಿತ್ತು.

Advertisement

ವಾಹನ ಸವಾರನ ಅಜಾಗುರಕತೆಯಿಂದ ಬಸವ ಧಾರುಣವಾಗಿ ಸಾವನ್ನಪ್ಪಿದೆ. ಮಳವಳ್ಳಿ ಮಾರ್ಗವಾಗಿ ಬನ್ನೂರಿನ ಕಡೆಗೆ ಬರುತ್ತಿದ್ದ ವಾಹನ ಇದಾಗಿದ್ದು, ರಸ್ತೆಯ ಪಕ್ಕದಲ್ಲಿ ಸಾಗಿ ಹೊಗುತ್ತಿದ್ದ ವೇಳೆಯಲ್ಲಿ ಈ ಅವಘಡ ನಡೆದಿದೆ. ಅಪಘಾತ ನಡೆದ ಬಳಿಕ ವಾಹನ ಸಾವರ ಪರಾರಿಯಾಗಿದ್ದಾನೆ. ಈ ಸುದ್ದಿ ತಿಳಿದು ಅಕ್ಕಪಕ್ಕ ಗ್ರಾಮಗಳ ಜನರು ಚಾಮನಹಳ್ಳಿಗೆ ಆಗಮಿಸಿ, ಮೃತ ಬಸವನ ದರ್ಶನ ಪಡೆದು ಮಮ್ಮಲಯ ಮರುಗಿದರು. ಅಪಘಾತಕ್ಕೆ ಕಾರಣನಾದ ವಾಹನ ಸಾವರನಿಗೆ ಹಿಡಿ ಶಾಪ ಹಾಕುತ್ತಿದ್ದು ದೃಶ್ಯ ಸಾಮಾನ್ಯವಾಗಿತ್ತು. 

ಮಧ್ಯರಾತ್ರಿ ವಾಹನ ಡಿಕ್ಕಿ: ರಾತ್ರಿ ಸುಮಾರು 2 ಗಂಟೆ ವೇಳೆಯಲ್ಲಿ ಕೇಳಿದ ಅತಿಯಾದ ಶಬ್ದದಿಂದ ತಾನು ಮನೆಯಿಂದ ಹೊರಗೆ ಬಂದಾಗ ಮನೆಯ ಸುಮಾರು ದೂರದಲ್ಲಿ ಅರಚಿದ ಶಬ್ದ ಕೇಳಿತು. ಸ್ಥಳಕ್ಕೆ ಬಂದಾಗ ವಾಹನವೊಂದು ಅನತಿ ದೂರದಲ್ಲಿ ಸಾಗುತ್ತಿತ್ತು. ಕತ್ತಲೆ ಆವರಿಸಿದ್ದರಿಂದ ಸ್ಥಳದಲ್ಲಿ ಎನು ಕಾಣಲಿಲ್ಲ. ನಂತರ ಸುಮಾರು ದೂರ ಸಾಗಿ ನೋಡಿದಾಗ ಬಸವನಿಗೆ ಅಪಘಾತವಾಗಿರುವುದು ತಿಳಿಯಿತು. ಹತ್ತಿರ ಹೋಗಿ ನೋಡಿದಾಗ ಸ್ಥಳದಲ್ಲೇ ಬಸವ ಸಾವನ್ನಪ್ಪಿತ್ತು ಎಂದು ಗ್ರಾಮದ ಪ್ರತ್ಯಕ್ಷದರ್ಶಿ ಶ್ರೀನಿವಾಸ್‌ ತಿಳಿಸಿದ್ದಾರೆ.

ವಾಹನ ದಟ್ಟನೆಯಿಂದ ಅಪಘಾತ: ಈ ಮುಖ್ಯ ರಸ್ತೆಯಲ್ಲಿ ವಾಹನದ ದಟ್ಟನೆ ಅಧಿಕವಾಗಿದ್ದು, ಯಾವುದೇ ಮುಂಜಾಗೃತಾ ಕ್ರಮ ಕೈಗೊಂಡಿಲ್ಲ. ವಾಹನ ಸವಾರರು ಗ್ರಾಮದ ಪರಿಮಿತಿಯಲ್ಲಿ ಅತಿವೇಗದಲ್ಲಿ ವಾಹನ ಚಲಾಯಿಸುತ್ತಿದ್ದು, ಇಂತಹ ಹಲವಾರು ಅಪಘಾತಗಳು ನಡೆಯುತ್ತಲೆ ಇದೆ. ಈ ಕುರಿತು ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಚಾಮನಹಳ್ಳಿ ತಿಮ್ಮೇಗೌಡ ಆಗ್ರಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next