ಗಂಗಾವತಿ: ಶೋಷಿತರಿಗೆ ನ್ಯಾಯ ಒದಗಿಸುವ ಮೂಲಕ ನ್ಯಾಯದ ವೇದಿಕೆಯಾಗಿ ಅನುಭವ ಮಂಟಪವನ್ನು ವಿಶ್ವಗುರು ಬಸವಣ್ಣ 12ನೇ ಶತಮಾನದಲ್ಲಿ ಸ್ಥಾಪಿಸಿದ್ದರು. ಬಸವಣ್ಣನವರ ಅನುಯಾಯಿಗಳು ಬಸವಣ್ಣನವರ ಸಿದ್ಧಾಂತ ಮತ್ತು ತತ್ವಗಳನ್ನು ವಿಶ್ವ ವ್ಯಾಪಿಯಾಗಿ ಪ್ರಚಾರ ಮಾಡಿದರುವುದು ವಿಷಾದಕರ ಸಂಗತಿಯಾಗಿದೆ ಎಂದು ಹಿರಿಯ ಕಾರ್ಮಿಕ ಹೋರಾಟಗಾರ ಜೆ.ಭಾರದ್ವಾಜ್ ಹೇಳಿದರು.
ಅವರು ಬಸವ ಜಯಂತಿ ಅಂಗವಾಗಿ ನಗರದ ಆನೆಗೊಂದಿ ರಸ್ತೆಯಲ್ಲಿರುವ ಬಸವೇಶ್ವರ ವೃತ್ತದಲ್ಲಿ ಬಸವಧ್ವಜಾರೋಹಣ ಮಾಡಿ ಬಸವ ಜಯಂತಿಗೆ ಚಾಲನೆ ನೀಡಿ ಮಾತನಾಡಿದರು.
ಕಾರ್ಲ್ ಮಾರ್ಕ್ಸ್ ನಂತೆ ಬಸವೇಶ್ವರರು ಕಾರ್ಮಿಕರು ಮತ್ತು ಶೋಷಿತ ಪರವಾಗಿ ಹೋರಾಡಿದ ವಿಶ್ವದ ಬಹುದೊಡ್ಡ ಕಾಮ್ರೇಡ್ ಆಗಿದ್ದರು. ಸನಾತನಗಳ ವಿರುದ್ಧ ಶೋಷಣೆ ಮತ್ತು ವರ್ಗರಹಿತ ಸಮಾಜ ನಿರ್ಮಿಸುವ ಬಸವಣ್ಣನವರ ಕನಸು ಅನುಭವ ಮಂಟಪದ ಮೂಲಕ ಈಡೇರಿದೆ ಎಂದರು.
ಬಸವೇಶ್ವರರ ತತ್ವದಶಗಳನ್ನು ಅವರ ಅನ್ಯಾಯಗಳು ಪಾಲನೆ ಮಾಡುತ್ತಿಲ್ಲ. ಸರಿಯಾಗಿ ಪಾಲನೆ ಮಾಡುವ ಮೂಲಕ ಬಸವಣ್ಣನವರು ಕಂಡ ಸಮ ಸಮಾಜದ ಕನಸನ್ನು ನನಸು ಮಾಡಬೇಕು. ಶೋಷಣೆ ರಹಿತ, ಜಾತಿ ರಹಿತ ವರ್ಗದಹಿತ ಸಮಾಜದಿಂದ ಮಾತ್ರ ವಿಶ್ವಕ್ಕೆ ಶಾಂತಿ ಎನ್ನುವ ಆದರ್ಶವನ್ನು ಬಸವಣ್ಣನ ನಮ್ಮೆಲ್ಲರಿಗೂ ಬಿಟ್ಟು ಹೋಗಿದ್ದಾರೆ. ಪ್ರತಿಯೊಬ್ಬರೂ ಬಸವಣ್ಣನ ಆದರ್ಶದಂತೆ ಜೀವನ ನಡೆಸಿದರೆ ಉತ್ತಮ ಸಮಾಜ ಹಿಂಸೆರಹಿತ ಸಮಾಜ ಶೋಷಣೆ ರಹಿತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ ಹೊಸ್ಕೇರಿ ಮಲ್ಲಿಕಾರ್ಜುನ, ಡಾ. ಶಿವಕುಮಾರ್ ಮಾಲಿಪಾಟೀಲ್, ಕೆ. ಬಸವರಾಜ್, ಎ.ಕೆ.ಮಹೇಶ್ ಕುಮಾರ್, ಶ್ರೀಶೈಲ ಪಟ್ಟಣ ಶೆಟ್ಟಿ , ವೀರೇಶ್ ರೆಡ್ಡಿ, ಸರಿಗಮ ಹನುಮಂತಪ್ಪ, ಬಸವರಾಜ, ಶಿವಪ್ಪ, ಗವಿಸಿದ್ದಪ್ಪ, ದಿಲೀಪ, ಕೆ.ಚೆನ್ನಬಸಯ್ಯಸ್ವಾಮಿ ಸೇರಿದಂತೆ ಬಸವ ದಳ, ಬಸವ ಕೇಂದ್ರ ಮತ್ತು ಬಸವ ಅಭಿಮಾನಿಗಳಿದ್ದರು.