ಚನ್ನಗಿರಿ: ಸರ್ಕಾರಿ ಶಾಲೆಗಳಲ್ಲಿ ಬಿಸಿ ಊಟದೊಂದಿಗೆ ಮಕ್ಕಳಿಗೆ ಮೊಟ್ಟೆ ವಿತರಿಸುವುದನ್ನು ವಿರೋಧಿಸಿ ಧಾರವಾಡದಲ್ಲಿ ಬಸವ ಧರ್ಮ ಮಠಾಧೀಶರುಗಳು ಸಭೆ ನಡೆಸಿ ಮೊಟ್ಟೆ ವಿತರಿಸುವುದನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಒತ್ತಡ ತಂದಿರುವುದು ಸರಿಯಲ್ಲ ಎಂದು ಸಾಮಾಜಿಕ ಹೋರಾಟಗಾರ ಬಸವಾಪುರ ರಂಗನಾಥ ನಾಯಕ ಹೇಳಿದರು.
ಮಠಾದೀಶರಾದವರು ಮಠದಲ್ಲಿ ಧರ್ಮ ಭೋಧನೆ ಮಾಡಲಿ ಅದು ಬಿಟ್ಟು ಸರ್ಕಾರದ ಯೋಜನೆಗಳಲ್ಲಿ ಹಸ್ತಕ್ಷೇಪ ಮಾಡವುದು ಸರಿಯಲ್ಲ. ಸರ್ಕಾರ ಬಡ ಮಕ್ಕಳಿಗೆ ವಿತರಿಸುವ ಪೌಷ್ಟಿಕ ಆಹಾರ ವಿರೋಧ ಮಾಡುವುದನ್ನು ಖಂಡಿಸುತ್ತೆವೆ ಎಂದರು.
ಸ್ವಾಮಿಗಳೇ ನೀವು ಮೊಟ್ಟೆ ತಿನ್ನದೆ ಇದ್ದರೆ ಬಿಡಿ ನಿಮಗೆ ಮೊಟ್ಟೆ ತಿನ್ನಿ ಎಂದು ಒತ್ತಾಯ ಮಾಡಿದವರು ಯಾರು ಎಂದು ಪ್ರಶ್ನೆ ಮಾಡಿ, ಮಾತನಾಡುತ್ತ ನಮ್ಮ ನೆಚ್ಚಿನ ಪೌಷ್ಟಿಕ ಆಹಾರ ನಾವು ತಿನ್ನುತ್ತೇವೆ ಅದನ್ನು ತಡೆಯಲು ನಿಮಗೇನು ಹಕ್ಕು ಇದೆ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ಮೊಟ್ಟೆ ಜತೆಗೆ ಬಾಳೆ ಹಣ್ಣನ್ನು ನೀಡುತ್ತಿದೆ. ಮೊಟ್ಟೆ ಬೇಡವಾದವರು ಬಾಳೆ ಹಣ್ಣು ತಿನ್ನಲಿ. ಹಣ್ಣು ಬೇಡವಾದ ಮಕ್ಕಳು ಮೊಟ್ಟೆ ತಿನ್ನುತ್ತಾರೆ. ನೀವು ಬೇಕಾದರೆ ನಿಮ್ಮ ಮಕ್ಕಳಿಗೆ ಮನೆಯಲ್ಲಿ ಸೇಬು ಹಣ್ಣು. ಡ್ರೈ ಪ್ರೋಟ್ಸ್ ತಿನ್ನಿಸಿ, ನಿಮಗೆ ಬೇಕಾದದ್ದು ತಿನ್ನಿ. ನಿಮ್ಮನ್ನು ಯಾರು ಕೇಳುತ್ತಾರೆ. ಸರ್ಕಾರಿ ಶಾಲೆಯಲ್ಲಿ ಬಡ ಮಕ್ಕಳಿಗೆ ನೀಡುವ ಮೊಟ್ಟೆ ನಿಲ್ಲಿಸಿ ಅನ್ನುವುದು ನಿಮ್ಮ ಅತೀರೇಕದ ವರ್ತನೆಯಾಗುತ್ತದೆ. ಹಾಗೂ ನಮ್ಮ ಇಚ್ಚೆಯ ಆಹಾರ ಕ್ರಮದ ಮೇಲೆ ದಬ್ಬಾಳಿಕೆ ಮಾಡಿದಂತೆ ಆಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ:ಬೆಳ್ತಂಗಡಿ: ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ ರಕ್ಷಣೆ
ಜಗಜ್ಯೋತಿ ಬಸವಣ್ಣನವರು ಮಾಂಸಹಾರಿಗಳು ಸಸ್ಯಹಾರಿಗಳಲ್ಲಿ ಯಾವ ಬೇಧ ಕಾಣದೆ ಅವರು ಇದ್ದಂತೆ ಒಪ್ಪಿಕೊಂಡು ಸಮಾಜ ಸುಧಾರಣೆ ಮಾಡಿದಂತ ಮಹಾನ್ ಪುರುಷ. ಬಸವ ಧರ್ಮ ಪರಿಪಾಲಕರಾದ ನೀವು ಯಾಕೆ ಮಾಂಸಹಾರಿಗಳನ್ನು ಅವರ ಆಹಾರ ಪದ್ಧತಿಯನ್ನು ವಿರೋಧ ಮಾಡುತ್ತೀರಿ. ಆಹಾರ ಪದ್ಧತಿ ಆಯ್ಕೆ ಅವರವರ ವೈಯುಕ್ತಿಕ ಇಚ್ಚೆಗೆ ಬಿಟ್ಟ ವಿಚಾರ ಅದನ್ನು ಪ್ರಶ್ನಿಸುವ, ವಿರೋಧಿಸುವ, ತಡೆಯುವ ಹಕ್ಕು ಯಾರಿಗೂ ಇಲ್ಲ. ನಿಮ್ಮ ಅತೀರೇಕದ ವರ್ತನೆ ನಿಲ್ಲಿಸಿ. ಇಲ್ಲವಾದರೆ ರಾಜ್ಯದಾದ್ಯಂತ ಹಿಂದುಳಿದ ದಲಿತ ಮಠಾಧೀಶರ ನೇತೃತ್ವದಲ್ಲಿ ನಾವು ನಿಮ್ಮ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.