Advertisement

ಜಿಲ್ಲಾದ್ಯಂತ ವಿಜೃಂಭಣೆಯ ಬಸವ ಜಯಂತಿ

02:27 PM May 08, 2019 | Suhan S |

ಹಾಸನ: ಸಾಮಾಜಿಕ ಕ್ರಾಂತಿಯ ಹರಿಕಾರ, ಸರ್ವಶ್ರೇಷ್ಠ ವಚನಕಾರ, ಭಕ್ತಿ ಭಂಡಾರಿ ಬಸವಣ್ಣ ನವರ ಜಯಂತಿಯನ್ನು ಜಿಲ್ಲಾದ್ಯಂತ ಸಂಭ್ರಮ, ಸಡಗರದೊಂದಿಗೆ ಆಚರಿಸಲಾಯಿತು.

Advertisement

ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ, ಮೆರವಣಿಗೆ, ಅನ್ನದಾನದ ಮೂಲಕ 12ನೇ ಶತಮಾನದಲ್ಲಿಯೇ ಸಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ್ದ ಸಮಾಜ ಸುಧಾರಕನ ಕೊಡುಗೆಯನ್ನು ಸ್ಮರಿಸಲಾಯಿತು.

ಜಿಲ್ಲಾ ವೀರಶೈವ ಸಮಾಜವು ಬಸವಣ್ಣನವರ ಜನ್ಮದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿತು. ನಗರದ ಅರಳೇಪೇಟೆ ರಸ್ತೆಯಲ್ಲಿರುವ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವಣ್ಣನವರ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ಆ ವಿಗ್ರಹವನ್ನು ತೇರಿನಲ್ಲಿರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಜಾನಪದ ಕಲಾತಂಡ ಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ನಂದಿ ಕೋಲು, ವೀರಗಾಸೆ ಕುಣಿತ, ಡೋಲು ಕುಣಿತ, ಮಂಗಳ ವಾದ್ಯ ಸೇರಿ ದಂತೆ ಜಾನಪದ ಕಲಾತಂಡಗಳ ಗಮನ ಸೆಳೆದವು. ಬಸವ ರಥವು ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸುವಾಗ ಬಸವಣ್ಣನವರಿಗೆ ನಮಿಸಿದ ಸಾರ್ವಜನಿಕರು ಬಸವಣ್ಣನವರ ಸಮಾಜ ಸುಧಾ ರಣೆಯ ಹೋರಾಟವನ್ನು ಸ್ಮರಿಸಿದರು. ಮೆರವಣಿಗೆ ಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಮಜ್ಜಿಗೆಯನ್ನು ನೀಡಿ ಸಾರ್ವಜನಿಕರು ಸತ್ಕರಿಸಿದರು.

ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಬಿ.ಪಿ. ಐಸಾಮಿಗೌಡ, ಕಾರ್ಯದರ್ಶಿ ಭುವನಾಕ್ಷ, ಉಪಾಧ್ಯಕ್ಷ ದೊಡ್ಡ ವೀರೇಗೌಡ, ಅಖೀಲ ಭಾರತ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್‌, ಮುಖಂಡರಾದ ಸಂಗಂ, ನಿರ್ದೇಶಕ ಮಲ್ಲಿಕ್‌, ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಡಾ.ಎಚ್. ನಾಗರಾಜು, ಬಸವರಾಜೇಂದ್ರ ಶಿಕ್ಷಣ ಸಂಸ್ಥೆಯ ಲೋಕೇಶ್‌, ಕೀರ್ತಿಕುಮಾರ್‌, ಸಮಾಜ ಸೇವಕ ಜಿ.ಒ. ಮಹಾಂತಪ್ಪ, ಆನಂದ್‌ ಪಾಟೀಲ್, ಕಿರಣ್‌, ಶೋಭನ್‌ ಬಾಬು, ಕುಮಾರ್‌, ಜಾನೆಕೆರೆ ಹೇಮಂತ್‌ ಸೇರಿದಂತೆ ವೀರಶೈವ ಸಂಘ ಹಾಗೂ ಹಲವು ಸಂಘಗಳ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next