Advertisement

ನೀತಿ ಸಂಹಿತೆ ಪ್ರಕರಣ ಶಾಸಕ ಯತ್ನಾಳ್‌ ಕೇಸ್ ಖುಲಾಸೆ

10:11 AM Nov 01, 2019 | Sriram |

ವಿಜಯಪುರ: ಸೂಕ್ತ ಸಾಕ್ಷ್ಯಾಧಾರ ಇಲ್ಲದ ಕಾರಣ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಖುಲಾಸೆಗೊಂಡಿದ್ದಾರೆ.

Advertisement

ಬೆಂಗಳೂರು ಸಿಟಿ ಸಿವಿಲ್‌ ಕೋರ್ಟ್ ನ್ಯಾಯಾಲಯದಲ್ಲಿ 2018ರ ವಿಧಾನಸಭೆ ಚುನಾವಣೆ ವೇಳೆ ನಾಮಪತ್ರ ಸಲ್ಲಿಸುವ ಮೆರವಣಿಗೆ ವೇಳೆ ಆರತಿ ಬೆಳಗಿದ ಮಹಿಳೆಯ ತಟ್ಟೆ ಯತ್ನಾಳ್‌ ವಿರುದ್ಧ ನೀತಿ ಸಂಹಿತೆ ಕೇಸ್ ದಾಖಲಾಗಿತ್ತು.

ವಿಜಯಪುರ ನಗರ ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಆರತಿ ತಟ್ಟೆಯಲ್ಲಿ ಹಣ ಹಾಕುವ ಮೂಲಕ ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆ ಎಂದು ವಿಜಯಪುರ ಜಲನಗರ ಪೊಲೀಸ್ ಠಾಣೆಯಲ್ಲಿ ಚುನಾವಣಾ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.

2018 ಏಪ್ರಿಲ್‌ 20 ರಂದು ವಿಜಯಪುರದ ಜಿಲ್ಲಾ ಪಂಚಾಯತಿ‌ ಬಳಿ‌ ಆರತಿ ತಟ್ಟೆಗೆ ಹಣ ಹಾಕಿದ್ದ ಬಿಜೆಪಿ ಅಭ್ಯರ್ಥಿ ಯತ್ನಾಳ್‌.

ಆರತಿ ಬೆಳಗಿದ ಮಹಿಳೆಯರ ತಟ್ಟೆಯಲ್ಲಿ ಯತ್ನಾಳ್‌  100 ಮುಖಬೆಲೆಯ ನೋಟು ಹಾಕಿದ್ದರು. ಈ‌ ಕುರಿತು ತಡವಾಗಿ ಅಂದ್ರೆ ಏಪ್ರಿಲ್ 27 ರಂದು ಪ್ರಕರಣ ದಾಖಲಿಸಿದ್ದ ಚುನಾವಣಾ ಆಯೋಗ.

Advertisement

ಅಲ್ಲದೆ ಆರತಿ ತಟ್ಟೆಯಲ್ಲಿನ ನೋಟುಗಳನ್ನು ಸಹ ವಶಪಡಿಸಿಕೊಂಡಿರಲಿಲ್ಲ.

ಆರತಿ ತಟ್ಟೆಯಿಂದ ಹಣ ಪಡೆದ ಮಹಿಳೆ ವಿಜಯಪುರ ಮತಕ್ಷೇತ್ರದ ಮಹಿಳೆ ಎಂಬುದನ್ನೂ ಚುನಾವಣಾ ಆಯೋಗ ಸಾಬೀತು ಪಡಿಸಿಲ್ಲ.

ಈ‌ ಎಲ್ಲ ಕಾರಣಗಳಿಂದ ಅ.31 ರಂದು ಯತ್ನಾಳ್‌ ಅವರ ಈ‌ ಎಲ್ಲ ಕಾರಣಗಳಿಂದ ಅ.31 ರಂದು ಯತ್ನಾಳ್‌ ಅವರನ್ನು ಸಾಕ್ಷಾಧಾರಗಳ ಕೊರತೆಯ ಕಾರಣ ನ್ಯಾಯಾಲಯ ಖುಲಾಸೆ ಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next