Advertisement

ನನ್ನ ಹಣೆಬರಹದಲ್ಲಿ ಸಿಎಂ ಆಗೋದು ಬರೆದಿದ್ರೆ 2024 ರಲ್ಲಿ ಸಿಎಂ ಆಗೋದು ಖಚಿತ

09:51 AM Jan 01, 2020 | Team Udayavani |

ವಿಜಯಪುರ : ಯಾರ ಹಣೆ ಬರಹದಲ್ಲಿ ಏನಿದೆ ಯಾರಿಗೆ ಗೊತ್ತು, ಲಕ್ಷ್ಮಣ ಸವದಿ ಹಣೆ ಬರಹದಲ್ಲಿ ಡಿಸಿಎಂ ಬರೆದಿದೆ ಆಗಿದ್ದಾರೆ. 2024 ರಲ್ಲಿ ನಾನು ಸಿಎಂ ಆಗೋದಿದ್ರೆ ಯಾರು ಕಸಿದುಕೊಳ್ತಾರಾ. ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೀಗೆ ಹೇಳುವ‌ ಮೂಲಕ ಹಳೆ ವರ್ಷ ಕೊನೆಯಲ್ಲಿ, ಹೊಸ ವರ್ಷದ‌ ಹೊಸ್ತಿಲಲ್ಲಿ ಮುಖ್ಯಮಂತ್ರಿ ಕನಸು ಬಿತ್ತಿದ್ದಾರೆ.

Advertisement

ಮಂಗಳವಾರ ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಭವಿಷ್ಯದಲ್ಲಿ ತಾವು ಕೇವಲ ಮಂತ್ರಿ ಆಕಾಂಕ್ಷಿಯಲ್ಲ‌ ಸಿಎಂ ಅಭ್ಯರ್ಥಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಯತ್ನಾಳ, ನನ್ನ ಹಣೆಬರಹದಲ್ಲಿ ಸಿಎಂ ಆಗೋದು ಬರೆದಿದ್ರೆ ನಾನು 2024 ರಲ್ಲಿ ಸಿಎಂ ಆಗೋದು ಖಚಿತ ಎಂದರು.

ಸಚಿವ ಸ್ಥಾನಕ್ಕಾಗಿ ಉಮೇಶ ಕತ್ತಿ ಲಾಭಿ ಮಾಡಲು ಸಿಎಂ ಸುತ್ತ ಗಿರಕಿ ಹೊಡೆಯುವ ಅವಶ್ಯಕತೆ ಇಲ್ಲ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ, ಅವರು ಸಚಿವ ಸ್ಥಾನ ಖಚಿತ.

ಅಥಣಿ, ಕಾಗವಾಡ ಗೆಲ್ಲಿಸಿದ್ರೆ ಸಚಿವ ಸ್ಥಾನ ಸಿಗುತ್ತೆ ಅಂತ ನಾಯಕರು, ನಾವೆಲ್ಲ ಹೇಳಿದ್ದೆವು. ಹಾಗಾಗಿ ಕತ್ತಿ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.

ಇನ್ನು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮರಾಠರ ಪರವಾದ ಹೆಳಿಕೆ ರಾಜಕೀಯ ಅನಿವಾರ್ಯತೆ ಯಿಂದ ಕೂಡಿದೆ. ಇತರೆ ಕಡೆಗಿಂತ ಬೆಳಗಾವಿ ರಾಜಕಾರಣ ಬೇರೆ ಇದೆ.

Advertisement

ಚುನಾವಣೆಯಲ್ಲಿ ಮರಾಠ ಮತ ಸೆಳೆಯಲು ಅವರ ಪರವಾದ ಮಾತನಾಡುತ್ತಾರೆ. ಮರಾಠರ ಪರ ಮಾತಾಡದಿದ್ದರೆ ಎಲೆಕ್ಷನ್ ಸೋಲುತ್ತಾರೆ. ಹೀಗಾಗಿ ಮನಸ್ಸಿನಿಂದ ಅಲ್ಲದಿದ್ದರೂ ಮತಕ್ಕಾಗಿ ಮಾತನಾಡುತ್ತಾರೆ ಎಂದರು.

ಮಹಾರಾಷ್ಟ್ರ ರಾಜ್ಯ ಗಡಿ ಕ್ಯಾತೆ ವಿಚಾರವನ್ನು ವಿವಾದ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಆದ್ಯತೆ ನೀಡಬೇಕು.

ಮರಾಠರು ಬೆಳಗಾವಿ ತಮ್ಮದು ಎಂದ‌ ಮಾತ್ರಕ್ಕೆ ಕನ್ನಡಿಗರಾದ ನಾವು ಬಿಡೋಕಾಗುತ್ತ. ಕನ್ನಡಿಗರೇನು ಕೈಯಲ್ಲಿ ಬಳೆ ತೊಟ್ಟುಕೊಂಡಿಲ್ಲ, ತಾಕತ್ತಿದ್ದರೆ ಬೆಳಗಾವಿಯನ್ನು ಪಡೆಯಲಿ ನೋಡೋಣ ಎಂದು ತಿರುಗೇಟು ನೀಡಿದರು.

ಇನ್ನು ಐದು ವರ್ಷ‌ ಮಾತ್ರವಲ್ಲ ಯಾರೇ ಹುಟ್ಟಿದರೂ ಬೆಳಗಾವಿಯನ್ನು ಕರ್ನಾಟಕ ದಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ‌ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next