Advertisement
ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಶಿವಕುಮಾರ ವಿರುದ್ಧದ ಸಿಬಿಐ ತನಿಖೆ ಪ್ರಕರಣ ಹಿಂಪಡೆದ ಸರ್ಕಾರದ ವರ್ತನೆ ಹಾಗೂ ಬೆಳಗಾವಿಯ ಬೆತ್ತಲೆ ಪ್ರಕರಣದ ಕುರಿತು ಸದನದಲ್ಲಿ ಸರಿಯಾದ ರೀತಿಯಲ್ಲಿ ಹೋರಾಟ ಮಾಡುವಂತೆ ಆದೇಶವಿತ್ತು. ಆದರೂ ನಮ್ಮ ಪಕ್ಷದ ಜೋಡೆತ್ತುಗಳು ಖಂಡನೆ ಹೇಳಿಕೆಗೆ ಸೀಮಿತವಾದವು ಎಂದು ವಿಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.
Related Articles
Advertisement
ಬಿಜೆಪಿ ಜೋಡೆತ್ತುಗಳಿಗಿಂತ ನಾನೇ ಹೆಚ್ಚು ಮಾತನಾಡಿ, ಉತ್ತರ ಕರ್ನಾಟಕದಲ್ಲೂ ಸಮರ್ಥ ನಾಯಕರಿದ್ದಾರೆ ಎಂದು ತೋರಿಸಿದ್ದೇನೆ. ವಿಪಕ್ಷದ ನಾಯಕನಾಗಿ, ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಾನೇ ಸದನದಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಇದರೊಂದಿಗೆ ಉತ್ತರ ಕರ್ನಾಟಕದ ಅಸ್ತಿತ್ವವನ್ನು ತೋರಿಸಿದ್ದೇನೆ ಎಂದು ಸ್ವಪಕ್ಷೀಯ ನಾಯಕರ ವಿರುದ್ಧ ಕಿಡಿ ಕಾರಿದರು.
ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನನ್ನ ವಿರುದ್ಧ ಮಾತನಾಡಲು ಮುರುಗೇಶ ನಿರಾಣಿ ಅವರಂಥ ಕೆಲವರನ್ನು ಬಿಟ್ಟಿದ್ದಾನೆ ಎಂದು ಏಕ ವಚನದಲ್ಲೇ ಪ್ರಾಣಿಗಳಿಗೆ ಹೋಲಿಸಿ ಅಶ್ಲೀಲ ಪದಗಲಿಂದ ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ ಆರೋಪದ ಸಿಬಿಐ ತನಿಖೆ ಹಿಂಪಡೆದ ಸರ್ಕಾರದ ನಡೆ ಹಾಗೂ ಮಹಿಳೆಯ ಬೆತ್ತಲೆ ಪ್ರಕರಣದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಜೋಡೆತ್ತಿಗಳು ಹೇಳಿದ್ದವು. ಉಗ್ರ ಹೋರಾಟ ಮಾಡದೇ, ಖಂಡನೆ, ಹೇಳಿಕೆಗೆ ಇವರ ಹೋರಾಟ ಸೀಮಿತವಾಗಿತ್ತು ಎಂದು ಆರ್. ಅಶೋಕ, ವಿಜಯೇಂದ್ರ ವಿರುದ್ಧ ಕಿಡಿ ಕಾರಿದರು.
ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕರೆ ಮಾಡಿದಾಗ ಎಚ್ಚೆತ್ತ ವಿಪಕ್ಷದ ನಾಯಕರು ನಿನ್ನೆ 6-30 ಕ್ಕೆ ಕರೆ ಮಾಡಿ ಎಲ್ಲಿದ್ದೀರಾ ಎಂದು ಕೇಳಿದ್ದಾರೆ. ಬರೀ ಖಂಡಿಸಿ, ಟ್ವೀಟ್ ಹಾಕಿದರೆ ಸಾಲದು, ಪ್ರಾಮಾಣಿವಾಗಿ ಹೋರಾಟ ಮಾಡಬೇಕು ಎಂದು ಸ್ವಪಕ್ಷೀಯರ ವಿರುದ್ಧ ಕುಟುಕಿದರು.
ಅದೇ ಕಾರಣಕ್ಕೆ ನಾನು ಡಿ.ಕೆ.ಶಿವಕುಮಾರ ಪ್ರಕರಣದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದು. ಇನ್ನಾದರೂ ವಿಪಕ್ಷದ ನಮ್ಮ ನಾಯಕರು ಗಟ್ಟಿಗರಾಗಬೇಕೋ, ಬೇಡವೋ ಎಂದು ಮಾಧ್ಯಮಗಳೇ ವಿಶ್ಲೇಷಿಸಲಿ.
ಆಧಿವೇಶನದಲ್ಲಿ ವಿರೋಧ ಪಕ್ಷ ಹೇಗೆ ಕೆಲಸ ಮಾಡಿದೆ ಎಂದು ಮಾಧ್ಯಮಗಳೇ ಹೇಳಿವೆ ಎಂದು ಹರಿಹಾಯ್ದರು.
ಪಿಎಸ್‍ಐ ಪರೀಕ್ಷೆ ಮುಂದೂಡಿಕೆ, ಪೆÇಲೀಸ್ ವರ್ಗಾವಣೆ ವಿಚಾರದ ಕುರಿತು ಸದನದಲ್ಲಿ ಮಾತನಾಡಿದ ಬಳಿಕ ಈ ನೇಮಕಾತಿ ಪರೀಕ್ಷೆ ಮುಂದೂಡಿದ್ದಾರೆ. ಪರೀಕ್ಷೆ ಅಕ್ರಮ ತಡೆಯುವುದಕ್ಕೆ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ, ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಮೂರು ಕಡೆಗಳಲ್ಲಿ ಪರೀಕ್ಷೆ ನಡೆಸಬೇಕು.– ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಹಿರಿಯ ಶಾಸಕ ವಿಜಯಪುರ.