Advertisement
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಂಗಳವಾರ ನಗರಕ್ಕೆ ಆಗಮಿಸಿದ್ದ ಶಾಸಕ ಬಸವರಾಜ ಪಾಟೀಲ ಯತ್ನಾಳ ಅವರು ಹರಳುಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿ ದೇವರ ದರ್ಶನ ಮಾಡಿ, ದೇವಾಲಯದಿಂದ ಹೊರಬಂದು ಕಾರು ಹತ್ತುವಾಗ, 50ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಕಾರಿಗೆ ಅಡ್ಡಲಾಗಿ ನಿಂತು, ಯತ್ನಾಳ್ ಅವರಿಗೆ ಧಿಕ್ಕಾರ ಕೂಗಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರ ಜೈಕಾರ ಹಾಕಿದರು. ಇದರಿಂದ ಯತ್ನಾಳ್ ಕಸಿವಿಸಿಗೊಂಡರು. ನಂತರ ಪೊಲೀಸರು ಧಿಕ್ಕಾರ ಕೂಗುತ್ತಿದ್ದವರನ್ನು ಚದುರಿಸುವ ಯತ್ನ ನಡೆಸಿದರು.
Related Articles
Advertisement
ಬಳಿಕ, ವರ್ತಕರ ಭವನದ ಬಳಿ ಅಖಿಲ ಭಾರತ ವೀರಶೈವ ಮಹಾಸಭಾ ಶಿವರಾಜ್ ನಂಜೇದೇವನಪುರ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ನಂತರ ಬಿಡುಗಡೆ ಮಾಡಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಕಾಡಹಳ್ಳಿ ಮಧು, ಸೋಮವಾರಪೇಟೆ ಗುರು, ಶಂಕರ, ಕೆ.ಎಲ್.ಮಹದೇವಸ್ವಾಮಿ, ಕೂಸಪ್ಪ, ವಿಜಯಬೊಮ್ಮನಹಳ್ಳಿ, ಕೊತ್ತಲವಾಡಿ ಗಜ, ರಾಜ್ ಹೊಸೂರು, ಮಲ್ಲಿಕಾರ್ಜುನ, ಮಹೇಂದ್ರಪಾಪು, ಹರಿಪ್ರಸಾದ್, ನಂದಿ, ಪುಣಜನೂರುನಂದೀಶ್, ಕಾಗಲವಾಡಿ ಪ್ರಮೋದ್, ಸಂಜು ಹೊಸೂರು , ಪ್ರದೀಪ್, ಗುರು, ಪ್ರಸಾದ್, ವೀರೇಂದ್ರ, ನಂದೀಶ್ ಇತರರು ಭಾಗವಹಿಸಿದ್ದರು.