Advertisement

ಹಿತೈಷಿಗಳ ವಿರೋಧದ ಮಧ್ಯೆ ಬಸನಗೌಡ ಕಾಡಾ ಅಧಿಕಾರ ಸ್ವೀಕಾರ

11:07 PM Nov 04, 2019 | Lakshmi GovindaRaju |

ಗೊರೇಬಾಳ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಮಸ್ಕಿ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಆರ್‌.ಬಸನಗೌಡ ತುರ್ವಿಹಾಳ ಹಿತೈಷಿಗಳ ವಿರೋಧದ ನಡುವೆಯೂ ಸೋಮವಾರ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನಿಗಮ (ಕಾಡಾ) ಅಧ್ಯಕ್ಷ ಸ್ಥಾನ ವಹಿಸಿಕೊಂಡರು. ಬಸನಗೌಡ ತುರ್ವಿಹಾಳ ಅವರಿಗೆ ಸುಮಾರು ತಿಂಗಳ ಹಿಂದೆಯೇ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಕಾಡಾ ಅಧ್ಯಕ್ಷ ಸ್ಥಾನ ನೀಡಿತ್ತು.

Advertisement

ಆದರೆ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಟಿಕೆಟ್‌ಗೆ ಸಂಬಂಧಿ ಸಿದಂತೆ ಇಲ್ಲಿಯವರೆಗೂ ಹಗ್ಗ ಜಗ್ಗಾಟ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅಧಿ ಕಾರ ಸ್ವೀಕಾರ ಮಾಡಿರಲಿಲ್ಲ. ಆದರೆ ಪಕ್ಷದ ಹಿರಿಯ ಮುಖಂಡರ ಒತ್ತಾಯಕ್ಕೆ ಮಣಿದ ಬಸನಗೌಡ ಸೋಮವಾರ ಸಂಜೆ 5 ಗಂಟೆಗೆ ಮುನಿರಾಬಾದ್‌ನ ಕಾಡಾ ಕಚೇರಿ ಯಲ್ಲಿ ಅ ಧಿಕಾರ ಸ್ವೀಕಾರ ಮಾಡಿದರು.

ವಿರೋಧ: ಸೋಮವಾರ ತಾಲೂಕಿನ ತುರುವಿಹಾಳ ಪಟ್ಟಣದ ಹೊರವಲಯದಲ್ಲಿರುವ ಆರ್‌.ಬಸನಗೌಡರ ನಿವಾಸದ ಮುಂದೆ ಅವರ ಹಿತೈಷಿಗಳು, ಅಭಿಮಾನಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರು ಸಭೆ ನಡೆಸಿ ಯಾವುದೇ ಕಾರಣಕ್ಕೂ ಕಾಡಾ ಅಧ್ಯಕ್ಷ ಸ್ಥಾನ ಪದಗ್ರಹಣ ಮಾಡಬಾರದು ಎಂದು ಪಟ್ಟು ಹಿಡಿದರು. ಮುಂಬರುವ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಬಸನಗೌಡರೇ ಸ್ಪ ರ್ಧಿಸಬೇಕು ಎಂದು ಘೋಷಣೆ ಕೂಗಿದರು.

ಸಮಾಧಾನ: ಪಕ್ಷಕ್ಕಾಗಿ ಶ್ರಮಿಸಿದ ಹಿನ್ನೆಲೆ ಯಲ್ಲಿ ಬಿಜೆಪಿ ರಾಜ್ಯ ಮುಖಂಡರು ತಮ್ಮನ್ನು ಗುರುತಿಸಿ ಕಾಡಾ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಚುನಾವಣೆ ಘೋಷಣೆಯಾದ ನಂತರ ಮುಖಂಡರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ಕೈಗೊಳ್ಳೋಣ ಎಂದು ಬಸನಗೌಡ ತುರ್ವಿಹಾಳ ಅಭಿಮಾನಿಗಳನ್ನು, ಸಮಾಧಾನಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next