Advertisement

ಸಂತೆ ನಡೆಸಲು ಬಂದಿದ್ದ ವ್ಯಾಪಾರಿಗಳಿಗೆ ತಡೆ

01:51 PM Jul 19, 2020 | Suhan S |

ಆಲ್ದೂರು: ಶನಿವಾರ ಆಲ್ದೂರು ಪಟ್ಟಣದಲ್ಲಿ ಸಂತೆ ಹಾಕಲು ಬಂದಿದ್ದ ಅಂಗಡಿ ವ್ಯಾಪಾರಿಗಳಿಗೆ ಅಂಗಡಿಗಳನ್ನು ಹಾಕದಂತೆ ಸೂಚನೆ ನೀಡಿ ವಾಪಸ್‌ ಕಳುಹಿಸಲಾಯಿತು.

Advertisement

ಆಲ್ದೂರಿನಲ್ಲಿ ಪ್ರತಿ ಶನಿವಾರ ಸಂತೆ ನಡೆಯುತ್ತದೆ. ಆದರೆ ಕೋವಿಡ್‌ -19 ವೈರಸ್‌ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಾದ್ಯಂತ ಸಂತೆಗಳನ್ನು ರದ್ದು ಮಾಡಿ ಆದೇಶ ಹೊರಡಿಸಿತ್ತು. ಆದರೂ ಸಹ ಪ್ರತಿ ಶನಿವಾರ ಆಲ್ದೂರು ಪಟ್ಟಣದಲ್ಲಿ ಸಂತೆ ನಡೆಯುತ್ತಿದ್ದು ಪಟ್ಟಣದ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಕಳೆದ ವಾರವೂ ವ್ಯಾಪಾರ ನಡೆಸಿದ್ದರು. ಇದರಿಂದಾಗಿ ಜನ ಜಂಗುಳಿ ಹೆಚ್ಚಾಗಿತ್ತು. ಟ್ರಾಫಿಕ್‌ ಜ್ಯಾಮ್‌ ಉಂಟಾಗಿ ಪಾದಚಾರಿಗಳು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿತ್ತು. ಶನಿವಾರ ಆಲ್ದೂರು ಪಟ್ಟಣದಲ್ಲಿ ಮೊದಲ ಕೋವಿಡ್‌- 19 ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಭಿವೃದ್ಧಿ ಅಧಿಕಾರಿ ಸೋಮೇಗೌಡ ಹಾಗೂ ಸಿಬ್ಬಂದಿ ಪೋಲೀಸರ ಸಹಕಾರದೊಂದಿಗೆ ವ್ಯಾಪಾರಿಗಳನ್ನು ತಡೆದು ರಸ್ತೆ ಬದಿಯಲ್ಲಿ ಅಂಗಡಿಗಳನ್ನು ಹಾಕದಂತೆ ಸೂಚನೆ ನೀಡಿ ಬಂದ ವಾಹನಗಳನ್ನು ವಾಪಸ್‌ ಕಳುಹಿಸಿದರು.

ಅಂಗಡಿಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಪಂಚಾಯತ್‌ನಿಂದ ಪರವಾನಗಿ ಪಡೆದವರಿಗೆ ಮಾತ್ರ ವ್ಯಾಪಾರಕ್ಕೆ ಅನುಮತಿ ನೀಡಲಾಯಿತು. ಆಲ್ದೂರು ಪಿಎಸ್‌ಐ ಶಂಬುಲಿಂಗಯ್ಯ ತಾವೇ ಕಾರ್ಯಾಚರಣೆಗೆ ಇಳಿದು ಪಟ್ಟಣದಲ್ಲಿ ಮಾಸ್ಕ್ ಧರಿಸದೆ ಅನಗತ್ಯವಾಗಿ ಓಡಾಡುತ್ತಿದ್ದವರು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಂಗಡಿ- ಮುಂಗಟ್ಟುಗಳ ಮುಂದೆ ಓಡಾಡುವವರಿಗೆ ದಂಡ ವಿಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next