Advertisement

ಬಾಲ್ಯ ವಿವಾಹಕ್ಕೆ ತಡೆ

03:54 PM Apr 27, 2020 | Suhan S |

ಬಾಗಲಕೋಟೆ: ಮಕ್ಕಳ ಸಹಾಯವಾಣಿ 1098ಗೆ ಬಂದ ಕರೆಯ ಮೇರೆಗೆ ಜಿಲ್ಲೆಯ ಮುಧೋಳ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ರವಿವಾರ ತಡೆಯಲಾಯಿತು.

Advertisement

ಬೆಳಗ್ಗೆ ಮಕ್ಕಳ ಸಹಾಯವಾಣಿ 1098ಗೆ ಮುಧೋಳ ತಾಲೂಕಿನ ಮಳಲಿ ಗ್ರಾಮದಲ್ಲಿ ಬಾಲ್ಯ ವಿವಾಹ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ರೀಚ್‌ ಸಂಸ್ಥೆಯ ಮಕ್ಕಳ ಸಹಾಯವಾಣಿ ತಂಡದ ಸದಸ್ಯ ಮಲ್ಲಪ್ಪ ಮೆಳ್ಳಿಗೇರಿ, ಅಂಗನವಾಡಿ ಮೇಲ್ವಿಚಾರಕಿ ಸುಧಾ ಮಂಟೂರ, ಅಂಗನವಾಡಿ ಕಾರ್ಯಕರ್ತೆ ಭಾರತಿ ಬಾಳಗಿ, ಪಿಡಿಓ ಮನೋಹರ ಬ್ಯಾಕೋಡ, ಪೊಲೀಸ್‌ ಅಧಿಕಾರಿ ಜಗದೀಶ ದಳವಾಯಿ ಸಹಕಾರದೊಂದಿಗೆ ಬಾಲ್ಯ ವಿವಾಹ ತಡೆದರು.

ಬಾಲಕಿ ಮನೆಗೆ ಬೆಳಿಗ್ಗೆ 11 ಗಂಟೆಗೆ ತೆರಳಿದಾಗ ಈ ಹೆಣ್ಣು ಮಗು 16 ವರ್ಷದ ಬಾಲಕಿಯಾಗಿದ್ದು, 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಪರೀಕ್ಷೆ ತಯಾರಿಯೂ ನಡೆಸುತ್ತಿದ್ದಳು. ಈ ಬಾಲಕಿಯನ್ನು ತೆವರಟ್ಟಿ ಗ್ರಾಮದ 36 ವರ್ಷದ ವ್ಯಕ್ತಿಯೊಂದಿಗೆ ರವಿವಾರ 12 ಗಂಟೆಗೆ ಮದುವೆ ನಿಶ್ಚಯವಾಗಿತ್ತು. ಇದನ್ನು ತಡೆಯುವ ಮೂಲಕ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳಿಂದ ಮಗುವಿನ ಪಾಲಕರಿಗೆ ಬಾಲ್ಯ ವಿವಾಹದ ದುಷ್ಪರಿಣಾಮಗಳು ಹಾಗೂಕಾನೂನಿನ ಅರಿವು ನೀಡಿ ಪೋಷಕರಿಂದ ತಮ್ಮ ಮಗಳಿಗೆ 18 ವರ್ಷ ಮುಗಿಯುವವರೆಗೆ ಮದುವೆ ಮಾಡುವುದಿಲ್ಲ ಎಂಬ ಮುಚ್ಚಳಿಕೆ ಪತ್ರವನ್ನು ಬರೆಸಿಕೊಳ್ಳಲಾಯಿತು.

ಕೋವಿಡ್ 19 ದಿಂದಾಗಿ ಮಗುವನ್ನು ಮನೆಯಲ್ಲೇ ಬಿಡಲಾಗಿ ಪ್ರತಿದಿನ ಪಂಚಾಯತ ಅಭಿವೃದ್ಧಿ ಅಧಿಕಾರಿ ಮನೋಹರ ಬ್ಯಾಕೋಡ ಮನೆ ಭೇಟಿ ನೀಡುವ ಮೂಲಕ ಅನುಸರಣೆ ಮಾಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next