Advertisement

13 ಬಾಲ್ಯವಿವಾಹಕ್ಕೆ ತಡೆ

05:30 AM May 22, 2020 | Suhan S |

ಕೊಪ್ಪಳ: ಕೋವಿಡ್‌-19 ಪ್ರಯುಕ್ತ ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ನಡೆಯುತ್ತಿದ್ದ ಬಾಲ್ಯ ವಿವಾಹಗಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ತಡೆಯಲಾಗಿದೆ.

Advertisement

ಗ್ರಾಪಂ ಪಿಡಿಒ, ಮೇಲ್ವಿಚಾರಕರು, ಶಾಲಾ ಮುಖ್ಯೋಪಾಧ್ಯಾಯರು, ಪೊಲೀಸ್‌ ಇಲಾಖೆ ಸಿಬ್ಬಂದಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡ ಜಿಲ್ಲೆಯ ಆಯಾ ತಾಲೂಕಿನ ಗ್ರಾಮಗಳಲ್ಲಿ ಒಟ್ಟು 13 ಬಾಲ್ಯ ವಿವಾಹಗಳನ್ನು ತಡೆಗಟ್ಟಿದ್ದಾರೆ.

ಏ.14ರಂದು ಕುಷ್ಟಗಿ ತಾಲೂಕಿನ ಹನುಮಸಾಗರ, 15ರಂದು ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮದಲ್ಲಿ, 24ರಂದು ಗಂಗಾವತಿ ತಾಲೂಕಿನ ಮುಷ್ಟೂರು ಗ್ರಾಮದಲ್ಲಿ, 25ರಂದು ವಿರುಪಾಪುರ ಗ್ರಾಮದಲ್ಲಿ, 26ರಂದು ಕುಷ್ಟಗಿ ತಾಲೂಕಿನ ಮುದ್ದಲಗುಂದಿ ಗ್ರಾಮದಲ್ಲಿ, 28ರಂದು ಗಂಗಾವತಿಯ ಹಿರೇಜಂತಕಲ್‌ ಗ್ರಾಮದಲ್ಲಿ, ಮೇ 2ರಂದು ಗಂಗಾವತಿಯ ಹಣವಾಳ ಗ್ರಾಮದಲ್ಲಿ, 11ರಂದು ಗಂಗಾವತಿಯ ಹೊಸಅಯೋಧ್ಯ ಮತ್ತು ಶ್ರೀರಾಮನಗರ ಗ್ರಾಮದಲ್ಲಿ, 12ರಂದು ಕೊಪ್ಪಳ ತಾಲೂಕಿನ ಶಿವಪುರ ಗ್ರಾಮದಲ್ಲಿ ಮತ್ತು ಮೇ 14ರಂದು ಅಳವಂಡಿ ಗ್ರಾಮದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಬಾಲ್ಯವಿವಾಹಗಳನ್ನು ತಡೆದಿದೆ. ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next