Advertisement

‘ನಗರದಲ್ಲಿ ಸುಗಮ ಸಂಚಾರಕ್ಕೆ ವೃತ್ತಗಳಿಂದ ಅಡ್ಡಿ’

05:52 AM Feb 06, 2019 | Team Udayavani |

ಮಹಾನಗರ: ನಗರದಲ್ಲಿ ಪ್ರಸ್ತುತ ಪ್ರಮುಖ ಪ್ರದೇಶಗಳಲ್ಲಿ ನಿರ್ಮಿಸಿರುವ ವೃತ್ತಗಳು ವಾಹ ನಗಳ ಸುಗಮ ಸಂಚಾರಕ್ಕೆ ಅಡಚಣೆ ಯಾಗುತ್ತಿರುವುದರಿಂದ ಅವುಗಳನ್ನು ತೆರವುಗೊಳಿಸಲು ಪಾಲಿಕೆ ಕ್ರಮಕೈಗೊಳ್ಳಬೇಕು ಎಂದು ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ ಆಗ್ರಹಿಸಿದರು.

Advertisement

ನಗರದಲ್ಲಿರುವ ಪ್ರಮುಖ ವೃತ್ತಗಳ ವೀಕ್ಷಣೆಗೆ ಮಂಗಳವಾರ ಮಾಧ್ಯಮದವರನ್ನು ಕರೆದುಕೊಂಡು ಹೋಗಿ, ಆ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಿಜಯ ಕುಮಾರ್‌ ಶೆಟ್ಟಿ, ಬೆಂಗಳೂರು ಸಹಿತ ಪ್ರಮುಖ ನಗರಗಳಲ್ಲಿ ಈಗ ವೃತ್ತ ಗಳನ್ನು ತೆರವುಗೊಳಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಹಡ್ಸನ್‌ ವೃತ್ತ, ಸೈಂಟ್ ಜಾನ್‌ ಆಸ್ಪತ್ರೆಯ ಬಳಿಯಿದ್ದ ವೃತ್ತ ಸಹಿತ ಪ್ರಮುಖ ವೃತ್ತಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ನಗರದಲ್ಲಿ ಬಂಟ್ಸ್‌ಹಾಸ್ಟೇಲ್‌, ಸೈಂಟ್ ಆ್ಯಗ್ನೆಸ್‌ ಕಾಲೇಜು, ಬೆಂದೂರು, ಕಂಕನಾಡಿ, ಕದ್ರಿ ಶಿವಬಾಗ್‌ನಲ್ಲಿ ಈಗಾಗಲೇ ಈ ಹಿಂದೆಯಿದ್ದ ವೃತ್ತಗಳನ್ನು ತೆರವುಗೊಳಿಸಲಾಗಿದೆ. ಇಲ್ಲಿ ವೃತ್ತಗಳನ್ನು ತೆರವುಗೊಳಿಸಿದ ಕಾರಣ ಸುಗಮ ಸಂಚಾರಕ್ಕೆ ಅನುಕೂಲವಾಗಿದೆಯೇ ಹೊರತು ಸಮಸ್ಯೆಗಳಾಗಿಲ್ಲ ಎಂದರು.

ಮಾರ್ನಮಿಕಟ್ಟೆ , ನಂದಿಗುಡ್ಡೆ, ಸ್ಟೇಟ್ ಬ್ಯಾಂಕಿನ ಹ್ಯಾಮಿಲ್ಟನ್‌ ವೃತ್ತ, ರಾವ್‌ ಆ್ಯಂಡ್‌ ರಾವ್‌ ವೃತ್ತ, ಎ.ಬಿ. ಶೆಟ್ಟಿ ವೃತ್ತ, ಕದ್ರಿ, ಮಲ್ಲಿಕಟ್ಟೆ ಗಳಲ್ಲಿ ಬೃಹತ್‌ ವೃತ್ತಗಳನ್ನು ನಿರ್ಮಿಸಲಾಗಿದೆ. ಈಗ ಇರುವ ಕೆಲವು ವೃತ್ತಗಳಿಂದ ವಾಹನ ಸಂಚಾ ರಕ್ಕೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಅವುಗಳನ್ನು ನಿರ್ಮಿಸುವಾಗ ಸಂಚಾರ ವ್ಯವಸ್ಥೆಗೆ ಆಗುವ ಸಮಸ್ಯೆಗಳನ್ನು ಪರಿಗಣಿಸಿಲ್ಲ ಎಂದರು.

ಪುರಭವನದ ಬಳಿ ಜನ, ವಾಹನ ದಟ್ಟನೆಯ ಪ್ರದೇಶದಲ್ಲಿ ಕ್ಲಾಕ್‌ ಟವರ್‌ ನಿರ್ಮಿಸಲಾಗುತ್ತಿದೆ. ಇದಕ್ಕೆ ಸ್ಪಾರ್ಟ್‌ಸಿಟಿ ಯೋಜನೆಯ 91 ಲಕ್ಷ ರೂ. ವಿನಿಯೋಗಿಸಲಾಗುತ್ತಿದೆ. ಇದೊಂದು ಸಂಪೂರ್ಣ ಅವೈಜ್ಞಾನಿಕ ಯೋಜನೆಯಾಗಿದೆ. ಹಿಂದೆ ಇಲ್ಲಿದ್ದ ಕ್ಲಾಕ್‌ಟವರ್‌ ಅನ್ನು ಸಂಚಾರ ವ್ಯವಸ್ಥೆಗೆ ಸಮಸ್ಯೆಯಾಗುತ್ತಿದೆ ಎಂಬ ಕಾರಣಕ್ಕಾಗಿ ತೆರವುಗೊಳಿಸಲಾಗಿತ್ತು. ಮತ್ತೆ ಇಲ್ಲಿ ದೊಡ್ಡ ಗಾತ್ರದ ಕ್ಲಾಕ್‌ಟವರ್‌ನ್ನು ನಿರ್ಮಿಸಿ ಸಂಚಾರಕ್ಕೆ ಸಮಸ್ಯೆ ತಂದೊಡ್ಡಲಾಗುತ್ತಿದೆ ಮತ್ತು ‌ ಹಣ ದುಂದುವೆಚ್ಚ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ನಗರದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸುತ್ತಿರುವ ವೃತ್ತಗಳಿಂದ ಆಗುವ ಸಮಸ್ಯೆಗಳ ಬಗ್ಗೆ ತಿಳಿಸಿದ ಅವರು, ಅವುಗಳನ್ನು ತೆರವುಗೊಳಿಸುವಂತೆ ಮಹಾಪಾಲಿಕೆ, ಜಿಲ್ಲಾಧಿಕಾರಿಯವರಿಗೆ ನಾನು ಒಂದು ವರ್ಷಗಳ ಹಿಂದೆಯೇ ಪತ್ರ ಬರೆದಿದ್ದೆ. ಇದೀಗ ಮತ್ತೆ ಮೇಯರ್‌, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಿ ಇವುಗಳನ್ನು ತೆರವುಗೊಳಿಸುವಂತೆ ಒತ್ತಾಯಿಸುತ್ತೇನೆ ಎಂದರು. ಹುಸೈನ್‌ ಕಾಟಿಪಳ್ಳ ಉಪಸ್ಥಿತರಿದ್ದರು.

Advertisement

ವೃತ್ತಗಳ ಹೆಸರು ಉಳಿಸಿಕೊಳ್ಳಿ 
ನಗರದಲ್ಲಿ ಪ್ರಸ್ತುತ ಇರುವ ಕೆಲವು ವೃತ್ತಗಳು ಒಂದೊಂದು ಹೆಸರುಗಳಿಂದ ಗುರುತಿಸಿಕೊಂಡಿದೆ. ಇಲ್ಲಿನ ವೃತ್ತಗಳನ್ನು ಮಾತ್ರ ತೆರವುಗೊಳಿಸಿ ಆ ಹೆಸರುಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು ಮತ್ತು ಅವುಗಳನ್ನು ಆ ಪ್ರದೇಶದಲ್ಲಿ ನಮೂದಿಸಬೇಕು. ಇಲ್ಲಿ ರಂಬ್ಲಿರ್‌, ಹಂಪ್ಸ್‌ಗಳನ್ನು ಹಾಕಿ ಚಿಕ್ಕದಾದ ಪೊಲೀಸ್‌ ಸಿಗ್ನಲ್‌ ಪೋಸ್ಟ್‌ ಇಡಬಹುದು. ಸಂಚಾರ ನಿಯಂತ್ರಣಕ್ಕೆ ಓರ್ವ ಪೊಲೀಸ್‌ ಇದ್ದರೆ ಸಾಕಾಗುತ್ತದೆ ಎಂದು ವಿಜಯ ಕುಮಾರ್‌ ಶೆಟ್ಟಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next