ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗುಡಿಸಲು ಮುಕ್ತ ಕರ್ನಾಟಕದ ಕಲ್ಪನೆಗೆ ಬಿಜೆಪಿ ಕೊಡಲಿಯೇಟು ಹಾಕಿದ್ದು, ಕಾಂಗ್ರೆಸ್ ಸರ್ಕಾರದ ಅವಧಿ ಯಲ್ಲಿನ ಮನೆ ನಿರ್ಮಾಣ ಯೋಜನೆಗೆ ಬಿಜೆಪಿ ಸರ್ಕಾರ ತಡೆಯೊಡ್ಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಗುಡಿಸಲು ಮುಕ್ತ ರಾಜ್ಯ ಕಾರ್ಯಕ್ರಮ ಸಂಪೂರ್ಣ ರದ್ದುಗೊಳಿಸಲಾಗಿದೆ. ರಾಜ್ಯ ಸರ್ಕಾರ ಆಶ್ರಯ ಮನೆ ನಿರ್ಮಾಣಕ್ಕೆ ನಾಲ್ಕು ಹಂತದಲ್ಲಿ ಅನುದಾನ ಬಿಡುಗಡೆ ಮಾಡುತ್ತದೆ.
ಆದರೆ ಕಳೆದ ಎಂಟು ತಿಂಗಳಿಂದ ಯಾವುದೇ ಹಣ ಬಿಡುಗಡೆಯಾಗಿಲ್ಲ. ಕೆಲವು ಕಡೆ ಒಂದೇ ಕಂತು ಮಾತ್ರ ಬಿಡುಗಡೆ ಆಗಿದೆ. ಸರ್ಕಾರ ಬಡವರ ಪಾಲಿನ ಅನುದಾನ ತಡೆದರೆ ಅವರ ಗತಿ ಯೇನು? ಸರ್ಕಾರ ಅನುದಾನ ಬರುತ್ತದೆ ಎಂದು ಮನೆ ಕಟ್ಟಲು ಪ್ರಾರಂಭಿಸಿ ದವರು ಪೂರ್ಣ ಗೊಳಿಸ ಲಾರದೆ ಆತ್ಮಹತ್ಯೆಯಂಥ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಗುಡಿಸಲು ಮುಕ್ತ ರಾಜ್ಯದ ಕಲ್ಪನೆ ನಮ್ಮದಾಗಿತ್ತು. ಪಾರದರ್ಶಕವಾಗಿ ಯೋಜನೆ ಯನ್ನ ಅನುಷ್ಠಾನಗೊಳಿಸಿದ್ದೆವು. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಅವಧಿಯಲ್ಲಿ ಬಸವ, ಅಂಬೇಡ್ಕರ್, ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ 16,28,564 ಮನೆಗಳ ನಿರ್ಮಾಣ ಗುರಿ ಹೊಂದಲಾಗಿತ್ತು. 13,57,11 ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಅವುಗಳಲ್ಲಿ 1,26,741 ಮನೆ ಬ್ಲಾಕ್ ಮಾಡಲಾಗಿದೆ.
3,59,919 ಮನೆಗಳ ಕಾಮಗಾರಿ ಪ್ರಗತಿಯಲ್ಲಿವೆ. 3,60,412 ಮನೆಗಳಿಗೆ ಅವಕಾಶ ನಿರಾಕರಿಸಲಾಗಿದೆ. ಸಾಮಾನ್ಯ ವರ್ಗದ ವಸತಿ ರಹಿತರಿಗೆ1.20 ಲಕ್ಷ. ಪರಿಶಿಷ್ಟರಿಗೆ 1.70 ಲಕ್ಷ ರೂ. ಅನು ದಾನ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಮಂಜೂರಾಗಿದ್ದ ಮನೆಗಳಿಗೆ ಅನುದಾನವನ್ನೂ ಬಿಡುಗಡೆ ಮಾಡಿಲ್ಲ ಎಂದು ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು. ಅನುದಾನ ಬಿಡುಗಡೆ ಮಾಡಿ ಸ್ಥಗಿತಗೊಂಡಿರುವ ಯೋಜನೆಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.