Advertisement

ಬ್ಯಾರಿಕೇಡ್‌ ಇಟ್ಟರೂ ಡೋಂಟ್‌ ಕೇರ್‌!

07:55 AM Jun 12, 2018 | Team Udayavani |

ಉಡುಪಿ: ನಗರದ ಹಳೆ ತಾಲೂಕು ಕಚೇರಿ ಎದುರಿನಲ್ಲಿ ಕಿತ್ತು ಹಾಕಲಾದ ಸುಮಾರು 20 ಅಡಿ ದೂರದ ಶಾಶ್ವತ ಡಿವೈಡರ್‌ ನಿರ್ಮಾಣಗೊಳ್ಳದೆ ಅಪಾಯ ಎದುರಾಗಿದೆ.

Advertisement

ಸಾರ್ವಜನಿಕರು, ದ್ವಿಚಕ್ರವಾಹನ ಸವಾರರು ಡಿವೈಡರ್‌ ಮೇಲೆ ಸಂಚರಿ ಸುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಎನ್ನುವ ಬಗ್ಗೆ ಉದಯವಾಣಿ ವರದಿ ಮಾಡಿತ್ತು. ಸಮಸ್ಯೆಯನ್ನು ಗಮನಿಸಿದ ನಗರಸಭೆ ಡಿವೈಡರ್‌ ಮಧ್ಯೆ ವಾಹನ, ಜನಸಂಚರಿಸದಂತೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ ತಾತ್ಕಾಲಿಕ ಪರಿಹಾರ ಒದಗಿಸಿದೆ.

ಡಿವೈಡರ್‌ ರಿಪೇರಿ ಕಾಮಗಾರಿಗೆ ನಗರಸಭೆಯಿಂದ 60 ಸಾವಿರ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಟೆಂಡರ್‌ ಕರೆದು ಶೀಘ್ರವಾಗಿ ಕಾಮಗಾರಿ ಆರಂಭಿಸಲಾಗುವುದೆಂದು ನಗರಸಭೆ ಪೌರಾಯುಕ್ತ ಜಿ.ಸಿ. ಜನಾರ್ದನ್‌ ತಿಳಿಸಿದ್ದಾರೆ.

ಇದೀಗ ಈ ಸ್ಥಳದಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದ್ದರೂ ಕೆಲವರು ಬ್ಯಾರಿಕೇಡ್‌ ಸರಿಸಿ ಡಿವೈಡರ್‌ ಮೇಲೆಯೇ ಸಂಚರಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಕ್ರಮಕೈಗೊಂಡು ಮುಂದಾಗ ಬಹುದಾದ ಅನಾಹುತ ತಪ್ಪಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next