Advertisement

ಮಚ್ಚಿನ ಶಾಲೆ ರಸ್ತೆ: ಬ್ಯಾರಿಕೇಡ್‌ ಅಳವಡಿಕೆ

02:35 AM Aug 04, 2017 | Karthik A |

ಮಡಂತ್ಯಾರು: ಮಚ್ಚಿನ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಪಕ್ಕದ ರಸ್ತೆಯಲ್ಲಿ ಬ್ಯಾರಿಕೇಡ್‌ ಅಳವಡಿಸುವ ಮೂಲಕ ಮಕ್ಕಳ ಸುರಕ್ಷತೆಗಾಗಿ ಪೊಲೀಸ್‌ ಇಲಾಖೆ ತಕ್ಕಮಟ್ಟಿನ ಕ್ರಮ ಕೈಗೊಂಡಿದೆ. ಮಕ್ಕಳಿಗೆ ರಸ್ತೆದಾಟಲು ಸುರಕ್ಷತಾ ಕ್ರಮ ಇಲ್ಲದೆ ಅನಾಹುತಕ್ಕೆ ಕಾರಣವಾಗುತಿತ್ತು. ಸೂಚನಾ ಫಲಕ ಕೂಡ ಇಲ್ಲವಾಗಿದ್ದು ಶಾಲಾ ವಠಾರದಲ್ಲಿ ವಾಹನ ಸಂಚಾರ ನಿಯಂತ್ರಣವಾಗುತ್ತಿರಲಿಲ್ಲ. ಹಲವು ಭಾರಿ ಅನಾಹುತ ಸಂಭವಿಸಿದ್ದು ಹೆತ್ತವರಿಗೆ ಚಿಂತೆಯಾಗಿತ್ತು. ಈ ಕುರಿತು ‘ಉದಯವಾಣಿ’ಯಲ್ಲಿ ವರದಿ ಪ್ರಕಟವಾಗಿದ್ದು ಪುಂಜಾಲಕಟ್ಟೆ ಪೊಲೀಸರು ಬ್ಯಾರಿಕೇಡ್‌ ಅಳವಡಿಸುವ ಮೂಲಕ ವರದಿಗೆ ಸ್ಪಂದಿಸಿದ್ದಾರೆ. ಬೆಳ್ತಂಗಡಿ ಲಯನ್ಸ್‌ ಕ್ಲಬ್‌ ವತಿಯಿಂದ ಸೂಚನಾ ಫಲಕ ನೀಡುವುದಾಗಿ ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ಧರಣೇಂದ್ರ ಜೈನ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next