Advertisement

ಪಾಕ್‌: Red-light ಏರಿಯಕ್ಕೆ ಹೋಗಬಿಡದ್ದಕ್ಕೆ ಚೀನೀ ಕಾರ್ಮಿಕರ ಅಕ್ರೋಶ

11:54 AM Apr 06, 2018 | udayavani editorial |

ಇಸ್ಲಾಮಾಬಾದ್‌ : ಪಾಕಿಸ್ಥಾನದಲ್ಲಿ ಚೀನದ ಕೃಪೆಯಲ್ಲಿ ನಡೆಯುತ್ತಿರುವ ಹಲವು ಅಭಿವೃದ್ದಿ ಕಾಮಗಾರಿಗಳಲ್ಲಿ ದುಡಿಯುತ್ತಿರುವ ಚೀನೀ ಇಂಜಿನಿಯರ್‌ಗಳು ಮತ್ತು ಕಾರ್ಮಿಕರು ತಮ್ಮನ್ನು ಕಾಮಾಟಿಪುರದಂತಹ  ರೆಡ್‌ ಲೈಟ್‌ ಏರಿಯಾಗಳಿಗೆ ಹೋಗದಂತೆ ತಡೆದ ಪಾಕ್‌ ಭದ್ರತಾ ಸಿಬಂದಿಗಳ ವಿರುದ್ಧ  ಭೀಕರ ಮಾರಾಮಾರಿ ನಡೆಸಿದ ಘಟನೆ ವರದಿಯಾಗಿದೆ. 

Advertisement

ಪಾಕಿಸ್ಥಾನದಲ್ಲಿ  ಅಭಿವೃದ್ಧಿ ಕಾಮಗಾರಿ ನಿರತ ಚೀನೀ ಇಂಜಿನಿಯರ್‌ಗಳು ಮತ್ತು ಕಾರ್ಮಿಕರಿಗೆ ಜೀವ ಬೆದರಿಕೆ ಇರುವುದರಿಂದ ಅವರ ರಕ್ಷಣೆ ಮತ್ತು ಸುರಕ್ಷೆಗಾಗಿ ಪಾಕ್‌ ಸರಾರ ವಿಶೇಷ  ಭದ್ರತಾ ಸಿಬಂದಿಗಳನ್ನು ನಿಯೋಜಿಸಿದೆ. ಇವರ ಕಣ್ಗಾವಲು ಇಲ್ಲದೆ ಚೀನಿ ಕಾರ್ಮಿಕರು ಎಲ್ಲಿಗೂ ಹೋಗುವಂತಿಲ್ಲ. 

ಆದರೆ ತಮ್ಮ ಕಾಮಾಸಕ್ತಿಯನ್ನು ಈಡೇರಿಸಿಕೊಳ್ಳಲು ರೆಡ್‌ಲೈಟ್‌ ಜಿಲ್ಲೆಗಳಿಗೆ ಭದ್ರತೆ ಇಲ್ಲದೆ ಮುಕ್ತವಾಗಿ ಹೋಗಲು ಬಯಸಿದ ಚೀನೀ ಕಾರ್ಮಿಕರನ್ನು ಭದ್ರತಾ ಸಿಬಂದಿಗಳು ತಡೆದಾಗ ಅಕ್ರೋಶಗೊಂಡ ಅವರು ಭದ್ರತಾ ಸಿಬಂದಿಗಳೊಂದಿಗೆ ಮಾರಾಮಾರಿ, ಕಾಳಗ ನಡೆಸಿದರು.

ಕೋಪೋದ್ರಿಕ್ತ ಚೀನೀ ಕಾರ್ಮಿಕರು ಪಾಕ್‌ ಭದ್ರತಾ ವಾಹನವನ್ನು ರಸ್ತೆಯಲ್ಲೇ ತಡೆದು ನಿಲ್ಲಿಸಿ ಅದನ್ನು ಏರಿ ಕುಳಿತರಲ್ಲದೆ ಭದ್ರತಾ ಸಿಬಂದಿ ಮೇಲೆ ಕುರ್ಚಿ ಎಸೆದು ಸಿಬಂದಿಗಳನ್ನು ಗಾಯಗೊಳಿಸಿದರು. 

ಕಳೆದ ಮಂಗಳವಾರ ಸ್ಫೋಟಗೊಂಡ ಈ ಮಾರಾಮಾರಿಯನ್ನು ಪಾಕ್‌ ಭದ್ರತಾ ಸಿಬಂದಿಗಳು ಹೇಗೋ ನಿಯಂತ್ರಣಕ್ಕೆ ತಂದರು. ಆದರೆ ಒಂದು ದಿನದ ತರುವಾಯ ಮತ್ತೆ ಜಗಳ ತಲೆದೋರಿ ರಸ್ತೆ ಕಾಮಗಾರಿ ನಡೆಯುತ್ತಿರುವ ಬಹಾಲವಲಪುರ – ಫೈಸಲಾಬಾದ ಹೆದ್ದಾರಿಯಲ್ಲಿ ಕ್ಷೋಭೆ ಏರ್ಪಟ್ಟಿತು. ಚೀನೀ ಕಾರ್ಮಿಕರು ರಸ್ತೆ ನಿಮಾಣ ಕಾಮಗಾರಿಯ ದೊಡ್ಡ ದೊಡ್ಡ ವಾಹನಗಳನ್ನು ರಸ್ತೆಯ ನಡುವೆಯೇ ಇರಿಸಿ ತಡೆ ನಿರ್ಮಿಸಿದರು. ಪಾಕ್‌ ಭದ್ರತಾ ಸಿಬಂದಿಗಳ ವಸತಿ ಸಮೂಹದ ವಿದ್ಯುತ್‌ ಸಂಪರ್ಕವನ್ನು ಕಡಿದು ಹಾಕಿದರು. 

Advertisement

ಇದಾದ ಬಳಿಕ ಚೀನೀ ಇಂಜಿನಿಯರ್‌ಗಳು ಪಾಕ್‌ ಸರಕಾರಕ್ಕೆ ಪತ್ರ ಬರೆದು “ನಿಮ್ಮ ಭದ್ರತಾ ಸಿಬಂದಿಗಳು ನಮ್ಮ ಮೇಲೆ ಹಲ್ಲೆ ಮಾಡಿವೆ’ ಎಂದು ದೂರಿದರು.

ಇಷ್ಟಾದರೂ ಚೀನ ಕೃಪೆಯಲ್ಲಿರುವ ಪಾಕ್‌ ಸರಕಾರ ಈ ಘಟನೆಯ ಬಗ್ಗೆ ಈ ವರೆಗೂ ತುಟಿ ಬಿಚ್ಚಿಲ್ಲ !

Advertisement

Udayavani is now on Telegram. Click here to join our channel and stay updated with the latest news.

Next